ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಕರ್ನಾಟಕದ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಸಂಬಂಧ ತುಂಬ ಗಾಢವಾಗಿ ಬೆಳೆದಿತ್ತು ಇಬ್ಬರು ಕೂಡ ಒಬ್ಬರನ್ನೊಬ್ಬರು ಅನ್ಯೋನ್ಯವಾಗಿ ಅರ್ಥಮಾಡಿಕೊಂಡಿದ್ದರು. 2019 ರಲ್ಲಿ ದಸರಾ ಕಾರ್ಯಕ್ರಮದ ವೇದಿಕೆಯ ಮೇಲೆ ಎಲ್ಲರ ಸಮ್ಮುಖದಲ್ಲಿ ನಿವೇದಿತಾ ಗೌಡ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಹಾಗೆ ನಿವೇದಿತಾ ಚಂದನ್ ಶೆಟ್ಟಿಯನ್ನು ಒಪ್ಪಿಕೊಂಡಿದ್ದರು.

ನಂತರ 2020 ಫೆಬ್ರವರಿ ತಿಂಗಳಿನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಮೇಲೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಕೂಡ ತುಂಬಾ ಬ್ಯುಸಿ ಆಗಿಬಿಟ್ಟರು. ಚಂದನ್ ಶೆಟ್ಟಿ ಅವರು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸರ್ ಆಗಿ ಕೆಲಸದಲ್ಲಿ ಬ್ಯುಸಿಯಾಗಿದ್ದರೆ, ನಿವೇದಿತಾ ಗೌಡ ರಿಯಾಲಿಟಿ ಶೋಗಳಲ್ಲಿ ಮತ್ತು ಪ್ರಚಾರಗಳಲ್ಲಿ ಬ್ಯುಸಿಯಾಗಿದ್ದರು. ಈಗಲೂ ಕೂಡ ಮದುವೆಯಾಗಿ 2 ವರ್ಷವಾದರೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ನಿವೇದಿತಾ ಗೌಡ ಇದೀಗ ಗಿಚ್ಚ ಗಿಲಿಗಿಲಿ ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಚಂದನ್ ಶೆಟ್ಟಿ ಅವರು ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಸದ್ಯಕ್ಕಂತೂ ನಿವೇದಿತಾ ಮತ್ತು ಚಂದನ್ ಇಬ್ಬರು ಕೂಡ ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಿವೇದಿತಾ ಗೌಡ ಅವರು ತಮ್ಮ ಸಂಪಾದನೆಯ ಬಗ್ಗೆ ಮನದಾಳದ ಮಾತನ್ನು ಆಡಿದ್ದಾರೆ. ಚಂದನ್ ಶೆಟ್ಟಿ ಅವರ ದುಡ್ಡಿನಲ್ಲಿಯೇ ನಿವೇದಿತ ಬದುಕುತ್ತಿದ್ದಾಳೆ ಎಂದು ಟೀಕೆ ಮಾಡುವವರಿಗೆ ಸರಿಯಾದ ಉತ್ತರ ನೀಡಿದ್ದಾಳೆ.

ಹೌದು ನಿವೇದಿತಾ ಗೌಡ ಚಂದನ್ ಶೆಟ್ಟಿ ಗಿಂತ ಕಡಿಮೆ ದುಡಿಯುತ್ತಿಲ್ಲ ಅಥವಾ ಚಂದನ್ ಶೆಟ್ಟಿ ಅವರು ಒಬ್ಬರೇ ದುಡಿದು ಸಂಪಾದನೆ ಮಾಡುತ್ತಿಲ್ಲ. ನಿವೇದಿತಾ ಗೌಡ ಕೂಡ ಚಂದನ್ ಶೆಟ್ಟಿಗೆ ಸಮನಾಗಿ ಸಂಪಾದನೆ ಮಾಡಿ ಸಂಬಳ ಪಡೆಯುತ್ತಿದ್ದಾರೆ. ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸುತ್ತಿರುವ ನಿವೇದಿತಾ ಗೌಡ ಒಂದು ಎಪಿಸೋಡ್ ಗೆ ಇಪ್ಪತ್ತು ರಿಂದ ಮೂವತ್ತು ಸಾವಿರ ಸಂಭಾವನೆ ಪಡೆಯುತ್ತಾರೆ. ತಿಂಗಳಿಗೆ ಒಂದರಿಂದ ಎರಡು ಲಕ್ಷ ರುಪಾಯಿಯನ್ನು ನಿವೇದಿತಾ ದುಡಿಯುತ್ತಾರೆ. ಕೇವಲ ರಿಯಾಲಿಟಿ ಶೋಗಳಿಂದ ನಿವೇದಿತಾ ಗೌಡ ಹಣ ಮಾಡುತ್ತಿಲ್ಲ.

ನಿವೇದಿತಾ ಗೌಡ ಎಡ್ವರ್ಟೈಸ್ಮೆಂಟ್ ಗಳಿಂದ ಕೂಡ ಹಣ ಮಾಡುತ್ತಾರೆ ಮತ್ತು ತಮ್ಮದೇ ಆದ ಸ್ವಂತ ಯೂಟ್ಯೂಬ್ ಚಾನಲ್ ಇದೆ ಅದರಿಂದ ಕೂಡ ನಿವೇದಿತಾ ಗೌಡ ಅವರಿಗೆ ಹಣ ಬರುತ್ತೆ. ನನ್ನ ಸಂಪಾದನೆ ಚಂದನ್ ಶೆಟ್ಟಿಯವರ ಸಂಪಾದನೆಗೆ ಸಮನಾಗಿದೆಯೆಂದು ನಿವೇದಿತಾ ಗೌಡ ಅವರೇ ಗರ್ವದಿಂದ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಕಿರುತೆರೆಯಲ್ಲಿ ಮಿಂಚುತ್ತಿರುವ ನಿವೇದಿತಾ ಗೌಡ ಅವರು ಇನ್ಮೇಲೆ ಸಿನಿಮಾಗಳಲ್ಲಿ ಮಿಂಚಲಿದ್ದಾರೆ. ಅಷ್ಟೇ ಅಲ್ಲದೆ ನಾನು ಈಗಲೇ ಮಗುವನ್ನು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ ನಾನು ಜೀವನದಲ್ಲಿ ತುಂಬಾ ಸಾಧಿಸುವುದಿದೆ ಎಂದು ನಿವೇದಿತಾ ಹೇಳಿಕೊಂಡಿದ್ದಾರೆ.

By admin

Leave a Reply

Your email address will not be published.