ಮಹೇಂದ್ರ ಸಿಂಗ್ ಧೋನಿಯವರು ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರಂತಹ ಫಿನಿಶರ್ ಮತ್ತು ಕ್ಯಾಪ್ಟನ್ ಮತ್ತೊಬ್ಬರಿಲ್ಲ. ಮಹೇಂದ್ರ ಸಿಂಗ್ ಧೋನಿಯವರು ಮೈದಾನಕ್ಕಿಳಿದರೆ ಕ್ರಿಕೆಟ್ ವೀಕ್ಷಕರಿಗೆ ಎಲ್ಲಿಲ್ಲದ ಸಡಗರ. ಎಲ್ಲಾ ಕ್ರಿಕೆಟ್ ವೃತ್ತಿಗೆ ಧೋನಿಯವರು ನಿವೃತ್ತಿಯನ್ನು ಘೋಷಿಸಿ ಇದೀಗ ಕೇವಲ ಐಪಿಎಲ್ ಆಟವನ್ನು ಮಾತ್ರ ಆಡುತ್ತಿದ್ದಾರೆ. ಇಂಡಿಯನ್ ಟೀಮ್ ನಲ್ಲಿ ನಾವೆಲ್ಲ ಧೋನಿಯವರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತಿರುವುದು ನಿಜ.

ಧೋನಿ ನಿವೃತ್ತಿ ತೆಗೆದುಕೊಂಡ ನಂತರ ಭಾರತ ತಂಡಕ್ಕೆ ಕೋಚ್ ಮತ್ತು ಮೆಂಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ನಿಮಗೆ ಇನ್ನೊಂದು ವಿಷಯ ಗೊತ್ತೇ ಮಹೇಂದ್ರ ಸಿಂಗ್ ಧೋನಿಯವರು ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಇವರ ಒಟ್ಟು ಆಸ್ತಿ 1000 ಕೋಟಿ ಎಂದು ಅಂದಾಜು ಮಾಡಲಾಗಿದೆ. ಪ್ರತಿ ತಿಂಗಳಿಗೆ ಧೋನಿಯವರು 4ಕೋಟಿ ರುಪಾಯಿಗಳನ್ನು ಪಡೆಯುತ್ತಿದ್ದರು. ಈಗಲೂ ಅಷ್ಟೇ ಧೋನಿ ಅವರು ಐಪಿಎಲ್ ನಿಂದ ಮತ್ತು ಪ್ರಚಾರಗಳಿಂದ ಪ್ರತಿವರ್ಷ ಐವತ್ತು ಕೋಟಿಗೂ ಅಧಿಕ ಹಣವನ್ನು ಸಂಪಾದನೆ ಮಾಡುತ್ತಾರೆ.

ಇದ್ದಕ್ಕಿದ್ದಂತೆ ಇದೀಗ ಧೋನಿ ಅವರಿಗೆ ತೀವ್ರವಾದ ಮೊಣಕಾಲು ನೋವು ಶುರುವಾಗಿದೆ. ಮೊಣಕಾಲು ನೋವು ಸೊಂಟ ನೋವು ಶುರುವಾಗುತ್ತಿದ್ದಂತೆ ಕ್ರಿಕೆಟ್ ಆಟಗಾರರು ವಿದೇಶಕ್ಕೆ ಹೋಗಿ ಅತ್ಯಾಧುನಿಕ ಸೌಲಭ್ಯರ್ಯಗಳನ್ನು ಮಾಡಿಸಿಕೊಳ್ಳುತ್ತಾರೆ ಆದರೆ ಮಹೇಂದ್ರ ಸಿಂಗ್ ಧೋನಿ ಅವರು ಬೇರೆ ಆಟಗಾರರ ಅದೆಲ್ಲ ತುಂಬಾ ಸಿಂಪಲ್ ಮತ್ತು ಸಾಧಾರಣ ವ್ಯಕ್ತಿ. ಯಾಕೆಂದರೆ ಧೋನಿ ಅವರು ತಮ್ಮ ಮೊಣಕಾಲು ನೋವಿಗೆ ನಲವತ್ತು ರೂಪಾಯಿಯ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಮಗೆ ಆಶ್ಚರ್ಯ ಎನಿಸಿದರೂ ಇದು ನಿಜ.

ಕಳೆದ ಒಂದು ತಿಂಗಳಿಂದ ಧೋನಿ ಅವರಿಗೆ ತುಂಬಾ ಮೊಣಕಾಲು ನೋವು ಕಾಣಿಸಿಕೊಂಡಿತು. ಡುಮಿನಿ ಅವರು ಯಾವುದೇ ಖಾಸಗಿ ಆಸ್ಪತ್ರೆಗೆ ಹೋಗಲಿಲ್ಲ.. ಬದಲಾಗಿ ರಾಂಚಿಯಿಂದ ಎಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಕಟಿಂಗ್​ಕೆಲಾದಲ್ಲಿ ಬಂಧನ್​ ಸಿಂಗ್​​ ಎಂಬ ವೈದ್ಯರ ಬಳಿ ಹೋಗಿದ್ದಾರೆ. ಬಂಧನ್​ ಸಿಂಗ್​​ ಎಂಬ ವೈದ್ಯರು ಮರದ ಕೆಳಗೆ ಕೂತು ಕೊಂಡು ಮೊಣಕಾಲಿನ ನೋವಿಗೆ ಚಿಕಿತ್ಸೆ ನೀಡುತ್ತಾರೆ. ಧೋನಿ ಅವರು ಸಾಮಾನ್ಯವಾಗಿ ತಮಗೆ ದೇಹದಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಂಡರೂ ಈ ವೈದ್ಯರ ಬಳಿಗೆ ಬರುತ್ತಾರೆ.

ಬಂಧನ್​ ಸಿಂಗ್​​ ವೈದ್ಯರ ಪೋಷಕರ ಬಳಿ ಕೂಡ ಧೋನಿ ಚಿಕಿತ್ಸೆ ಪಡೆದಿದ್ದರು. ಸತತ 1ತಿಂಗಳಿಂದ ಪ್ರತಿ 4 ದಿನಕ್ಕೊಮ್ಮೆ ಮಹೇಂದ್ರ ಸಿಂಗ್ ಧೋನಿ ಅವರು ಬಂಧನ್ ಸಿಂಗ್ ವೈದ್ಯರ ಬಳಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಬಂಧನ್ ಸಿಂಗ್ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಮಾತನಾಡಿದ್ದಾರೆ “ಇತರೆ ರೋಗಿಗಳಂತೆ ಧೋನಿ ಇಲ್ಲಿಗೆ ಬರುತ್ತಾರೆ. ಅವರಲ್ಲಿ ತಾನು ದೊಡ್ಡ ಕ್ರಿಕೆಟಿಗ ಎಂಬ ಅಹಂಕಾರ ಇಲ್ಲ. ಒಂದು ತಿಂಗಳಿಂದ ಇಲ್ಲಿಗೆ ಬರುತ್ತಿದ್ದಾರೆ, ತಮ್ಮ ಕಾರಿನಲ್ಲಿಯೇ ಕುಳಿತುಕೊಂಡು ಧೋನಿ ಅವರು ಡೋಸ್​ ಪಡೆದುಕೊಳ್ಳುತ್ತಾರೆ. ಅನೇಕರು ಅವರೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದಾರೆ” ಎಂದರು.

By admin

Leave a Reply

Your email address will not be published.