10 ರಿಂದ 14 ಲಕ್ಷದಲ್ಲಿ ಕಟ್ಟಬಹುದಾದ 2 BHK ಸುಂದವರಾದ ಮನೆ

ಸಾಮಾನ್ಯವಾಗಿ ಅನುಕೂಲಕರವಾದ 2 BHK ಮನೆ 900 ಚದರ ಅಡಿಯಿಂದ 1100 ಚದರ ಅಡಿ ಇದ್ದರೆ ಉತ್ತಮ. ಅದು ಎಲ್ಲ ರೀತಿಯಲ್ಲಿಯೂ ಅನುಕೂಲಕರ ವಾಗಿರುತ್ತದೆ. ಇದು ಅವರವರ ಅಭಿರುಚಿಯನ್ನು ಅವಲಂಬಿಸಿರುತ್ತದೆ. ಅದಕ್ಕಿಂತ ಹೆಚ್ಚಾಗಿ ಬಜೆಟ್ ಅತಿ ಮುಖ್ಯ. ನನ್ನ ಪ್ರಕಾರ ಮನೆ ದೊಡ್ಡದಿದ್ದರೆ ಒಳ್ಳೆಯದು. 30′ x 40′ ಅಳತೆಯ ನಿವೇಶನವನ್ನು ಗಮನದಲ್ಲಿರಿಸಿಕೊಂಡು ಒಂದು ಉದಾಹರಣೆ ಕೊಡುತ್ತೇನೆ.

ಅತ್ಯಂತ ವಿಶಾಲವಾದ ಮನೆಯ ಸಾಂದರ್ಭಿಕವಾದ ಪ್ಲಾನ್ ನೋಡಿ ಇದು.ಹಾಲ್/ಲಿವಿಂಗ್: 13′ x 16′ = 208 sft. ಕಿಚನ್: 10′ x 8′ = 80 sft. ಯುಟಿಲಿಟಿ: 8′ x 4′ = 32 sft. ಡೈನಿಂಗ್: 10′ x 8′ = 80 sft. ಬೆಡ್ ರೂಮ್ 1: 12′ x 13′ = 156 sft. ಬೆಡ್ ರೂಮ್ 2: 12′ x 13 =156 sft. ಬಾತ್ ರೂಮ್ 1: 8′ x 6′ = 48 sft. ಬಾತ್ ರೂಮ್ 2: 8′ x 6′ = 48 sft. ಗೋಡೆಗಳು 80 sft. ಪಾರ್ಕಿಂಗ್ 12′ x 14′ = 168 sft. ಕಾರಿಡಾರ್/ಪ್ಯಾಸೇಜ್ ಉಪಯೋಗವಾಗದ ಜಾಗಗಳು 30 sft. ಒಟ್ಟು ವಿಸ್ತೀರ್ಣ : 1056 sft.

ಇಷ್ಟು ವಿಸ್ತೀರ್ಣದ ಒಳಾಂಗಣ ಇದ್ದರೆ ತುಂಬಾ ಅನುಕೂಲಕರವಾದ ಮತ್ತು ವಿಶಾಲವಾದ ಎರಡು ಕೋಣೆಗಳುಳ್ಳ ಸುಂದರ ಮನೆ ಆಗುತ್ತದೆ. 30′ x 40′ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಬಹುದಾದ ದೊಡ್ಡ ಮನೆ ಇದು. ಅಗತ್ಯತೆ ಮತ್ತು ಅಂದಾಜು ವೆಚ್ಚವನ್ನು ನೋಡಿಕೊಂಡು ಸ್ವಲ್ಪ ಬದಲಾವಣೆ ಮಾಡಿಕೊಳ್ಳಬಹುದು.

ಹಾಗೆ ಮನೆ ಕಟ್ಟುವ ಪ್ರತಿಯೊಬ್ಬರಿಗೂ ಮನೆ ಹೇಗಿರಬೇಕು, ವಿಸ್ತೀರ್ಣ ಎಷ್ಟಿರಬೇಕು, ಹೊರಾಂಗಣದಲ್ಲಿ ಎಷ್ಟು ಜಾಗ ಬಿಡಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯಗಳು ಇರುತ್ತವೆ.
ಮನೆ ಕಟ್ಟುವಾಗ ವಾಸ್ತು ಸಹ ಅನಿವಾರ್ಯ. ಅಡಿಪಾಯ ಹಾಕಿದರೆ ಮನೆ ಗಟ್ಟಿಯಾಗುತ್ತದೆ. ವಾಸ್ತು ಪ್ರಕಾರ ಮನೆ ಕಟ್ಟಿಸಿದರೆ ಮನೆಯಲ್ಲಿ ವಾಸಿಸುವವರು ಗಟ್ಟಿಯಾಗಿರುತ್ತಾರೆ ಎನ್ನುತ್ತಾರೆ ವಾಸ್ತು ತಜ್ಞರು. ಹಾಗಾಗಿ ಇತ್ತೀಚೆಗೆ ಮನೆ ಕಟ್ಟುವ ಮುನ್ನ ವಾಸ್ತು ತಜ್ಞರನ್ನು ಭೇಟಿ ಮಾಡಿ, ವಿಚಾರಣೆ ನಡೆಸಿ ಮನೆ ಕಟ್ಟುವವರಿಗೇನೂ ಕೊರತೆಯಿಲ್ಲ.

ಈ ಮೊದಲು ಮನೆ ಕಟ್ಟುವುದು ಕಷ್ಟದ ಮಾತಾಗಿತ್ತು. ಆದರೆ ಈಗ ಜಾಗ ಖರೀಸುವುದೇ ದೊಡ್ಡ ಸವಾಲು.
ಜಾಗ ಖರೀದಿಸುವಾಗ ಕಾಗದ ಪತ್ರಗಳ ಪರಿಶೀಲನೆ, ಅದಕ್ಕಾಗಿ ಓಡಾಟ, ಖಾತಾ ಆಗಬೇಕು, ಮನೆ ನಿರ್ಮಿಸಲು ಮಂಜೂರಾತಿ ದೊರೆಯಬೇಕು, ಬ್ಯಾಂಕ್ ಲೋನ್ ತೆಗೆಯಬೇಕು. ಇಷ್ಟೆಲ್ಲಾ ಕಷ್ಟಗಳಿದ್ದರೂ, ಸ್ವಂತ ಮನೆ ಕಟ್ಟಬೇಕು ಎನ್ನುವವರಿಗೇನೂ ಕಡಿಮೆ ಇಲ್ಲ. ಇತ್ತೀಚೆಗೆ ಎಲ್ಲೆಡೆ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗಾಗಿ ಜಾಗ ಖರೀದಿಗೆ ಮುನ್ನ ಮುಂಜಾಗ್ರತೆ ಮುಖ್ಯ. ಕಾಗದ ಪತ್ರಗಳನ್ನು ಸರಿಯಾಗಿ ಓದಿಕೊಳ್ಳಬೇಕು.ಅಲ್ಲದೆ ಇಬ್ಬರು ಆಪ್ತ ವಕೀಲರಿಂದ ಕಾಗದ ಪತ್ರಗಳನ್ನು ಪರಿಶೀಲನೆ ಮಾಡಿಸಬೇಕು. ಖರೀದಿಸಿದ ಭೂಮಿಗೆ ಸಾಲ ಮಂಜೂರಾತಿ ದೊರತರೆ ಜಾಗದ ಮೇಲೆ ಸಾಲ ಬೇಕೇ ಅಥವಾ ಕಾಂಪೋಸಿಟ್ ಲೋನ್ ಬೇಕೇ ಎಂಬುದರ ನಿರ್ಧಾರ ಮಾಡಿಕೊಳ್ಳಬೇಕು.

ಚಿಕ್ಕ ಜಾಗದಲ್ಲೇ ವಿಶಾಲವಾಗಿರುವಂತೆ ಮನೆ ಕಟ್ಟಬೇಕು. ಇರುವ ಇಂಚಿಂಚೂ ಜಾಗ ಬಿಡದೆ ಬಳಸಿಕೊಳ್ಳಬೇಕು ಎಂಬ ತುಡಿತ ಮಾಲೀಕನಿಗಿರುತ್ತದೆ. ಮನೆ ಕಟ್ಟುವುದಕ್ಕೂ ಮುನ್ನ ಮಾಲೀಕ ಮನೆ ನಿರ್ಮಾಣಕ್ಕಾಗಿ ವಿನ್ಯಾಸ ಮಾಡಿಸಿಕೊಳ್ಳಬೇಕು.ಕಟ್ಟುವ ಮನೆ ಹಾಗಿದ್ದರೆ ಚೆನ್ನ, ಇಂತಿದ್ದರೆ ಚೆನ್ನ ಎಂಬುದು ತಮ್ಮಿಚ್ಛೆಯಾದರೆ, ಇನ್ನೂ ಅಕ್ಕಪಕ್ಕದವರ ಸಲಹೆಗಳಿಗೇನೂ ಕೊರತೆ ಇರುವುದಿಲ್ಲ. ಎಲ್ಲದರ ನಡುವೆ ನಮ್ಮಿಚ್ಛೆಯಂತೆ, ತಮ್ಮ ಬಜೆಟ್‌ಗೆ ಹೊಂದಿಕೆಯಾಗುವಂತಹ ಮನೆ ಕಟ್ಟುವುದು ಸೂಕ್ತ.

ಗಾಳಿ, ಬೆಳಕು ಸರಾಗವಾಗಿ ಬರುತ್ತದೆಯೇ ಎಂಬುದರ ಅರಿವು ಅಗತ್ಯ. ಅದಕ್ಕಾಗಿ ಆರ್ಕಿಟೆಕ್ಟ್, ಇಂಟೀರಿಯರ್ ಡಿಸೈನರ್ ಸಲಹೆ, ಸೂಚನೆಗಳನ್ನು ಪಡಯಬೇಕು.ಹಲವಾರು ಬಗೆಯ, ಬಗೆ ಬಗೆ ವಿನ್ಯಾಸದ ಮನೆಗಳನ್ನು ನೋಡಿ, ಮಾಹಿತಿ ಪಡೆದು, ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿತು, ಮುಂದಿನ 20-25 ವರ್ಷಗಳವರೆಗೂ ಹೊಂದಿಕೆಯಾಗುವಂತಹ ಮನೆ ನಿರ್ಮಿಸಲು ಮುಂದಾಗಬೇಕು.ಮನೆ ಕಟ್ಟುವಾಗ ಹೆಚ್ಚು ಮೂಲೆಗಳು ಬರದಂತೆ ನೋಡಿಕೊಳ್ಳಬೇಕು. ಮೂಲೆಗಳು ಹೆಚ್ಚಿನ ಸ್ಥಳವನ್ನು ಆಕ್ರಮಿಸುತ್ತವೆ. ಮೂಲೆಗಳು ಕಡಿಮೆಯಿದ್ದಷ್ಟು ಮನೆ ದೊಡ್ಡದಾಗಿ ಕಾಣುತ್ತದೆ. ಮೂಲೆ ರಹಿತ ಕೊಠಡಿಗಳನ್ನು ನಿರ್ಮಿಸಿದರೆ ಮನೆ ವಿಶಾಲವಾಗಿರುತ್ತದೆ. ಇರುವ ಸ್ಥಳದಲ್ಲೇ ದೊಡ್ಡದಾಗಿ, ಗಾಳಿ, ಬೆಳಕು ಮನೆಯೊಳಗೆ ಬರುವಂತೆ ಮನೆ ವಿನ್ಯಾಸ ಮಾಡಬೇಕು.

ಮಲಗುವ ಕೊಠಡಿ, ರೀಡಿಂಗ್ ರೂಮ್, ಲೀವಿಂಗ್ ರೂಮ್, ಅಡುಗೆ ಮನೆಗೆ ಗಾಳಿ, ಬೆಳಕು ಸರಾಗವಾಗಿ ಬರುವಂತೆ ನಿರ್ಮಿಸಬೇಕಾದರೆ ಅರ್ಧ ಚಂದ್ರಾಕಾರದಲ್ಲಿ ಮನೆ ಕಟ್ಟುವುದು ಉತ್ತಮ.
ಮನೆ ನಿರ್ಮಾಣವನ್ನು ಗುತ್ತಿಗೆಗೆ ಕೊಟ್ಟಿದ್ದರೆ, ಬಳಸುವ ಸಾಮಾಗ್ರಿಗಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಮನೆಗೆ ಬೇಕಾಗುವಷ್ಟು ಕ್ಯೂರಿಂಗ್ ಅಲ್ಲದೆ, ಮಳೆಗಾಲದಲ್ಲಿ ಗೋಡೆಗಳಲ್ಲಿ ನೀರು ಒಸರದಂತೆ ನೋಡಿಕೊಳ್ಳಬೇಕು.ಪ್ಲಂಬಿಂಗ್, ಸಿವಿಯೇಜ್ ಲೈನ್, ಸ್ಯಾನಿಟರಿ ಲೈನ್ ಎಲ್ಲದರ ಯೋಜನೆ ಮಾಡಿಕೊಳ್ಳುವುದು ಸೂಕ್ತ. ಅಲ್ಲದೆ ಸೋಲಾರ್ ಸಿಸ್ಟಮ್, ರೇನ್ ವಾಟರ್ ಹಾರ್ವೆಸ್ಟಿಂಗ್ ಮಾಡಿಸಿಕೊಳ್ಳುವುದು ಸೂಕ್ತ. ಸೂರ್ಯನ ಬೆಳಕು, ಗಾಳಿ ಒಳಬರಲು ದೊಡ್ಡ ದೊಡ್ಡ ಕಿಟಕಿಗಳು ಇದ್ದರೆ ಒಳ್ಳೆಯದು. ಅಲ್ಲದೆ ನೋಡಲೂ ಸುಂದರವಾಗಿರುತ್ತವೆ.

ನಮ್ಮ ಮನೆ ಬೇರೆಯವರದ್ದಕ್ಕಿಂತ ಭಿನ್ನವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಹಾಗಾಗಿ ಇತ್ತೀಚೆಗೆ ಬಗೆ ಬಗೆ ವಿನ್ಯಾಸದ ಮನೆಗಳಿಗೆ ಹೆಚ್ಚಿನ ಪ್ರಾಧಾನ್ಯತೆಯೂ ದೊರೆಯುತ್ತಿದೆ.
ಆದಷ್ಟು ಮನೆಯನ್ನು ತೆರೆದಂತೆ ವಿನ್ಯಾಸ ಮಾಡಿದರೆ ವಿಶಾಲವಾಗಿ ಕಾಣುವುದಲ್ಲದೆ, ಗಾಳಿ, ಬೆಳಕು ಸುಲಲಿತವಾಗಿ ಒಳಗೆ ಬರುತ್ತದೆ. ವಿಶಾಲವಾದ ಮನೆ ಕಟ್ಟಲು ದೊಡ್ಡ ಜಾಗ ಬೇಕು ಎಂದೇನಿಲ್ಲ. ಇರುವ ಜಾಗದಲ್ಲೇ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು. ವಾಸ್ತು ತಜ್ಞರು ಹೇಳುವ ಪ್ರಕಾರ
ಮೊದಲು ಖರೀದಿಸಿದ ಜಾಗ ಶುದ್ಧ ಮಾಡಿಕೊಳ್ಳಬೇಕು. ಈಶಾನ್ಯದಲ್ಲಿ ಶಂಕುಸ್ಥಾಪನೆ ಮಾಡಿ, ಆ ಜಾಗದಿಂದಲೇ ಮನೆ ಕಟ್ಟಲು ಆರಂಭಿಸಬೇಕು.ನೈಋತ್ಯ ಮೂಲೆಯನ್ನು ಸರಿಯಾದ ಮಟ್ಟಕ್ಕೆ ಕಟ್ಟಿದರೆ, ಆ ಮನೆಗೆ ಲಕ್ಷ್ಮಿ ಬರುತ್ತಾಳೆ.

ನೈಋತ್ಯದಿಂದ ಗೋಡೆ ನಿರ್ಮಿಸಿದರೆ ಮನೆಗೆ ಶುಭದ ರಕ್ಷಣೆ ದೊರೆಯುತ್ತದೆ. ಈಶಾನ್ಯದಲ್ಲಿ ಪಾಯ ತೋಡಿದರೆ ಯಾವುದೇ ಅಡೆತಡೆ ಬಾರದು. ಮನೆ ಸುತ್ತ ಕನಿಷ್ಠ ಎರಡು ಅಡಿ ಜಾಗ ಬಿಡಿ. ಆವರಣ ಗೋಡೆ ನಿರ್ಮಿಸಿದರೆ ಅಷ್ಟದಿಕ್ಪಾಲಕರಿಂದ ರಕ್ಷಣೆ ದೊರೆಯುತ್ತದೆ. ಸಂಬಂಧಿತ ಸುದ್ದಿ ಹೊಸ ಮನೆ ಖರೀದಿಸುವಾಗ ಈ ವಾಸ್ತು ದಿಕ್ಕುಗಳನ್ನು ಮುಖ್ಯವಾಗಿ ಪರಿಗಣಿಸಲೇಬೇಕು. ಇಲ್ಲವಾದರೆ ಸಮಸ್ಯೆ ತಪ್ಪಿದ್ದಲ್ಲ. Video Credit For Kannada Kuvara Vlog

Leave a Comment

error: Content is protected !!