ಬೇರೊಬ್ಬನ ಜೊತೆ ನಡೆಸುತ್ತಿದ್ದ ಕಳ್ಳಾಟ, ಗಂಡನಿಗೆ ಗೊತ್ತಾಗುತ್ತಿದ್ದಂತೆ, ಈ ಖತರ್ನಾಕ್ ಕಾಮಿನಿ ಎಂತ ಕೆಲಸ ಮಾಡಿದ್ದಾಳೆ ನೋಡಿ

ಯುಗಪುರುಷ ಸಿನಿಮಾ ಎಂದ ಕೂಡಲೇ ಸಾಕಷ್ಟು ಮಂದಿಗೆ ಬೇಗ ನೆನಪಾಗುವುದು ಆ ಒಂದು ದೃಶ್ಯ .ನಟ ರಾಮಕೃಷ್ಣ ಅವರು ಕಾಮಿನಿ ದೇವಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಆಗುತ್ತಾರೆ ಆದ್ರೆ ಪ್ರೀತಿಸಿ ಕೈ ಹಿಡಿದ ಪತ್ನಿಯಿಂದಲೇ ಮೋಸಕ್ಕೆ ಒಳಗಾಗಿ ಸಾವನ್ನಪುತ್ತಾರೆ. ಅದೇ ಸಿನಿಮೀಯ ರೀತಿಯಲ್ಲಿ ಇಲ್ಲೊಂದು ಕಥೆಯಿದ್ದು ಯಾರು ಆ ಕಾಮಿನಿ ದೇವಿ ಅನ್ನೋದನ್ನ ನೋಡೋಣ ಬನ್ನಿ.

ಇಲ್ಲಿ ಬರುವ ಕಾಮಿನಿ ದೇವಿಯ ಹೆಸರು ನಿತ್ಯ ,ಆತನ ಹೆಸರು ಪ್ರವೀಣ್ ಆತನ ವಯಸ್ಸು 32 ರಿಂದ 36 ರ ಆಸುಪಾಸಿನ ವ್ಯಕ್ತಿ . ಇಬ್ಬರೂ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದ ಜೋಡಿ ಹಕ್ಕಿಗಳು .ಪ್ರವೀಣ್ ಬಾಗಲಕೋಟೆಯ ಗದ್ದನಕೇರಿ ನಿವಾಸಿ ಹಾಗೂ ನಿತ್ಯ ರಾಯಚೂರಿನ ಸಿಲುವಾರದ ನಿವಾಸಿ.ಇಬ್ಬರೂ ಒಂದಷ್ಟು ವರ್ಷಗಳ ಕಾಲ ತಮ್ಮ ಪ್ರೇಮದಲ್ಲಿ ವಿಹರಿಸಿ ವಿವಾಹ ಬಂಧನಕ್ಕೆ ಒಳಪಟ್ಟಿದ್ದರು.

ಪ್ರವೀಣ್ ಒಬ್ಬ ಜಮೀನುದಾರ ಹಾಗೆ ಆಗರ್ಭ ಶ್ರೀಮಂತ ಮನೆತನದ ವ್ಯಕ್ತಿಯಾಗಿದ್ದ ಅವನು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದರೆ ತಾನೊಬ್ಬ ಲೋಕಲ್ ರಿಪೋರ್ಟರ್ ಅಂತ ಹೇಳಿಕೊಳ್ಳುತ್ತಿದ್ದ ಅದರ ಹೊರತಾಗಿ ಬೇರೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ.ತಂದೆ ತಾಯಿ ಮಾಡಿಟ್ಟಿದ್ದ ಆಸ್ತಿಯಲ್ಲಿ ಹಾಯಾಗಿ ಇದ್ದ ವ್ಯಕ್ತಿಯನ್ನು ಪ್ರೀತಿಯ ಪಾಶ ನಿತ್ಯಾಳ ಕಡೆಗೆ ಸೆಳೆದಿತ್ತು.ಮೊದಮೊದಲು ಪ್ರವೀಣ್ ಮನೆಯವರು ಇವರ ಪ್ರೀತಿಯನ್ನು ಒಪ್ಪಿರಲಿಲ್ಲ ನಂತರ ಒಪ್ಪಿಕೊಂಡು ಮದುವೆ ಮಾಡಿಸಿದ್ದರು. ಮದುವೆ ಆಗಿ 11 ವರ್ಷದ ದಾಂಪತ್ಯದ ಹಾದಿಯನ್ನು ಸವೆಸಿದ್ದರು. ಈ ದಾಂಪತ್ಯದ ಪ್ರೀತಿಯ ಕುರುಹಾಗಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದರು. ಒಂದು ರೀತಿಯಲ್ಲಿ ಸುಖಕರವಾದ ಸಂಸಾರ ಎಂದರು ತಪ್ಪಾಗಲಾರದು.

ಗಂಡ ಹೆಂಡತಿ ಅಂದ ಮೇಲೆ ಜಗಳ ಸರ್ವೇ ಸಾಮಾನ್ಯ ಆದದ್ದು ಹಾಗೆ ಇವರ ನಡುವೆಯೂ ಕೂಡ ಆಗಾಗ ಜಗಳ ನಡೆಯುತ್ತಿತ್ತು ಅದಕ್ಕೆ ಕಾರಣ ಪ್ರವೀಣ್ ನ ಕುಡಿತದ ಚಟಕ್ಕೆ ಬಿದ್ದಿದ್ದ ಜೊತೆಗೆ ಯಾವುದೇ ಕೆಲಸಕ್ಕೆ ಹೋಗ್ತಾ ಇರಲಿಲ್ಲ .ಅಪ್ಪ ಮಾಡುತ್ತಿರುವ ಆಸ್ತಿ ಕರಗಿಸಿದರೆ ಸಾಕು ಎಂಬ ಶೋಕಿ ಜೀವನಕ್ಕೆ ಬಿದ್ದು ಸ್ನೇಹಿತರ ಜೊತೆಗೆ ಸುತ್ತುತ್ತಿದ್ದನು ಪ್ರವೀಣ್ ಹಾಗಾಗಿ ಆಗಾಗ ಗಂಡ ಹೆಂಡತಿ ನಡುವೆ ಜಗಳ ,ಮನಸ್ತಾಪ ನಡೆಯುತ್ತಿತ್ತು.ನಂತರ ಸರಿ ಹೋಗುತ್ತಿತ್ತು.

ನಿತ್ಯ ಆಸೆ ಪಟ್ಟಂತೆ ಪ್ರವೀಣ್ ಒಂದು ಸ್ಕೂಟಿಯನ್ನು ಕೂಡ ಕೊಡಿಸುತ್ತಾನೆ.ಅದರ ಮೇಲೆ ಅವಳ ಸವಾರಿ ಜೋರಾಗಿಯೇ ಇರುತ್ತದೆ .ಪ್ರವೀಣ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಇದರ ನಡುವೆ ರಾಯಚೂರಿನ ಸಿಲುವಾರಕ್ಕೆ ಶಿಫ್ಟ್ ಆಗುತ್ತಾರೆ. ಅದು ನಿತ್ಯಾ ತವರೂರು ಹಾಗಾಗಿ ಅಲ್ಲಿಗೆ ಶಿಫ್ಟ್ ಆಗುತ್ತಾರೆ.

ಒಂದು ದಿನ ನಿತ್ಯ ಸ್ಕೂಟಿ ಕೆಟ್ಟು ಮೂಲೆ ಸೇರುತ್ತೆ ಅದರ ರಿಪೇರಿಗಾಗಿ ಅಲ್ಲೇ ಇದ್ದ ರಾಘವೇಂದ್ರ ಎಂಬುವನ ಬೈಕ್ ಗ್ಯಾರೇಜ್ ಗೆ ಹೋಗುತ್ತಾಳೆ. ಈ ರಾಘವೇಂದ್ರ ನಿತ್ಯಾಳಿಗೆ ಹೊಸ ಪರಿಚಯವೇನು ಆಗಿರಲಿಲ್ಲ. ನಿತ್ಯ ತನ್ನ ತವರೂರು ಆದ ಸಿಲುವಾರದಲ್ಲಿ ಇದ್ದಾಗ ಇಬ್ಬರ ನಡುವೆಯೂ ಆಗಾಗ ಕಣ್ಣ ಕಣ್ಣ ಸಲುಗೆಯ ಮಾತು ಕಥೆಗಳು ನಡೆಯುತ್ತಿದ್ದವು .ಇದರ ಮಧ್ಯೆ ನಿತ್ಯ ಪ್ರವೀಣ್ ನನ್ನು ಪ್ರೀತಿಸಿ ಮದುವೆ ಆದ ನಂತರ ಆಲ್ಮೋಸ್ಟ್ ರಾಘವೇಂದ್ರನನ್ನು ಮರೆತೇ ಹೋಗಿದ್ದಳು. ಆದರೆ ರಾಘವೇಂದ್ರ ಇನ್ನೂ ಮದುವೆಯ ಹಂತಕ್ಕೆ ಹೋಗದೆ ಬ್ಯಾಚುಲರ್ ಆಗೇ ಇದ್ದ ಕಾರಣ ಮತ್ತೆ ಶುರುವಾಗಿತ್ತು ಇಬ್ಬರ ಸ್ನೇಹ .

ಶುರುವಾದ ಈ ಸ್ನೇಹ ಅನೈತಿಕ ಸಂಬಂಧದವರೆಗೆ ಬೆಳೆದು ನಿಲ್ಲುತ್ತದೆ.ಒಳ್ಳೆ ಗಂಡ, ಮುತ್ತಿನಂಥ ಎರಡು ಮಕ್ಕಳು ,ಸುಂದರವಾದ ಸಂಸಾರ ,ಅವಳಿಗೆ ಬೇಕಾದ ಬೇಕು ಬೇಡಗಳೆಲ್ಲವನ್ನು ಪೊರೈಸುತ್ತ ಇದ್ದರೂ ಕೂಡ ನಿತ್ಯಾಗೆ ಮತ್ತೊಬ್ಬನ ಜೊತೆಗೆ ಅನೈತಿಕವಾಗಿ ಸಂಬಂಧ ಬೆಳೆಸುವ ಮನಸ್ಸಾದರು ಹೇಗೆ ಬಂತೋ ತಿಳಿಯದು.

ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದ ಹಾಗೂ ನಂಬುತ್ತಿದ್ದ ಕಾರಣ ಪ್ರವೀಣ್ ಗೆ ಇವರಿಬ್ಬರ ನಡುವಿನ ಸಂಬಂಧದ ಕುರಿತು ಮಾಹಿತಿ ಇರಲಿಲ್ಲ.ಪ್ರವೀಣ್ ನ ನಂಬಿಕೆಯೇ ನಿತ್ಯಾಳ ಪ್ಲೇಸ್ ಪಾಯಿಂಟ್ ಆಗಿತ್ತು.ಜೊತೆಗೆ ಕುಡಿತದ ಅಮಲಿನಲ್ಲಿ ಇರುತ್ತಿದ್ದ ಪ್ರವೀಣ್ ತನ್ನದೇ ಲೋಕದಲ್ಲಿ ಮುಳುಗಿ ಹೋಗಿರುತ್ತದ.ಹಾಗಾಗಿ ರಾಘವೇಂದ್ರ ಮತ್ತು ನಿತ್ಯ ತುಂಬಾನೇ ಮುಂದುವರೆದು ಬಿಡುತ್ತಾರೆ.

ನಂತರ ದಿನಗಳಲ್ಲಿ ಪ್ರವೀಣ್ ಗೆ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಕೆಲವೊಬ್ಬರು ಮಾತಾಡಿ ಕೊಳ್ಳುವುದು ಅವನ ಕಿವಿಗೆ ಬೀಳುತ್ತದೆ.ಹಾಗೆ ಒಂದಿಬ್ಬರು ಸ್ನೇಹಿತರು ಕೂಡ ಆ ವಿಷಯದ ಬಗ್ಗೆ ಅವನಿಗೆ ತಿಳಿಸುತ್ತಾರೆ.ಆದರೂ ಕೂಡ ಪ್ರವೀಣ್ ನಂಬದೆ ಆ ಎಲ್ಲಾ ಅಂಶಗಳನ್ನು ಕಡೆಗಣಿಸಿ ಬಿಡುತ್ತಾನೆ.ಇದರ ಬಗ್ಗೆ ನಿತ್ಯಾಳನ್ನು ಪ್ರಶ್ನಿಸಿದ್ದರೆ ಬೇಸರಗೊಳ್ಳುತ್ತಾಳೆ.ತಾನು ಆಕೆಯನ್ನು ಅನುಮಾನಿಸಿತ್ತಿರುವೆ ಎಂದು ಕೊಳ್ಳುತ್ತಾಳೆ.ಹಾಗಾಗಿ ಕೇಳುವುದು ಬೇಡವೆಂದು ಸುಮ್ಮನಾಗಿ ಬಿಡುತ್ತಾನೆ.

ಆದರೆ ಒಂದು ದಿನ ನಿತ್ಯ ತನ್ನ ಫೋನ್ ನನ್ನು ಮನೆಯಲ್ಲೇ ಬಿಟ್ಟು ಎಲ್ಲೋ ಹೋಗಿರುತ್ತಾಳೆ.ಆ ಸಂದರ್ಭದಲ್ಲಿ ಪ್ರವೀಣ್ ಫೋನ್ ನನ್ನು ಚೆಕ್ ಮಾಡುತ್ತಾನೆ. ಚೆಕ್ ಮಾಡುತ್ತಿದ್ದ ಪ್ರವೀಣ್ ಶಾಕಿಗೆ ಒಳಗಾಗುತ್ತಾನೆ.ಯಾಕಂದ್ರೆ ಅದರಲ್ಲಿ ರಾಘವೇಂದ್ರ ಹಾಗೂ ನಿತ್ಯಾಳ ಆಶ್ಲೀಲ ಸಂದೇಶಗಳು ಮತ್ತು ಮಾತುಕತೆಗಳು ರೆಕಾರ್ಡ್ ಆಗಿರುತ್ತದೆ. ತಾನು ಪ್ರೀತಿಸಿ ಕೈ ಹಿಡಿದ ಮಡದಿ ತನಗೆ ಮೋಸ ಮಾಡಿದ್ದನ್ನು ಸಹಿಸಲು ಆಗದೇ ಅವಳ ಜೊತೆಗೆ ಜಗಳ ಮಾಡಿ ನಿನಂಥ ನೀತಿ ಗೆಟ್ಟ ಹೆಂಗಸಿನ ಜೊತೆ ತನ್ನ ಮಗಳು ಬೆಳೆಯುವುದು ಬೇಡವೆಂದು ರಾತ್ರೋ ರಾತ್ರಿ ಬೈಕ್ ನಲ್ಲಿ ತನ್ನ ಮಗಳನ್ನು ಕರೆದುಕೊಂಡು ತನ್ನ ಊರಾಗಿದ್ದ ಬಾಗಲಕೋಟೆಯ ಗದ್ದನ ಕೇರಿಗೆ ಹೊರಟು ಬಿಡುತ್ತಾನೆ.

ನಿತ್ಯಾ ಗೆ ಭಯ ಶುರುವಾಗುತ್ತೆ ಪ್ರವೀಣ್ ತನ್ನ ವಿಚಾರವನ್ನು ಹೊರಗೆ ,ತನ್ನ ಮನೆಯವರಿಗೆ ಹೇಳಿದ್ದರೆ ತನ್ನ ಮರ್ಯಾದೆ ಜೊತೆಗೆ ಪ್ರವೀಣ್ ನ ಆಸ್ತಿ ಕೂಡ ತಪ್ಪಿ ಹೋಗುತ್ತದೆ ಎಂಬ ಕಾರಣಕ್ಕೆ ರಾಘವೇಂದ್ರ ನಾ ಜೊತೆ ಸೇರಿ ತನ್ನ ಗಂಡನನ್ನೇ ಸಾಯಿಸಲು ಕಾರಿನಲ್ಲಿ ಪ್ರವೀಣ್ ಬೈಕ್ ನನ್ನು ಹಿಂಬಾಲಿಸಿ ಹೋಗುತ್ತಾರೆ. ಅಷ್ಟ್ರಲ್ಲೇ ನಿತ್ಯಾಗೇ ಪ್ರವೀಣ್ ಜೊತೆಗೆ ತನ್ನ ಮಗಳು ಕೂಡ ಇರುವುದು ನೆನಪಾಗಿ ತನ್ನ ಪ್ಲಾನ್ ನ ಕೈ ಬಿಟ್ಟು ಕೇವಲ ಹಿಂಬಾಲಿಸಿ ಹೊರಡುತ್ತಾರೆ.

ಆದರೆ ವಿಧಿಯಾಟವೇ ಬೇರೆಯಾಗಿತ್ತು ಅನಿಸುತ್ತೆ.ಮೊದಲೇ ಕುಡಿತದ ಚಟವನ್ನು ಮೈಗೂಡಿಸಿಕೊಂಡಿದ್ದ ಪ್ರವೀಣ್ ಗೆ ಈಗ ಕುಡಿಯಲು ಮತ್ತೊಂದು ಕಾರಣ ಸಿಕ್ಕಿತ್ತು ಹಾಗಾಗಿ ತನ್ನ ತಾಯಿಗೆ ಕರೆ ಮಾಡಿ ಕಾರನ್ನು ತರಿಸಿಕೊಂಡು ಅದರಲ್ಲಿ ತನ್ನ ಮಗಳನ್ನು ಕಳುಹಿಸಿ ಅಲ್ಲೇ ಇದ್ದ ಬಾರ್ ಒಳಗೆ ಹೋಗಿ ಕಂಠ ಪೂರ್ತಿ ಕುಡಿದು ಹೊರ ಬರುತ್ತಾನೆ.ಇದೆಲ್ಲವನ್ನೂ ಅಲ್ಲೇ ಹತ್ತಿರದಿಂದ ನೋಡುತ್ತಿದ್ದ ರಾಘವೇಂದ್ರ ಮತ್ತು ನಿತ್ಯ ಮತ್ತೆ ತಮ್ಮ ಪ್ಲಾನ್ ಅನ್ನು ಮುಂದುವರೆಸುತ್ತಾರೆ.

ಕಂಠ ಪೂರ್ತಿ ಕುಡಿದು ಗಾಡಿ ಓಡಿಸುತ್ತಿದ್ದ ಪ್ರವೀಣ್ ಬೈಕ್ ಗೆ ತಮ್ಮ ಕಾರಿನಿಂದ ಗುದ್ದಿಕೊಂಡು ಹೋಗಿ ಬಿಡುತ್ತಾರೆ. ಅದೃಷ್ಟವಶಾತ್ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗುತ್ತಾನೆ. ಆಗಲೂ ಕೂಡ ಅವನು ನಂಬುವುದು ತನ್ನ ಹೆಂಡತಿಯನ್ನೇ.ಆಕೆಗೆ ಕರೆ ಮಾಡಿ ತನಗೆ ಆಕ್ಸಿಡೆಂಟ್ ಆಗಿ ಹೋಗಿದೆ.ಸಣ್ಣ ಪುಟ್ಟ ಗಾಯಗಳಿಂದ ಗಂಟಲು ಒಣಗಿ ಹೋಗುತ್ತಿದೆ ನೀರು ಬೇಕು ,ನೀನು ಬರಲು ಆಗದಿದ್ದರೆ ಯಾರನ್ನಾದರೂ ಕಳುಹಿಸು ಸಹಾಯಕ್ಕೆ ಎಂದು ಹೇಳುತ್ತಾನೆ.

ಇದನ್ನು ಕೇಳಿದ ನಿತ್ಯಾ ಶಾಕ್ ಆಗಿ ತನ್ನ ಗಂಡ ಇನ್ನೂ ಸತ್ತಿಲ್ಲ ಎಂದರಿತ ನೀಚ ಹೆಣ್ಣು ಮತ್ತೆ ಕಾರಲ್ಲಿ ವಾಪಸ್ಸು ಬಂದು ,ಹೇಗೋ ವಾಲಾಡುತ್ತಲ್ಲೇ ಎದ್ದು ರೋಡಿನ ಕಡೆಗೆ ಬಂದಿದ್ದ ತನ್ನ ಗಂಡನನ್ನು ಗುದ್ದಿ ಸಾಯಿಸಿ ಹೋಗುತ್ತಾಳೆ ರಾಕ್ಷಸಿ.ತನ್ನ ಮಡದಿ ತನ್ನನ್ನು ಕಾಪಾಡುತ್ತಾಳೆ ಎಂದುಕೊಂಡವನಿಗೆ ,ಅವಳೇ ಯಮಸ್ವರೋಪಿಣಿಯಾಗಿ ಬರುತ್ತಾಳೆ ಎನ್ನುವುದು ಆ ಮೂರ್ಖ ಗಂಡನಿಗೆ ತಿಳಿಯದೆ ಅವಳ ಕೈಯಿಂದಲೇ ಅಸುನೀಗಿದ.

ತನಿಖೆ ಶುರುಮಾಡಿದ ಪೊಲೀಸ್ ನವರಿಗೆ ಮೊದಲು ಇದು ಹಿಟ್ ಅಂಡ್ ರನ್ ಕೇಸ್ ಅಂದುಕೊಳ್ಳುತ್ತಾರೆ.ಆದರೆ ಪ್ರವೀಣ್ ದೇಹವನ್ನು ಪರಿಶೀಲಿಸಿದ ನಂತರ ಇದು ಯಾರೋ ಬೇಕಂತಲೇ ಗಾಡಿ ಹತ್ತಿಸಿ ಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ.ಹಾಗಾಗಿ ಮೊದಲು ಅನುಮಾನ ಮೂಡುವುದು ನಿತ್ಯಾ ಮೇಲೆ ಆದರೆ ಅವಳ ನಾಟಕದ ಕಣ್ಣೀರಿಗೆ ಒಳಗಾಗಿ ಬೇರೊಂದು ರೀತಿಯಲ್ಲಿ ತನಿಖೆ ಶುರು ಮಾಡಿದಾಗ ನಿತ್ಯ ಹಾಗೂ ರಾಘವೇಂದ್ರ ನ ಸಂಬಂಧ ಬೆಳಕಿಗೆ ಬರುತ್ತದೆ. ಇಬ್ಬರನ್ನೂ ವದ್ದು ಎಳೆದು ತಂದು ತಮ್ಮ ರೀತಿಯಲ್ಲಿ ತನಿಖೆ ನಡೆಸಿದ್ದಾಗ ಈ ಎಲ್ಲಾ ವಿಚಾರಗಳನ್ನು ಬಾಯಿ ಬಿಡುತ್ತಾರೆ.

Leave a Comment

error: Content is protected !!