ಪುನೀತ್ ರಾಜಕುಮಾರ್ ಕಾಂತಾರ ಚಿತ್ರವನ್ನು ವೀಕ್ಷಿಸಿ ಹೇಳಿದ್ದೇನು? ಎರಡು ವರ್ಷ ಮುಂಚೆಯೇ ಪುನೀತ್ ರಾಜಕುಮಾರ್ ಭವಿಷ್ಯ ನುಡಿದಿದ್ದರು.


ಚಿಕ್ಕಂದಿನಿಂದಲೇ ಬಾಲ್ಯ ನಟನಾಗಿ ಸಿನಿಮಾರಂಗವನ್ನು ಪ್ರವೇಶಿಸಿ, ಚಿತ್ರರಂಗದಲ್ಲಿಯೇ ಬದುಕು ಕಂಡು ಹೆಸರು, ಸಂಪತ್ತು, ಅಭಿಮಾನಿಗಳನ್ನು ಗಳಿಸಿ, ಕೈಲಾದಷ್ಟು ಜನರಿಗೆ ಬದುಕು ಕಟ್ಟಿಕೊಟ್ಟವರೆಂದರೆ, ದೊಡ್ಮನೆಯ ಯುವರತ್ನ, ಪುನೀತ್ ರಾಜಕುಮಾರ್. ಮೋಡಿ ಮಾಡಿ ಭಾವನಾ ಲೋಕಕ್ಕೆ ನಮ್ಮನ್ನು ಕರೆದೊಯ್ಯಲು ಇವರ ಚಿತ್ರಗಳಿಗಷ್ಟೇ ಅಲ್ಲ; ಭಾವಚಿತ್ರಗಳಿಗೂ ಶಕ್ತಿ ಇದೆ.

ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳನ್ನು ದೇವರಂತೆ ನೋಡಿದ್ದರೆ, ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನೇ ದೇವರೆಂದು ಭಾವಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಎಲ್ಲಿಯೂ, ಯಾರೊಂದಿಗೂ ಹಂಚಿಕೊಳ್ಳದೆ ಸದ್ದಿಲ್ಲದೆ ಮಾಡಿದ ಹಲವಾರು ಸಹಾಯಗಳನ್ನು ಅಭಿಮಾನಿಗಳು ನೆನೆದು, ಸಮಸ್ತ ಕನ್ನಡ ಜನತೆಗೆ ಒಂದೊಂದಾಗಿ ಹೇಳುತ್ತಿದ್ದಾರೆ. ಇದೀಗ ಪುನೀತ್ ಅವರ ಅಭಿಮಾನಿಗಳು ಅವರು ಕಾಂತಾರ ಚಿತ್ರವನ್ನು ವೀಕ್ಷಿಸಿದ್ದರೆ ಹೇಗೆ ಅಭಿಪ್ರಾಯವನ್ನು ತಮ್ಮ ಮಾತುಗಳ ಮೂಲಕ ಹೊರ ಹಾಕುತ್ತಿದ್ದರು ಎಂಬ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

‘ರಾಜರತ್ನ ಅಪ್ಪು ಫ್ಯಾನ್ಸ್ ಕ್ಲಬ್’ ನಿಂದ ಟ್ವಿಟರ್ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. ಕನ್ನಡದ ಹೆಮ್ಮೆಯ ಚಿತ್ರ ಕಾಂತಾರವು ಕರಾವಳಿ ಜನರ ಆಚರಣೆ, ನಂಬಿಕೆಗಳೊಂದಿಗೆ ಮೂಡಿಬಂದು ದೇಶ ವಿದೇಶಗಳಲ್ಲಿಯೂ ಧೂಳೆಬ್ಬಿಸಿ ಭಾರತದ ಅತಿ ಹೆಚ್ಚು ಗಳಿಕೆಯ ಟಾಪ್ ಸೆವೆನ್ ಚಿತ್ರಗಳಲ್ಲಿ ತನ್ನ ಹೆಸರನ್ನು ಕೆತ್ತಿಸಿಕೊಂಡು, ಭರ್ಜರಿ ಪ್ರದರ್ಶನ ನೀಡುತ್ತಾ ದಾಖಲೆ ಬರೆದಿದೆ.

ಸಿನಿ ಪ್ರಿಯರೊಂದಿಗೆ, ಸಿನಿ ಕಲಾವಿದರು ಕೂಡ ಕಾಂತಾರವನ್ನು ಮೆಚ್ಚಿ ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಕಾಂತಾರವನ್ನು ವೀಕ್ಷಿಸಿದ್ದರೆ ಅವರು ಹೇಗೆ ಹೊಗಳುತ್ತಿದ್ದರು ಎಂಬ ವಿಡಿಯೋ ವೈರಲ್ ಆಗಿದೆ.

ಪುನೀತ್ ರಾಜಕುಮಾರ್ ಕಾಂತಾರ ಸಿನೆಮಾ

“ಕಾಂತರಾ ಸಿನಿಮಾ ರಿಲೀಸ್ ಆಗಿ ಸುಮಾರು ನಾಲ್ಕೈದು ವಾರವಾಯ್ತು. ನನಗೆ ನೋಡಲು ಆಗಿರಲಿಲ್ಲ. ಮೊನ್ನೆ ತಾನೆ ನಾನು ಚಿತ್ರವನ್ನು ವೀಕ್ಷಿಸಿದೆ. ಸಿನಿಮಾ ನೋಡಿದ ಬಳಿಕ ಎಷ್ಟು ಖುಷಿಯಾಯಿತು? ಯಾವುದರ ಬಗ್ಗೆ ಹೇಗೆ ಹೇಳೋದು? ಎಂದು ಅಂದುಕೊಂಡರೆ ಉದ್ದವಾಗೊಂದು ಲಿಸ್ಟ್ ಇದೆ. ಮೊದಲ್ನೇದಾಗಿ ಸಿನಿಮಾವನ್ನು ಶೂಟ್ ಮಾಡಿರುವಂತಹ ರೀತಿ, ಎಲ್ಲಾ ಪಾತ್ರಗಳನ್ನು ಸರಿಯಾಗಿ ಸೆರೆ ಹಿಡಿಯಲಾಗಿದೆ. ಇನ್ನು ಕನ್ನಡ ಭಾಷೆ. ಚಿತ್ರದಲ್ಲಿ ಹೊಗಳಲು ಬಹಳಷ್ಟು ಇದೆ. ರಿಷಬ್ ಗ್ರೇಟ್ ಜಾಬ್. ಪಿಚ್ಚರ್ ನೋಡಿ ತುಂಬಾ ಖುಷಿಯಾಯ್ತು. ತುಂಬಾ ತುಂಬಾ ಹೆಮ್ಮೆ ಅನಿಸ್ತು. ಕಾಂತರಾ ಸಿನಿಮಾವನ್ನು ಈವರೆಗೆ ನೋಡದೆ ಇರೋರು ಖಂಡಿತವಾಗ್ಲೂ ಹೋಗಿ ಸಿನಿಮಾ ನೋಡ್ಬೇಕು. ನಾನು ಕಾಂತರಾ ಸಿನಿಮಾ ನೋಡಿದೀನಿ. ಮತ್ತೊಮ್ಮೆ ನೋಡ್ತೀನಿ. ನೋಡ್ತಾನೆ ಇರಬೇಕು ಅಂತ ಅನ್ಸುತ್ತೆ. ಹಾಗಾಗಿ ಕನ್ನಡದಲ್ಲಿ ಮೂಡಿಬಂದ ಒಂದು ಅದ್ಭುತ ಸಿನಿಮಾ…

ಸಿನಿಮಾ ಮಾಡಿರುವಂತ ಟೆಕ್ನಿಷಿಯನ್, ಮ್ಯೂಸಿಕ್, ಸಿನಿಮಾಟೋಗ್ರಾಫಿ ಇರಬಹುದು, ಸ್ಕ್ರೀನ್ ಪ್ಲೇ ಇರಬಹುದು, ಡೈಲಾಗ್ಸ್ ಎಲ್ಲವೂ ಅಲ್ಟಿಮೇಟ್. ಹ್ಯಾಟ್ಸ್ ಆಫ್ ರಿಷಬ್. ಕೀಪ್ ಡುಯಿಂಗ್ ಮೂವೀಸ್ ಲೈಕ್ ದಿಸ್. ತುಂಬಾ ಒಳ್ಳೆ ಸಿನಿಮಾ” ಎಂದು ಪುನೀತ್ ಅವರೇ ಹೇಳಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೆ ಶೀರ್ಷಿಕೆಯಾಗಿ ‘ನಮ್ಮ ಅಪ್ಪು ಅವ್ರು ಕಾಂತಾರ ಚಿತ್ರ ನೋಡಿದ್ರೆ ಹೀಗೆ ವಿಮರ್ಶೆ ಮಾಡಿರವ್ರು ಅಲ್ವಾ’ ಎಂದು ಬರೆದುಕೊಂಡಿದ್ದಾರೆ.

ಪುನೀತ್ ರಾಜಕುಮಾರ್ ಅವರು ನಮ್ಮ ಬಳಿ ಇದ್ದಿದ್ದರೆ ಇಂದು ಕಾಂತಾರ ಚಿತ್ರದ ಯಶಸ್ಸನ್ನು ನೋಡಿ ಹಾಡಿ ಹೊಗಳುತ್ತಿದ್ದದ್ದು ಖಚಿತ.. ಅಲ್ಲದೆ ಪುನೀತ್ ಅವರು ನಮ್ಮ ಜೊತೆಗಿದ್ದರೆ ಅವರೇ ಕಾಂತಾರ-2 ಚಿತ್ರದ ಹೀರೋ ಕೂಡ ಆಗುವ ಅವಕಾಶ ಇತ್ತು. ಇದನ್ನೆಲ್ಲಾ ಕಣ್ತುಂಬಿಕೊಳ್ಳುವ ಭಾಗ್ಯ ನಮಗಿಲ್ಲ ಅಷ್ಟೇ. ಪುನೀತ್ ಅವರಿಗೆ ಇಂತಹ ಚಿತ್ರಗಳನ್ನು ಮಾಡಬೇಕೆಂದು ತುಂಬಾ ದಿನಗಳ ಆಸೆ ಇತ್ತಂತೆ. ಆದರೆ ಅವರಿಗೆ ನಟಿಸಲು ಸಾಧ್ಯವಾಗಲಿಲ್ಲ. ಮುಂದೊಂದು ದಿನ ಇಂತಹ ಚಿತ್ರ ಮಾಡುತ್ತೇನೆ ಎಂದು ರಿಶಬ್ ಶೆಟ್ಟಿಗೆ ಪುನೀತ್ ಹೇಳಿದ್ದರು ಎಂದು ಹೇಳಿದ್ದರು ಆದರೆ ಬೇರೆ ಸಿನಿಮಾಗಳು ಇದ್ದ ಕಾರಣದಿಂದ.. kantara ಚಿತ್ರದಲ್ಲಿ ಅಪ್ಪು ಅವರು ನಟಿಸೋಕೆ ಆಗಲಿಲ್ಲ


Leave A Reply

Your email address will not be published.