ಕಬ್ಬಿಣಾಂಶ ಭರಿತ ಅನಾನಸ್ ತಿನ್ನುವುದರಿಂದ ಎಷ್ಟೊಂದು ಲಾಭವಿದೆ ಗೊತ್ತೇ

ಸಾಮಾನ್ಯವಾಗಿ ಬಹಳಷ್ಟು ಜನ ಈ ಅನಾನಸ್ ಸೇವನೆ ಮಾಡಿರುತ್ತಾರೆ, ಆದರೆ ಇದರಲ್ಲಿ ಇರುವಂತ ಆರೋಗ್ಯಕರ ಪ್ರಯೋಜನಗಳು ಯಾವುವು ಅನ್ನೋದನ್ನ ತಿಳಿದುಕೊಂಡಿರೋದಿಲ್ಲ ಇದರಲ್ಲಿರುವಂತ ಆರೋಗ್ಯದ ರಹಸ್ಯವನ್ನು ಈ ಮೂಲಕ ತಿಳಿದುಕೊಳ್ಳೋಣ. ಅನಾನಸ್ ಇದನ್ನು ಪೈನಾಪಲ್ ಎಂಬುದಾಗಿ ಸಹ ಕರೆಯಲಾಗುತ್ತದೆ. ಪೈನಾಪಲ್ ಎಷ್ಟೆಲ್ಲ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ನೋಡುವುದಾದರೆ, ಅನಾನಸ್ ಹಣ್ಣಿನ ರಸದಲ್ಲಿ ಹಾಗು ಗಿಡದಲ್ಲಿರುವ ಬ್ರೊಮೆಲಿನ್ ಎಂಬ ಕಿಣ್ವವನ್ನು ಆದುನಿಕ ವ್ಯದ್ಯಕೀಯ ಪದ್ದತಿಯಲ್ಲಿ ಪಚನ ಶಕ್ತಿ ಹೆಚ್ಚಿಸುವ ಕಿಣ್ವವಾಗಿ ಉಪಯೋಗಿಸುತ್ತಾರೆ.

ಇನ್ನು ಈ ಹಣ್ಣಿನ ರಸವನ್ನು ಅಂದರೆ ಜ್ಯುಸ್ ಸೇವನೆ ಮಾಡುವುದರಿಂದ ಮೂತ್ರ ಉರಿ ಹಾಗು ಮೂತ್ರ ತಡೆ ನಿವಾರಿಸಬಹುದು, ಅನಾನಸ್ ಜ್ಯುಸ್ ಅನ್ನು ಹೆರಿಗೆಗೆ ಮುಂಚೆ ಸೇವಿಸಿದರೆ ಹೆರಿಗೆ ಸುಲಭವಾಗುತ್ತದೆ, ಈ ಹಣ್ಣು ಉಷ್ಣ ಗುಣವನ್ನು ಹೊಂದಿದ್ದು ಅಧಿಕವಾಗಿ ಸೇವಿಸಿದರೆ ಸ್ತ್ರೀಯರಲ್ಲಿ ಮಾಸಿಕ ಸ್ರಾವ ಬೇಗನೆ ಆಗುತ್ತದೆ. ಇನ್ನು ಗರ್ಭಿಣಿ ಸ್ತ್ರೀಯರು ಅನಾನಸ್ ತಿನ್ನುವುದು ಒಳ್ಳೆಯದು.

ಗುಹ್ಯ ರೋಗಗಳ ಚಿಕಿತ್ಸೆಯಲ್ಲಿ ಕಾಯಿ ಅನಾನಸಿನ ಶೋಧಿಸಿದ ರಸವನ್ನು ಜೇನಿನೊಂದಿಗೆ ಬಳಸುತ್ತಾರೆ, ಇದರ ಬೇರಿನ ಪುಡಿಯನ್ನು ನೀರಿನೊಂದಿಗೆ ಕಲಸಿ ಲೇಪದಂತೆ ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ನೋವು ಮತ್ತು ಊಟ ಕಡಿಮೆಯಾಗುತ್ತದೆ. ಬ್ರಿನಾ ಕಷಾಯವನ್ನು ಸೇವಿಸಿದರೆ ಕೈ ಕಾಲುಗಳಲ್ಲಿನ ಊತ ಕಡಿಮೆಯಾಗುತ್ತದೆ. ಅನಾನಸು ಎಳೆಯ ರಸವು ಜಂತು ಹುಳುಗಳನ್ನು ನಾಶ ಪಡಿಸುತ್ತದೆ. ಹೀಗೆ ಹತ್ತಾರು ಉಪಯೋಗಗಳನ್ನು ಅನಾನಸ್ ಪೈನಾಪಲ್ ಹಣ್ಣಿನಿಂದ ಪಡೆದುಕೊಳ್ಳಬಹುದಾಗಿದೆ.

Leave a Comment

error: Content is protected !!