ಪಪ್ಪಾಯ ಸೇವನೆಯಿಂದ ಶರೀರಕ್ಕೆ ಎಷ್ಟೊಂದು ಲಾಭಗಳಿವೆ!

ನಮಗೆ ಮನೆಯ ಬಳಿಯೇ ಕಡಿಮೆ ಬೆಲೆಯಲ್ಲಿ ಸಿಗುವ ಪಪ್ಪಾಯ ಹಣ್ಣು ಇದು ಪೋಷಕಾಂಶಗಳ ಆಗರ. ದೀಪದ ಬುಡದಲ್ಲಿ ಕತ್ತಲು ಎಂಬ ಮಾತಿನಂತೆಯೇ, ನಾವು ಯಾವತ್ತೂ ಸಹ ನಮ್ಮ ಸುತ್ತ ಮುತ್ತಲು ಸಿಗುವ ನೈಸರ್ಗಿಕ ವಸ್ತುಗಳ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಅದೇ ವಿದೇಶಗಳಿಂದ ಬರುವ ದುಬಾರಿ ಹಣ್ಣುಗಳು ವಸ್ತುಗಳು ಇವು ಬಹು ಬೇಗ ಮನಸ್ಸಿಗೆ ಹಿಡಿಸುತ್ತದೆ ಕೊಂದುಕೊಳ್ಳುತ್ತೆವೆ. ಆದರೆ ಪ್ರಕೃತಿ ಮಾನವರಿಗಿಂತ ಎಷ್ಟು ಸೊಗಸಾಗಿದೆ ಎಂದರೆ, ನಾವು ನಮ್ಮ ಮನೆಯ ಅಂಗಳದಲ್ಲಿ ಒಂದು ಪಪ್ಪಾಯ ಹಣ್ಣು ಮತ್ತು ಒಂದು ಸೇಬು ಹಣ್ಣನ್ನು ಇಟ್ಟರೆ ಪ್ರಕೃತಿಯ ಮಡಿಲಿನ ಪಕ್ಷಿಗಳು ಬಂದು ನೈಸರ್ಗಿಕವಾಗಿ ಬೆಳೆದ ತಾಜಾ ಪಪ್ಪಾಯ ಹಣ್ಣನ್ನು ಕುಕ್ಕಿ ತಿಂದು ಹೋಗುತ್ತದೆಯೇ ಹೊರತು ಯಾವಾಗಲೋ ಯಾವುದೋ ರಾಸಾಯನಿಕಗಳನ್ನು ಹಾಕಿ ಬೆಳೆಸಿ ಹಣ್ಣು ಮಾಡಿದ ಸೇಬು ಹಣ್ಣನ್ನು ಅಲ್ಲ. ಅಂದರೆ ಪಕ್ಷಿಗಳಿಗೂ ಸಹ ತಿಳಿಯುತ್ತದೆ ಯಾವುದನ್ನು ಸೇವಿಸಬೇಕು ಬೇಡ ಎಂಬುದು. ಆದರೆ ನಾವು ಮಾನವರು ಮಾತ್ರ ವಿದೇಶಿ ಹಣ್ಣುಗಳು ದುಬಾರಿ ಬೆಲೆಯ ಹಣ್ಣುಗಳನ್ನು ಕೊಂಡುಕೊಳ್ಳುತ್ತೆವೆ. ಪಪ್ಪಾಯಿಯಲ್ಲಿ ಪೋಷಕಾಂಶ ಇದೆ ಎಂಬುದನ್ನು ಪ್ರಕೃತಿಯೇ ನಮಗೆ ತಿಳಿಸಿಕೊಡುತ್ತದೆ.

ಉದಾಹರಣೆಗೆ: ಒಂದು ಆಸ್ಪತ್ರೆಯಲ್ಲಿ ಹತ್ತು ಶುಗರ್ ಪೇಷಂಟ್ ಗಳಿಗೆ ಮಧ್ಯಾಹ್ನ ಊಟಕ್ಕೆ ಒಂದು ಬೌಲ್ ಅನ್ನ ಕೊಟ್ಟು ಊಟದ ನಂತರ ಅವರ ಶುಗರ್ ಟೆಸ್ಟ್ ಮಾಡುತ್ತಾರೆ ಹಾಗೆ ಮರುದಿನವೂ ಸಹ ಅವರಿಗೆ ಅದೇ ಒಂದು ಬೌಲ್ ಅನ್ನ ಜೊತೆಗೆ ಒಂದು ಬೌಲ್ ಪಪ್ಪಾಯ ಹಣ್ಣನ್ನು ಸಹ ಕೊಡುತ್ತಾರೆ. ಇನ್ನೊಂದು ದಿನ ಒಂದು ಬೌಲ್ ಅನ್ನ ಹಾಗೂ ಎರಡು ಚಪಾತಿ ಕೊಡುತ್ತಾರೆ ಹಾಗೆ ಶುಗರ್ ಟೆಸ್ಟ್ ಕೂಡಾ ಮಾಡ್ತಾರೆ. ಮೂರು ದಿನದ ಶುಗರ್ ಟೆಸ್ಟ್ ರಿಪೋರ್ಟ್ ನೋಡಿದಾಗ ಪಪ್ಪಾಯ ಕೊಟ್ಟ ದಿನ ಪೇಷಂಟ್ ಗಳ ಶುಗರ್ ಲೆವೆಲ್ ಶೇಖಡಾ ಹತ್ತರಷ್ಟು ಕಡಿಮೆ ಆಗಿತ್ತು. ಹೇಗೆ ಅಂತ ನೋಡಿದ್ರೆ, ಪಪ್ಪಾಯ ಹಣ್ಣಿನ ನಾರಿನ ಅಂಶ ಉಳಿದ ಸಕ್ಕರೆ ಅಂಶಗಳನ್ನ ಹೀರಿಕೊಂಡು ಸರಳವಾಗಿ ಕರುಳಿಗೆ ಕಳಿಸುತ್ತೆ ಹಾಗಾಗಿ ಶುಗರ್ ಲೆವೆಲ್ ಹೆಚ್ಚು ಆಗಲಿಲ್ಲ. ಶುಗರ್ ಮತ್ತು ಬೊಜ್ಜು ಬರಲು ಮುಖ್ಯವಾಗಿ ಸಕ್ಕರೆಯೇ ಕಾರಣ. ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಪಪ್ಪಾಯ ಅಂತಹ ಹಣ್ಣುಗಳು ತರಕಾರಿಗಳನ್ನ ಬಳಸಬೇಕು. ಹಾಗಾಗಿ ಪ್ರತಿನಿತ್ಯ ಪಪ್ಪಾಯಿ ಹಣ್ಣನ್ನು ತಿನ್ನುವುದು ಒಳ್ಳೆಯದು.

ಕೆಲವರು ಪಪ್ಪಾಯ ಹಣ್ಣು ಉಷ್ಣ ಅಂತ ಹೇಳ್ತಾರೆ ಆದ್ರೆ ಇದರಿಂದ ಯಾವುದೇ ಅಪಾಯ ಇಲ್ಲ ಅದು ಉಷ್ಣ ಅಂದ್ರೆ, ನಮ್ಮ ದೇಹದ ಕೊಬ್ಬನ್ನು ಕರಗಿಸುತ್ತದೆ ಹಾಗಾಗಿ ಪಪ್ಪಾಯ ಹಣ್ಣು ಉಷ್ಣ ಅಂತ ಅನಿಸುತ್ತದೆ ಅಷ್ಟೆ. ಹಾಗಾಗಿ ಇದು ಬರೀ ತಪ್ಪು ಕಲ್ಪನೆ ಅಷ್ಟೆ ಉಷ್ಣ ಆಗಿದ್ದಲ್ಲಿ ಅದನ್ನ ನಿವಾರಿಸಲು ಮಜ್ಜಿಗೆ, ಎಳೇನೀರನ್ನು ಕುಡಿಯಬಹುದು.

ಪಪ್ಪಾಯ ಹಣ್ಣನ್ನು ಬೆಳಿಗ್ಗೆ ತಿಂಡಿಯ ಜೊತೆ ಅಥವಾ ತಿಂಡಿಗು ಮೊದಲು ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶಗಳು ಸಿಗುತ್ತವೆ. ಪಪ್ಪಾಯ ಹಣ್ಣಿನಲ್ಲಿ ಸಕ್ಕರೆ ಅಂಶ ಶೇಕಡಾ ಎಂತರಷ್ಟು ಇದೆ. ಅಕ್ಕಿ ಗೋಧಿ ಸಿರಿ ಧಾನ್ಯಗಳಲ್ಲಿ ಶೇಕಡಾ ಎಪ್ಪತ್ತರಿಂದ ಎಂಭತ್ತರಷ್ಟು ಇದೆ ಇದಕ್ಕೆ ಹೋಲಿಸಿದರೆ ಪಪ್ಪಾಯ ಹಣ್ಣು ಎಷ್ಟೋ ಮೇಲು. ಬಾಯಿಗೆ ಸಿಹಿ ಆದರೆ ಸಕ್ಕರೆ ಅಂಶ ಕಡಿಮೆ ಇರುವ ಈ ಹಣ್ಣಿನಲ್ಲಿ ಪೋಷಕಾಂಶಗಳು ಸಾಕಷ್ಟು ಇವೆ. ಎಲ್ಲರೂ ತಿನ್ನಬಹುದಾದ ಹನು ಎಂದರೆ ಪಪ್ಪಾಯ. ನಮ್ಮ ದೇಹಕ್ಕೆ ತಾನಾಗಿಯೇ ರೋಗಗಳನ್ನು ಕಡಿಮೆ ಮಾಡಿಕೊಳ್ಳುವ ಶಕ್ತಿ ಇದೆ ಆದರೆ ಆ ಶಕ್ತಿಯನ್ನು ನಾವು ದೇಹಕ್ಕೆ ಕೊಡಬೇಕು ಅಂದರೆ, ಪಪ್ಪಾಯ ಅಂತಹ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಪರಿಪೂರ್ಣವಾದ ಉತ್ತಮ ಆರೋಗ್ಯವನ್ನು ಪಡೆಯಲು ಪಪ್ಪಾಯ ಹಣ್ಣನ್ನು ಸೇವಿಸೋಣ ಖುಷಿಯಾಗಿ ಆರೋಗ್ಯವಂತರಾಗಿ ಇರೋಣ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ

Leave a Comment

error: Content is protected !!