ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಪುಟ್ಟಬೊಮ್ಮ ಹಾಡಿನ ಖ್ಯಾತಿಯ ಪೂಜಾ ಹೆಗಡೆ ಅವರು ತೆಲುಗು, ತಮಿಳು, ಮಲಯಾಳಿ ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ. ಅವರ ಫ್ಯಾಮಿಲಿ, ಸಿನಿ ಜರ್ನಿ ಹಾಗೂ ಅವರ ವರ್ಕೌಟ್ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಪೂಜಾ ಹೆಗಡೆ ಅವರು ತೆಲುಗು, ತಮಿಳು, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಸಖತ್ ಫೇಮಸ್ ಆಗಿದ್ದಾರೆ. ಇವರು ಮೂಲತಃ ಕರ್ನಾಟಕದ ಉಡುಪಿಯವರು. ಇವರು ಅಕ್ಟೋಬರ್ 13,1990 ರಂದು ಮುಂಬೈನಲ್ಲಿ ಜನಿಸಿದರು. ಇವರು ಮೊಡೆಲ್ ಹಾಗೂ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ನೋಡಲು ಸುಂದರವಾಗಿದ್ದು ಉತ್ತಮವಾಗಿ ನಟನೆ ಮಾಡುತ್ತಾರೆ. ಇವರು ಹಿಂದೂ ಧರ್ಮದವರಾಗಿದ್ದಾರೆ. ಇವರ ತಂದೆಯ ಹೆಸರು ಮಂಜುನಾಥ ಹೆಗಡೆ ಇವರು ಒಬ್ಬ ಸಾಮಾನ್ಯ ವ್ಯಾಪಾರಿ, ತಾಯಿಯ ಹೆಸರು ಲತಾ ಹೆಗಡೆ. ಇವರಿಗೆ ಒಬ್ಬ ತಮ್ಮನಿದ್ದು ಅವರ ಹೆಸರು ರಿಷಬ್ ಹೆಗಡೆ. ಪೂಜಾ ಅವರು ತಮ್ಮ ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದ್ದಾರೆ, ಇವರು ಎಂಕಾಮ ಓದಿದ್ದಾರೆ. ಇವರು ಕಾಲೇಜಿನಲ್ಲಿ ನಡೆಯುವ ಎಲ್ಲಾ ರೀತಿಯ ನೃತ್ಯ ಸ್ಪರ್ಧೆಗಳಲ್ಲಿ, ಫ್ಯಾಶನ್ ಶೋಗಳಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ಕಾಲೇಜಿನ ನೃತ್ಯ ಸ್ಪರ್ಧೆಯಲ್ಲಿ ಪೂಜಾ ಅವರು ಡ್ಯಾನ್ಸ್ ಮಾಡುತ್ತಿರುವುದನ್ನು ಅಲ್ಲಿಗೆ ಗೆಸ್ಟ್ ಆಗಿ ಬಂದ ಡೈರೆಕ್ಟರ್ ನೋಡಿ ಪೂಜಾ ಅವರ ಬಳಿ ನಿಮಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿಯಿದೆಯೇ ಎಂದು ಕೇಳುತ್ತಾರೆ ಇದಕ್ಕೆ ಪೂಜಾ ಅವರು ಒಪ್ಪಿಕೊಳ್ಳುತ್ತಾರೆ. ತಮಿಳಿನ ಒಂದು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ. ಡ್ಯಾನ್ಸ್ ಮಾಡುವುದು, ಟ್ರಾವೆಲ್ ಮಾಡುವುದು, ಹಾಡುವುದು, ಓದುವುದು ಇವರ ಮೆಚ್ಚಿನ ಹವ್ಯಾಸಗಳಾಗಿವೆ. ಪೂಜಾ ಅವರು 2010 ರ ಮಿಸ್ ಯೂನಿವರ್ಸ್ ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದಾರೆ. ಪೂಜಾ ಹೆಗಡೆ ಅವರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇವರು ಹೆಚ್ಚಿನ ಪ್ರಮಾಣದಲ್ಲಿ ಸಂಭಾವನೆ ಪಡೆಯುತ್ತಿದ್ದು ಇವರ ಬಳಿ ಸಾಕಷ್ಟು ಉತ್ತಮ ಕಂಪನಿಯ ಕಾರುಗಳಿವೆ.

ಬಿರಿಯಾನಿ, ಪಿಜ್ಜಾ ಪೂಜಾ ಅವರ ಮೆಚ್ಚಿನ ತಿಂಡಿ. ಪೂಜಾ ಅವರ ಮೆಚ್ಚಿನ ನಟ ಹೃತಿಕ್ ರೋಷನ್, ಅಮೀರ್ ಖಾನ್, ಮೆಚ್ಚಿನ ನಟಿ ಮಾಧುರಿ ದೀಕ್ಷಿತ್, ಮೆಚ್ಚಿನ ಸಂಗೀತಗಾರರು ಎಆರ್. ರೆಹಮಾನ್ ಅವರ ಮೆಚ್ಚಿನ ಆಟ ಕ್ರಿಕೆಟ್ ಆಗಿದೆ. ಇವರ ಸಂಭಾವನೆ 50-60 ಲಕ್ಷ ರೂಪಾಯಿ. ಇವರು 15 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲಾ ವೈಕುಂಠಪುರಮಲೂ ಸಿನಿಮಾದಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ಹಾಗೂ ನಾಯಕಿಯಾಗಿ ಪೂಜಾ ಹೆಗಡೆ ಅವರು ನಟಿಸಿ ಮನೆ ಮಾತಾಗಿದ್ದಾರೆ. ಈ ಸಿನಿಮಾದ ಪುಟ್ಟಬೊಮ್ಮ ಹಾಡನ್ನು ಇಷ್ಟಪಡದವರು ಇಲ್ಲ. ಪೂಜಾ ಅವರು ಫಿಲಂ ಫೇರ್ ಅವಾರ್ಡ್ ಗೆ ಸೆಲೆಕ್ಟ್ ಆಗಿದ್ದಾರೆ. ಬೆಸ್ಟ್ ಆಕ್ಟ್ರೆಸ್ ಇನ್ ತೆಲುಗು ಪ್ರಶಸ್ತಿ ಲಭಿಸಿದೆ. ಪೂಜಾ ಅವರು ಪ್ರತಿದಿನ ಬೆಳಗ್ಗೆ ವ್ಯಾಯಾಮ ಮಾಡುತ್ತಾರೆ, ಹಗ್ಗ ತಾಲೀಮು ನಡೆಸುತ್ತಾರೆ. ಅವರ ವರ್ಕೌಟ್ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೂಜಾ ಹೆಗಡೆ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಹೆಚ್ಚಿನ ಜನಪ್ರಿಯರಾಗಲಿ ಎಂದು ಆಶಿಸೋಣ.

By admin

Leave a Reply

Your email address will not be published.