ಜೂನ್ 14 ರಂದು ಬಿಹಾರ ರಾಜ್ಯದ ಮುಂಗೇರ್ ನ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಮಗ ವಿವೇಕ್ ಪೊದ್ದಾರ್ ಮತ್ತು ನೌವಾಗರ್ಹಿಯ ನಿವಾಸಿಯಾದ ರಾಮ್ವಿಲಾಸ್ ಪೊದ್ದಾರ್ ಅವರ ಮಗಳು ಮೋನಿ ಕುಮಾರಿ ಅವರ ವಿವಾಹ ನಡೆದಿತ್ತು.ವಿವಾಹ ನಡೆದ ಒಂದೇ ವಾರದೊಳಗಡೆ ಪತ್ನಿ ಮೋನಿ ಕುಮಾರಿ ತನ್ನ ಪ್ರಿಯಕರನ ಜೊತೆ ಸಿನಿಮಾ ಸ್ಟೈಲ್ ನಲ್ಲಿ ಗಂಡನಿಗೆ ಯಾಮಾರಿಸಿ ಓಡಿ ಹೋಗಿದ್ದಾಳೆ. ಸಿನಿಮಾಗಳಲ್ಲಿ ತೋರಿಸುವಂತಹ ಅಚ್ಚರಿಕರ ಘಟನೆ ನಿಜ ಜೀವನದಲ್ಲೂ ಕೂಡ ನಡೆಯುತ್ತೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

ಜೂನ್ 14 ರಂದು ಮೋದಿ ಕುಮಾರಿ ಮತ್ತು ವಿವೇಕ್ ಇಬ್ಬರು ಕುಟುಂಬದವರ ಸಮ್ಮುಖದಲ್ಲಿ ಖುಷಿಖುಷಿಯಿಂದಲೇ ಮದುವೆಯಾದರು. ನಂತರ ಖುಷಿಖುಷಿಯಿಂದಲೇ ಇಬ್ಬರು ಕೂಡ ಸಂಬಂಧಿಕರ ಮನೆಗೆ ಹೋಗಿ ಆಶೀರ್ವಾದ ಕೂಡ ಪಡೆದಿದ್ದರು. ಆದರೆ ಒಂದೇ ವಾರದಲ್ಲಿ ಇವರ ವಿವಾಹ ಜೀವನದಲ್ಲಿ ಟ್ವಿಸ್ಟ್ ಪಡೆದುಕೊಂಡಿದೆ. ಜೂನ್ 22 ರಂದು ಮೋನಿ ಕುಮಾರಿ ತನ್ನ ಪತಿ ವಿವೇಕ್ ಜೊತೆ ಬಳಿ ಖರೀದಿ ಮಾಡುವುದಕ್ಕೆ ನಗರಕ್ಕೆ ಹೊರಟಿದ್ದರು. ಕಾರಿನ ಮೇಲೆ ಇಬ್ಬರೂ ಕೂಡ ಖುಷಿಖುಷಿಯಾಗಿ ಮಾತನಾಡಿಕೊಂಡು ಹೋಗುತ್ತಿದ್ದರು. ಆದರೆ ದಾರಿ ಮಧ್ಯದಲ್ಲಿಯೇ ಸ್ಟೋರಿಗೆ ಟ್ವಿಸ್ಟ್ ಸಿಕ್ಕಿದೆ.

ವಿವೇಕ್ ನ ಕಾರಿನ್ನು ಇನ್ನೊಂದು ಯುವಕರ ಗ್ಯಾಂಗ್ ವೊಂದು ಅಡ್ಡಗಟ್ಟುತ್ತೆ. ಆ ಯುವಕರ ಗ್ಯಾಂಗ್ ಇದ್ದಕ್ಕಿದ್ದಂತೆ ವಿವೇಕ್ ನ ಬಳಿ ಬಂದು ತಲೆಗೆ ಗ’ನ್ ಹಿಡಿದು ವಿವೇಕ್ ಪತ್ನಿ ಮೋನಿಕಾ ಕುಮಾರಿ ಯನ್ನು ನೋಡನೋಡುತ್ತಿದ್ದಂತೆಯೇ ಎತ್ತಾಕ್ಕೊಂಡು ಹೋಗುತ್ತಾರೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದ ವಿವೇಕ್ ಇದನ್ನೆಲ್ಲ ನೋಡಿ ಸುಮ್ಮನೆ ಕುಳಿತು ಹೊಂದಿರುತ್ತಾನೆ. ನಂತರ ಹೆಂಡತಿ ಯನ್ನು ಗ್ಯಾಂಗ್ ನವರು ಅಪಹರಿಸಿಕೊಂಡು ಹೋದ ಮೇಲೆ ವಿವೇಕ್ ಕಾದಂಬರಿಯ ಸ್ಥಿತಿಯಲ್ಲಿ ಮನೆಗೆ ಹಿಂತಿರುಗುತ್ತಾನೆ. ಮನೆಗೆ ಹೋದಮೇಲೆ ವಿವೇಕ್ ಗೆ ತಿಳಿಯುತ್ತೆ..

ತನ್ನ ಹೆಂಡತಿ ಮುನಿಕುಮಾರ್ ಮನೆಯಲ್ಲಿರುವ ಒಡವೆ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ ಅಂತ. ಆಗ ವಿವೇಕಕ್ಕೆ ಸಂಶಯ ಬಂದು ತಕ್ಷಣ ಪೋಲಿಸ್ ಸ್ಟೇಷನ್ ಗೆ ಹೋಗಿ ದೂರನ್ನು ದಾಖಲು ಮಾಡಿದ್ದಾನೆ. ಪ್ರಕರಣವನ್ನು ಕೈಗೆ ತೆಗೆದುಕೊಂಡ ಪೊಲೀಸರು ಮೋನಿ ಕುಮಾರಿಯ ಮೊಬೈಲನ್ನು ಟ್ರ್ಯಾಕ್ ಮಾಡಿ ಮೋನಿ ಕುಮಾರಿ ಮತ್ತು ಗ್ಯಾಂಗ್ ಅನ್ನು ಸೆರೆ ಹಿಡಿಯುತ್ತಾರೆ. ಮೋನಿ ಕುಮಾರಿಯ ಜೊತೆ ಯುವಕರ ಗ್ಯಾಂಗ್ ಅನ್ನು ಕೂಡ ಸೆರೆಹಿಡಿದು ಪೊಲೀಸರು ಸ್ಟೇಷನ್ ಗೆ ಕರೆದು ತರುತ್ತಾರೆ. ವಿಚಾರಣೆ ವೇಳೆ ಯುವಕರ ಗ್ಯಾಂಗ್ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.

ವಿವೇಕ್ ನ ಪತ್ನಿ ಮೋನಿಕಾ ಕುಮಾರಿ, ದಿವ್ಯಾಂಶು ಎಂಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದರು. ವಿವೇಕ್ ನ ಜೊತೆ ಮದುವೆಯಾದ ಮೇಲೆ ಮೋನಿ ಕುಮಾರಿ ತನ್ನ ಪ್ರಿಯಕರನನ್ನು ಮಿಸ್ ಮಾಡಿಕೊಳ್ಳುತ್ತಿದ್ದಳು. ನನ್ನನ್ನು ಅಪಹರಿಸಿ ಕೊಂಡು ಹೋಗುವಂತೆ ಸ್ವತಃ ಮೋನಿ ಕುಮಾರಿ ಯುವಕರ ಗ್ಯಾಂಗ್ ಗೆ ಪ್ಲ್ಯಾನ್ ಕೊಟ್ಟಿದ್ದಳು. ನಾನೇ ಎಲ್ಲ ಪ್ಲಾನ್ ಮಾಡಿಸಿದ್ದು ಅಂತ ಮೋನಿ ಕುಮಾರಿ ಪೊಲೀಸ್ ಮತ್ತು ಗಂಡನ ಮುಂದೆ ಒಪ್ಪಿಕೊಂಡಿದ್ದಾರೆ. ತನ್ನ ಹೆಂಡತಿ ತನಗೆ ಮೋಸ ಮಾಡಿ ವಂಚನೆ ಮಾಡಿರುವ ವಿಷಯ ತಿಳಿದ ತಕ್ಷಣವೇ ವಿವೇಕ್ ಒಂದು ಸೆಕೆಂಡ್ ದಂಗಾದ. ಬಳೆ ಕೊಡಿಸಲು ಹೋದ ಗಂಡನಿಗೆ ಹೆಂಡತಿ ಚಳ್ಳೆಹಣ್ಣು ತಿನ್ನಿಸಿದಳ್ಳಾ ಎಂದು ವಿವೇಕ್ ಪಶ್ಚಾತಾಪ ಪಡುತ್ತಿದ್ದಾನೆ. ಸದ್ಯದ ಮಟ್ಟಿಗೆ ಮೋನಿ ಕುಮಾರಿ ಮತ್ತು ಅವಳ ಪ್ರಿಯತಮ ದಿವ್ಯಾಂಶು ಪೊಲೀಸರ ವಶದಲ್ಲಿದ್ದಾರೆ.

By admin

Leave a Reply

Your email address will not be published.