Aadhar Card: ಆಧಾರ್ ಪಾನ್ ಕಾರ್ಡ್ ಲಿಂಕ್ ಆಗಿದೆಯಾ ಎಂಬುದಾಗಿ ತಿಳಿಯುವುದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Pan Card ಭಾರತದ ಸರ್ಕಾರ ಹಲವಾರು ವರ್ಷಗಳಿಂದಲೂ ಕೂಡ ಆದಾಯ ತೆರಿಗೆಯಿಂದ ನೀಡಲಾಗುವ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್(Aadhar Card) ಗೆ ಲಿಂಕ್ ಮಾಡಿ ಎನ್ನುವುದಾಗಿ ಹೇಳಿಕೊಂಡು ಬರುತ್ತಿದೆ. ಆದರೆ ಇನ್ನೂ ಕೂಡ ಕೆಲವರು ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ. ಇನ್ನು ಇದೇ ಮಾರ್ಚ್ 31 ಈ ಕೆಲಸವನ್ನು ಮಾಡುವುದಕ್ಕೆ ಕೊನೆಯ ಗಡುವಾಗಿದೆ.

ಭಾರತ ಸರ್ಕಾರದ ತೆರಿಗೆ ಇಲಾಖೆಯ(Income Tax) ಪ್ರಕಾರ ಏಪ್ರಿಲ್ ಒಂದರಿಂದ ಒಂದು ವೇಳೆ ಯಾವುದೇ ಪಾನ್ ಕಾರ್ಡ್(Pan Card) ಆಧಾರ್ ಕಾರ್ಡ್ ಗೆ ಲಿಂಕ್ ಮಾಡದೆ ವ್ಯವಹಾರಗಳಲ್ಲಿ ಉಪಯೋಗಿಸಿದರೆ ದಂಡವನ್ನು ಕಟ್ಟಬೇಕಾಗುತ್ತದೆ ಹಾಗೂ ಇದು ಆದಾಯ ನಿಯಮಗಳ ಪ್ರಕಾರ ಅಪರಾಧ ಕೂಡ ಆಗಿದ್ದು ಶಿಕ್ಷಾರ್ಹ ಅಪರಾಧ ಕೂಡ ಆಗಿದ್ದು ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಪ್ರಕರಣಗಳು ಕೂಡ ದಾಖಲಾಗುವ ಸಾಧ್ಯತೆ ಇರುತ್ತದೆ.

ಅದರಲ್ಲೂ ಕೆಲವು ಜನರಿಗೆ ಇದನ್ನು ಹೇಗೆ ಲಿಂಕ್ ಮಾಡುವುದು ಎನ್ನುವುದರ ಕುರಿತಂತೆ, ಅಷ್ಟೊಂದು ತಿಳುವಳಿಕೆ ಇರುವುದಿಲ್ಲ ಹೀಗಾಗಿ ಬನ್ನಿ ಈ ಲೇಖನಿಯಲ್ಲಿ ಅದನ್ನು ಹೇಗೆ ಪೂರ್ಣಗೊಳಿಸುವುದು ಎನ್ನುವುದನ್ನು ತಿಳಿಯೋಣ. ಪಾನ್ ಕಾರ್ಡ್ ಪ್ರತಿಯೊಂದೂ ಕಮರ್ಷಿಯಲ್(Commercial) ವ್ಯವಹಾರಗಳಿಗೂ ಕೂಡ ಅತ್ಯಂತ ಬೇಕಾಗಿರುವಂತಹ ದಾಖಲೆಯಾಗಿದ್ದು ಇದರಿಂದಾಗಿ ಸರ್ಕಾರ ತೆರಿಗೆಯನ್ನು ಯಾರು ಕಟ್ಟುತ್ತಿದ್ದಾರೆ ಅಥವಾ ಯಾರು ಕಟ್ಟುತ್ತಿಲ್ಲ ಎಂಬುದನ್ನು ಕಂಟ್ರೋಲ್ ಮಾಡಬಹುದಾಗಿದೆ.

ಇನ್ನು ಆಧಾರ್ ಕಾರ್ಡ್(Aadhar Card) ಗೆ ಪಾನ್ ಅನ್ನು ಲಿಂಕ್ ಮಾಡಲು ಆದಾಯ ತೆರಿಗೆ ಅಧಿಕೃತ ವೆಬ್ಸೈಟ್ಗೆ ಹೋಗಿ ನಿಮ್ಮ ಆಧಾರ್ ಹಾಗೂ ಪಾನ್ ಕಾರ್ಡ್ ನಂಬರ್ ಅನ್ನು ನಮೂದಿಸಿ ಲಿಂಕ್ ಆಗಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿ. ಹಾಗಿದ್ದರೆ ಈಗಾಗಲೇ ನಿಮ್ಮ ಆಧಾರ್ ಪಾನ್ ಕಾರ್ಡ್ ಗೆ ಲಿಂಕ್ ಆಗಿದೆ ಎನ್ನುವುದಾಗಿ ತೋರಿಸುತ್ತದೆ. ಇಲ್ಲವಾದಲ್ಲಿ ಮಾರ್ಚ್ 31ರ ಒಳಗೆ ಈ ಕೆಲಸವನ್ನು ಮುಗಿಸಿಕೊಳ್ಳಿ ಯಾಕೆಂದರೆ ಇದಾದ ನಂತರ ನೀವು ಮಾಡಿಸಿಕೊಳ್ಳಲು ಹೋದರೆ ಸಾಕಷ್ಟು ದೊಡ್ಡ ಮಟ್ಟದ ಹಣವನ್ನು ಕಟ್ಟಬೇಕಾಗುತ್ತದೆ.

Leave a Comment

error: Content is protected !!