ಸ್ವಂತ ಉದ್ಯೋಗ ಮಾಡಲು ಈ ಟ್ರಿಕ್ಸ್ ಗೊತ್ತಿರಬೇಕು ಅನ್ನುತ್ತೆ ಚಾಣಿಕ್ಯನೀತಿ

ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಬಹಳವಾಗಿಯೆ ಇದೆ. ಲಕ್ಷಗಳ ಲೆಕ್ಕದಲ್ಲಿ ಪದವಿ ಮುಗಿಸಿ ಉದ್ಯೋಗಕ್ಕಾಗಿ ಅರಸುವ ಯುವ ಜನತೆಯಲ್ಲಿ ಎಲ್ಲರಿಗೂ ಉದ್ಯೋಗ ದೊರೆಯುವುದು ಅಸಾಧ್ಯದ ಮಾತು. ಕೆಲವರು ಉದ್ಯೋಗ ಪಡೆದುಕೊಂಡರೆ ಇನ್ನು ಕೆಲವರು ವ್ಯವಸಾಯದ ಮೊರೆ ಹೋಗುತ್ತಾರೆ. ಕೆಲವರು ತಮ್ಮದೆ ಸೈನಿಕ, ಪೋಲಿಸ್ ಹೀಗೆ ಬೇರೆ ಬೇರೆ ವೃತ್ತಿಗಳಿಗೆ ಸೇರಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ತಮ್ಮದೆ ಆದ ಸ್ವಂತ ದುಡಿಮೆ ಮಾಡಲು ಸ್ವಂತ ವ್ಯವಹಾರ ನಡೆಸಲು ಮುಂದಾಗುತ್ತಾರೆ. ಬ್ಯುಸ್ನೆಸ್ ಮಾಡುವುದು ಹಲವರ ಕನಸುಗಳು ಕೂಡ. ಮಾಡುತ್ತಿರುವ ಉದ್ಯೋಗ ನಿಲ್ಲಿಸಿ, ತಮ್ಮದೆ ಸ್ವಂತ ಉದ್ಯೋಗ ತೆರೆಯಲು ಇಚ್ಚಿಸುವ ವ್ಯಕ್ತಿಗಳು ಬಹಳಷ್ಟು ಇದ್ದಾರೆ. ಸ್ವಂತ ವ್ಯವಹಾರ ಅಂದರೆ ಬ್ಯುಸ್ನೆಸ್ ಹೇಗೆ ಮಾಡಬೇಕು? ಅದರ ರೀತಿ ನೀತಿಗಳು ಏನು? ವ್ಯವಹಾರ ನಡೆಸುವ ವ್ಯಕ್ತಿ ಹೇಗಿರಬೇಕು? ಎಂಬ ಮಾಹಿತಿಯನ್ನು ಚಾಣಕ್ಯ ನೀತಿಯಲ್ಲಿ ಯಾವ ರೀತಿಯಲ್ಲಿ ವಿವರಿಸಲಾಗಿದೆ ಎನ್ನುವ ವಿಷಯದ ಬಗ್ಗೆ ಈ ಲೇಖನದ ಮೂಲಕ ನಾವು ತಿಳಿದುಕೊಳ್ಳೋಣ.

ರಾಜ್ಯ ನಿಭಾಯಿಸುವುದು ಹಾಗೂ ನಾಯಕತ್ವ ನಿಭಾಯಿಸುವುದು ಎರಡು ಒಂದೆ ನಾಣ್ಯದ ಎರಡು ಮುಖದಂತೆ. ರಾಜ ತಂತ್ರ ಹೇಗಿರಬೇಕೆಂದು ಹೇಳಿಕೊಟ್ಟ ಮಹಾಜ್ಞಾನಿ ಚಾಣಕ್ಯ ನಾಯಕತ್ವ ಬಗ್ಗೆ ಹೇಳಿದ್ದಾರೆ. ಅದು ಹೇಗೆಂದರೆ ಒಂದು ರಾಜ್ಯಕ್ಕೆ ರಾಜ ಹೇಗೆ ನಾಯಕನಾಗಿರುತ್ತಾನೋ ಅದೇ ರೀತಿಯಲ್ಲಿ ತಮ್ಮ ಸ್ವಂತ ಉದ್ಯೋಗಕ್ಕೆ ಮಾಲಿಕನೆ ನಾಯಕನಾಗಿರುತ್ತಾನೆ. ರಾಜನಿಗೆ ಅನ್ವಯಿಸುವ ತಂತ್ರಗಳು, ನಿಯಮಗಳು ಒಬ್ಬ ನಾಯಕನಿಗೂ ಅನ್ವಯಿಸುತ್ತದೆ. ಕೆಲವರು ಸ್ವಂತ ವ್ಯಾಪಾರ ಆರಂಭಿಸುವವರಿಗೆ ಹೇಗೆ ಯಾವ ರೀತಿಯಲ್ಲಿ ತಮ್ಮ ವ್ಯಾಪಾರ ಆರಂಭಿಸಬೇಕು? ಎಂದು ತಿಳಿದಿರುವುದಿಲ್ಲ. ಅವರಿಗೆ ಚಾಣಕ್ಯನ ನೀತಿಯು ಬಹಳ ಪ್ರಯೋಜನಕಾರಿ ಎನ್ನಬಹುದು. ಒಬ್ಬ ನಾಯಕ ಹೇಗೆ ರೂಪಗೊಳ್ಳುತ್ತಾನೆ? ನಾಯಕ ಹೇಗೆ ಇರಬೇಕು? ಎಂಬುದರ ಬಗ್ಗೆ ಚಾಣಕ್ಯ ತನ್ನ ರಾಜನೀತಿ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದಾನೆ. ಚಾಣಕ್ಯ ಒಂದು ಮಾತು ಹೇಳಿದ್ದಾನೆ ಅದೆನೆಂದರೆ ಸುಖದ ಮೂಲ ಧರ್ಮವಾಗಿರುತ್ತದೆ ಧರ್ಮಕ್ಕೆ ಮೂಲ ಧನವಾಗಿರುತ್ತದೆ ಧನಕ್ಕೆ ಮೂಲ ಅಧಿಕಾರದಿಂದ ಬರುತ್ತದೆ ಎಂದು.

ಸ್ವಂತ ಉದ್ಯೋಗ ಸ್ಥಾಪಿಸಲು ಮೂಲ ಕಾರಣವೆ ಸುಖ ಹಾಗೂ ಸಂತೋಷಕರವಾದ ಜೀವನಕ್ಕಾಗಿ. ಹಾಗೆ ಪ್ರಾರಂಭಿಸಿದ ಉದ್ಯೋಗ ಚಾಣಕ್ಯನ ಮಾತಿನಂತೆ ಧರ್ಮದ ಆಧಾರದ ಅಡಿಯಲ್ಲಿ ಇರಬೇಕು ಅಂದರೆ ನಾವೂ ಮಾಡುವ ಕಾರ್ಯ ಒಳ್ಳೆಯ ರೀತಿಯಲ್ಲಿ, ಇನ್ನೊಬ್ಬರಿಗೆ ಒಳ್ಳೆಯದಾಗುವ ರೀತಿಯಲ್ಲಿ ಇದ್ದರೆ ಅದು ಧರ್ಮದ ಅಡಿಯಲ್ಲಿ ಇದೆ ಎಂದು ಅರ್ಥ. ಸರಿಯಾಗಿ ಉಪಯೋಗಿಸಿಕೊಳ್ಳದೆ ಹೋದಲ್ಲಿ ನಾವು ಮಾಡಿದ ಅಥವಾ ಮಾಡುವ ಕಾರ್ಯ ಅಧರ್ಮದ ಹಾದಿಯಲ್ಲಿ ಸಾಗಿದೆ ಎಂದು ಅರ್ಥ. ಹಣ ಹಾಗೂ ಅಧಿಕಾರ ಇದ್ದಲ್ಲಿ ಏನಾದರೂ ಸಾಧಿಸಬಹುದು ಎಂಬ ಮಾತಿದೆ. ಆದರೆ ಇವೆರಡರಲ್ಲಿ ಯಾವುದಾದರೂ ಒಂದು ಇದ್ದರೂ ಸಾಕು ಇನ್ನೊಂದನ್ನು ಸುಲಭವಾಗಿ ಗಳಿಸಿಕೊಳ್ಳಬಹುದು. ಹಣವಿದ್ದರೆ ಹೂಡಿಕೆ ಮಾಡಿ ನಾಯಕತ್ವದ ಅಧಿಕಾರ ಗಳಿಸಬಹುದು, ಅಧಿಕಾರವಿದ್ದಲ್ಲಿ ಹೂಡಿಕೆದಾರರ ಜೊತೆ ಬೆಳೆಸಿದ ಉತ್ತಮ ಸಂಭಂದ ಹಾಗೂ ಉತ್ತಮ ಉಪಾಯಗಳಿಂದ ಅವರ ಮೆಚ್ಚುಗೆ ಪಡೆದು ಹಣ ಗಳಿಸಿಕೊಳ್ಳಬಹುದು. ನಾವು ಮಾಡುವ ಎಲ್ಲ ಕೆಲಸಗಳಲ್ಲೂ ಅಂದರೆ ಮಾತು ನೋಟ ಕೇಳಿಸಿಕೊಳ್ಳುವುದು ಹೀಗೆ ಎಲ್ಲದರಲ್ಲೂ ನಮ್ಮ ಇಂದ್ರಿಯಗಳು ಜೊತೆಯಾಗಿರುತ್ತದೆ. ವಿನಯದಿಂದ ಈ ಇಂದ್ರಿಯಗಳನ್ನು ಗೆದ್ದುಕೊಂಡಲ್ಲಿ ನಾವು ಮಾಡುವ ವ್ಯವಹಾರಕ್ಕೆ ಉತ್ತಮ ಸಹಾಯ ದೊರಕುತ್ತದೆ. ಆಲೋಚನೆಗಳಂತೆಯೆ ನಮ್ಮ ನಡೆಯು ಸಹ ರೂಪಗೊಳ್ಳುತ್ತದೆ ಅದಕ್ಕಾಗಿ ಇಂದ್ರಿಯಗಳನ್ನು ವಿನಯದ ಮೂಲಕ ಹತೋಟಿಯಲ್ಲಿಡುವುದು ಅತಿ ಅವಶ್ಯಕ. ವ್ಯವಹಾರಕ್ಕೆ ಬೇಕಾದ ಜ್ಞಾನ ಹಾಗೂ ವಿನಯ ಸಂಪಾದಿಸಲು ಅನುಭವ ಇರುವ ವ್ಯಕಿಗಳು ಹಾಗೂ ವ್ಯಕ್ತಿತ್ವ ರೂಪಿಸಿಕೊಂಡ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡು ಅವರನ್ನು ಅನುಸರಿಸುವುದು ಉತ್ತಮ ದಾರಿಯಾಗಿದೆ. ಹೀಗೆ ಅನುಸರಿಸುವಾಗ ಭವಿಷ್ಯದ ಯೋಚನೆ ಇಟ್ಟುಕೊಂಡು ಹಣದ ಜೊತೆ ಜ್ಞಾನ ಸಂಪಾದಿಸುವುದು ಉತ್ತಮ.

ಒಬ್ಬ ವ್ಯಕ್ತಿ ತೆಗೆದುಕೊಳ್ಳುವ ನಿರ್ಧಾರಗಳು, ನಡೆಯುವ ದಾರಿ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಈ ರೀತಿಯ ವ್ಯಕ್ತಿತ್ವದ ನಿರ್ಧಾರವನ್ನು ಆತ್ಮ ಸಂಪಾದನೆ ಎನ್ನಲಾಗುತ್ತದೆ. ತನ್ನನ್ನು ತಾನು ಅರ್ಥ ಮಾಡಿಕೊಂಡು ಧರ್ಮದ ಆಧಾರದ ಮೇಲೆ ವ್ಯವಹಾರ ನಡೆಸುವವನು ಮಾತ್ರ ಗೆಲುವನ್ನು ಸಾಧಿಸುತ್ತಾನೆ. ಗೆಲುವು ಸಿಕ್ಕಿದಾಗ ಎರಡು ತರಹದ ಆಸ್ತಿಗಳು ಸಿಗುತ್ತದೆ. ಒಂದು ಹಣದ ಆಸ್ತಿಯಾದರೆ ಇನ್ನೊಂದು ಪ್ರಕೃತಿ ಆಸ್ತಿ. ಹಣವೆಂದರೆ ಹೂಡಿಕೆಗೆ ಸಿಗುವ ಧನ. ಚಾಣಕ್ಯನ ಪ್ರಕಾರ ಪ್ರಕೃತಿ ಆಸ್ತಿ ಎಂದರೆ ಧನ ಸಿಕ್ಕಾಗ ಗೆಲುವು ಸಿಕ್ಕಾಗ ದೊರೆಯುವ ಮಂತ್ರಿಯಂತೆ ಇರುವ ಸಲಹೆಗಾರ ಅಥವಾ ಸ್ನೇಹಿತರು, ಹೂಡಿಕೆದಾರರು ಅಥವಾ ಹೂಡಿಕೆ ಹಣ, ರಾಜ್ಯ ಅಥವಾ ನಮ್ಮ ಸ್ವಂತ ಉದ್ಯೋಗ, ಸೈನಿಕರು ಅಂದರೆ ಕೆಲಸಗಾರರು, ಇವುಗಳು ತುಂಬಾ ಮುಖ್ಯವಾದವು. ಬಲವಾದ ಈ ಪ್ರಕೃತಿ ಸಂಪತ್ತಿನಿಂದ ನಾಯಕನಿಲ್ಲದೆಯು ವ್ಯವಹಾರವನ್ನು ಉತ್ತಮ ರೀತಿಯಲ್ಲಿ ನಡೆಸಬಹುದು. ಕೆಲಸಗಾರರು ಹಾಗೂ ಅನುಸರಿಸಿದ ವಿಧಾನದಿಂದ ವ್ಯವಹಾರದ ಗೆಲುವು ನಿಂತಿರುತ್ತದೆ. ನಿಯಮವನ್ನು ಅನುಸರಿಸಿ, ಒಳ್ಳೆಯ ರೀತಿಯಲ್ಲಿ ತನ್ನ ವಿದ್ಯೆ, ವಿನಯದಿಂದ ವ್ಯವಹಾರ ನಡೆಸಿದರೆ ಕೆಲಸಗಾರರಿಂದ ಕೂಡ ಯಾವುದೆ ತೊಂದರೆಯಾಗೂವುದಿಲ್ಲ. ವ್ಯವಹಾರ ಜ್ಞಾನ ಹಾಗೂ ನಾವು ನಡೆದುಕೊಳ್ಳುವ ವಿಧಾನದಲ್ಲಿ ವಿನಯ ಇಲ್ಲವಾದರೆ ವ್ಯವಹಾರ ಕೈ ಗೂಡುವುದಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಮಗೆ ಚಾಣಕ್ಯನ ರಾಜನೀತಿ ತಿಳಿಸುತ್ತದೆ. ವ್ಯವಹಾರ ಮಾಡಬೇಕಾದರೆ ಮೊದಲು ನಮಗೆ ಇಷ್ಟವಾದ ಬಗೆಯನ್ನು ಆಯ್ಕೆ ಆರಿಸಿಕೊಳ್ಳಬೇಕು. ಹೂಡಿಕೆ ಮಾಡುವ ಹಣ ಪೂರ್ತಿಯಾಗಿ ಇಲ್ಲವೆ ಶೇಕಡಾ 70 ರಷ್ಟು ಸ್ವಂತದ್ದಾಗಿರಬೇಕು. ವ್ಯವಹಾರಗಳಿಗೆ ಸಂಬಂಧಿಸಿದ ಜ್ಞಾನ ವೃದ್ದಿಸಿಕೊಳ್ಳುತ್ತಲೆ ಇರಬೇಕು. ಇಲ್ಲವಾದಲ್ಲಿ ನಷ್ಟ ಎದುರಿಸುವ ಹಾಗೂ ಎಲ್ಲ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ವ್ಯವಹಾರ ಪ್ರಾರಂಭಿಸುವ ಮೊದಲು ಗ್ರಾಹಕರೊಂದಿಗೆ ಬೆರೆಯುವ ವಿಧಾನವನ್ನು ಮೊದಲು ಕಲಿಯಬೇಕು. ಪಾಲುಗಾರರೊಂದಿಗೆ ಮಾಡುವ ವ್ಯವಹಾರ ಮುಂದೊಂದು ದಿನ ಅಪಾಯ ತರಬಹುದು. ವ್ಯವಹಾರದ ಮೊದಲಿಗೆ ಯಾರಿಗೂ ಸಾಲ ನೀಡದಿದ್ದರೆ ಉತ್ತಮ. ನಷ್ಟವಾದಲ್ಲಿ ನಷ್ಟದ ಮೂಲ ಹುಡುಕಿ ಸರಿ ಮಾಡಿಕೊಂಡರೆ ನಷ್ಟದಿಂದ ಪಾರಾಗಬಹುದು. ವ್ಯವಹಾರ ಪ್ರಾರಂಭಿಸುವ ಮೊದಲು ಎದುರಿಸುವ ಧೈರ್ಯ ಇರಬೇಕು.

ಆಚಾರ್ಯ ಚಾಣಕ್ಯ ತಿಳಿಸಿರುವ ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಉತ್ತಮ ನಾಯಕನಾಗಬಹುದು ಹಾಗೂ ಒಳ್ಳೆಯ ಮಾರ್ಗದಲ್ಲಿ ದುಡಿದು ಉತ್ತಮ ರೀತಿಯಲ್ಲಿ ಹಣವನ್ನು ಸಹ ಸಂಪಾದನೆ ಮಾಡಬಹುದು.

Leave a Comment

error: Content is protected !!