ಎಂಥ ಕ್ರಿ’ಮಿ’ನಲ್ ಮೈಂಡ್ ಗಳು ನಮ್ಮ ನಡುವೆ ಇದ್ದಾರೆ ಅಂತ ನಿಜಕ್ಕೂ ಆಶ್ವರ್ಯ ಅನ್ನಿಸುತ್ತೆ. ಆದ್ರೆ ಅವರು ಎಷ್ಟೇ ಬುದ್ದಿವಂತಿಕೆಯಿಂದ ತಪ್ಪು ಮಾಡಿದ್ರೂ ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಬೀಳಲೇ ಬೇಕು. ಚಾಲಾಕಿ ಕೊ’ಲೆ ಪಾ’ತಕಿ’ಯ ಸ್ಟೋರಿ ಇದು.ಬಾಗಲಕೋಟೆಯ ಹನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಒಂದು ರಸ್ತೆ ಅಪಘಾತ ನಡೆದಿತ್ತು. ಈ ಘಟನೆ ನಡೆದದ್ದು ಜುಲೈ 2 ರ ಮಧ್ಯ ರಾತ್ರಿ.

ಈ ಅಪಘಾತದಲ್ಲಿ 30 ವರ್ಷದ ಪ್ರವೀಣ ಸೇಬಣ್ಣವರ ಭೀ’ಕರವಾಗಿ ಸಾ’ವನ್ನಪ್ಪಿದ್ದರು. ಇದು ಅಪಘಾತವೇ ಎಂದು ಮೊದಲ ತನಿಖೆಯಲ್ಲಿ ಪೊಲೀಸರು ನಿರ್ಧರಿಸಿದ್ದರು. ಆದರೆ ಸುಮಾರು 16 ದಿನಗಳ ಬಳಿಕ ಬಾಗಲಕೋಟೆ ಪೊಲೀಸರು ಆಘಾತಕಾರಿ ವಿಷಯವೊಂದನ್ನು ಹೊರಹಾಕಿದ್ದಾರೆ. ಇದು ಕೇವಲ ಅಪಘಾತವಲ್ಲ, ಕೊ’ಲೆ ಎಂಬ ಸತ್ಯ ಬಹಿರಂಗವಾಗಿದೆ. ಅದರಲ್ಲೂ ಈ ಕೃತ್ಯವನ್ನು ಯಾರು ಮಾಡಿದ್ದು ಎಂದು ತಿಳಿದ ಮೇಲೆ ಪೊಲೀಸರೂ ಕೂಡ ದಂಗಾಗಿದ್ದಾರೆ.

ಪ್ರವೀಣ ಸೇಬಣ್ಣವರನ್ನು ಅವರನ್ನ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ನಿತ್ಯಾನೆ ಹ’ತ್ಯೆ ಮಾಡಿದ್ದಾಳೆ ಎಂದು ಆರೋಪ ಕೇಳಿಬಂದಿದೆ. ಹೌದು, ನಿತ್ಯಾ ಹಾಗೂ ಪ್ರವೀಣ ಸೇಬಣ್ಣವರ ಇಬ್ಬರೂ ಪ್ರೀತಿಸಿಯೇ ಮದುವೆಯಾಗಿದ್ದು. ಆದರೆ ಮದುವೆಯಾದ ಮೇಲೆ ನಿತ್ಯಾಳಿಗೆ ಇನ್ನೊಬ್ಬ ಹುಡುಗನ ಮೇಲೆ ಪ್ರೀತಿಯಾಗಿದೆ. ಹಾಗಾಗಿ ತಮ್ಮ ದಾರಿಗೆ ಅಡ್ಡ ಇರುವ ಪ್ರವೀಣನನ್ನು ಮುಗಿಸಲು ನಿತ್ಯ ಹಾಗೂ ಆಕೆಯ ಪ್ರಿಯಕರ ಪ್ಲಾನ್ ಮಾಡಿದ್ದಾರೆ.

ವಿವಾಹೇತರ ಸಂಬಂಧವನ್ನು ಹೊಂದಿದ್ದ ನಿತ್ಯ ಗಂಡನನ್ನು ಹತ್ಯೆ ಮಾಡಲು ಸರಿಯಾದ ಸಮಯಕ್ಕೆ ಕಾಯುತ್ತಿರುತ್ತಾಳೆ. ತನ್ನ ಪ್ಲಾನ್ ನಂತೆ ಜುಲೈ 2ರ ಮಧ್ಯರಾತ್ರಿ 12ರ ಸಮಯದಲ್ಲಿ ಕಮತಗಿ ಕ್ರಾಸ್ ಬಳಿ ಕಾರಿನಲ್ಲಿ ತನ್ನ ಪ್ರಿಯಕರ ರಾಘವೇಂದ್ರನ ಜೊತೆ ಬಂದ ನಿತ್ಯಾ ಗಂಡನಿಗೆ ಆ’ಕ್ಸಿ’ಡೆಂಟ್ ಮಾಡಿಸಿದ್ದಾಳೆ. ಕಾರಿನಿಂದ ಡಿಕ್ಕಿ ಹೊಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಸ್ವಲ್ಪ ಸಮಯದ ಬಳಿಕ ಅಪಘಾತಕ್ಕೆ ಒಳಗಾದ ಪ್ರವೀಣ್ ತನ್ನ ಹೆಂಡತಿಗೆ ಕರೆ ಮಾಡಿ ತನಗೆ ಅಪಘಾತವಾದ ಸುದ್ದಿಯನ್ನು ಹೇಳುತ್ತಾನೆ. ಆದರೆ ನಿತ್ಯ ಇನ್ನು ಬದುಕಿದ್ದಾನೆ ಎಂದು ಮತ್ತೆ ಕಾರ್ ನಲ್ಲಿ ಬಂದು ಡಿಕ್ಕಿ ಹೊಡೆಸುತ್ತಾಳೆ. ಮೊದಲ ತನಿಖೆಯಲ್ಲಿ ಇದು ಕೇವಲ ಅಪಘಾತ ಎಂದೇ ಪೊಲೀಸರು ಭಾವಿಸಿದರು. ಬಳಿಕ ಪ್ರವೀಣನ ಕತ್ತು, ಮೈ ಮೇಲಿರುವ ಗಾಯದ ಗುರುತುಗಳು ಆತನನ್ನು ಉದ್ದೇಶ ಪೂರ್ವಕವಾಗಿಯೇ ಆ’ಕ್ಸಿ’ ಡೆಂಟ್ ಮಾಡಿಸಲಾಗಿದೆ ಎಂಬುದನ್ನು ಸಾಬೀತು ಪಡಿಸುತ್ತಿದ್ದವು. ಹಾಗಾಗಿ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿ, ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿದ್ದಾರೆ.

By admin

Leave a Reply

Your email address will not be published.