ಪುರುಷರ ಸೌಂದರ್ಯ ವೃದ್ಧಿಗೆ ಬ್ಯೂಟಿ ಟಿಪ್ಸ್


ಯಾರಿಗೆ ತಾನೇ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇಷ್ಟ ಪಡಲ್ಲ ಹೇಳಿ. ಈಗ ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಅಂತಾನೆ ಬೇಕಾದಷ್ಟು ದಾರಿಗಳಿವೆ ಅದು ನೈಸರ್ಗಿಕವಾಗಿ ಆಗಿರಬಹುದು ಅಥವಾ ಇನ್ನಾವುದೇ ಆಧುನಿಕ ಉಪಕರಣಗಳ ಸಹಾಯದಿಂದ ಇರಬಹುದು. ಮೊದಲೆಲ್ಲ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿದ್ದು ಈಗಿನ ಆಧುನಿಕ ಯುಗದ ಇತ್ತೀಚಿನ ಕಾಲಮಾನದಲ್ಲಿ ಗಂಡುಮಕ್ಕಳು ಕೂಡ ಇದಕ್ಕೇನು ಹೊರತಾಗಿಲ್ಲ. ಗಂಡು ಮಕ್ಕಳು ಕೂಡ ಹೆಣ್ಣುಮಕ್ಕಳ ಹಾಗೆಯೇ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಬಯಸುವುದು ಹೊಸದಾಗಿ ಸೃಷ್ಠಿ ಆಗಿರೋ ಟ್ರೆಂಡ್ ಅನ್ನಬಹುದು. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. ಆದರೆ ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಕಾಪಾಡಿಕೊಳ್ಳಲು ಹಾಗೂ ಹೆಚ್ಚಿಸಿಕೊಳ್ಳಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಅದರಿಂದ ನಮಗೆ ಈ ಕ್ಷಣಕ್ಕೆ ಸುಂದರವಾಗಿರುವ ಹಾಗೆ ಕಂಡರು ಅದರಿಂದ ಆಗುವ ಸೈಡ್ ಎಫೆಕ್ಟ್ಸ್ ಕೂಡ ಅಷ್ಟೆ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಸೌಂದರ್ಯ ವರ್ಧಕಗಳು ತಯಾರಿಸಿ ಅದನ್ನ ಉಪಯೋಗಿಸೋದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.

ನೈಸರ್ಗಿಕ ಚಿಕಿತ್ಸೆಗಳು: ಮೊದಲಿಗೆ ನಿಂಬೆ ಹಣ್ಣು ಮತ್ತು ಮೊಸರಿನ ಟ್ರೀಟ್ಮೆಂಟ್. ಇದಕ್ಕೆ ಬೇಕಾಗಿರುವ ಸಾಮಗ್ರಿಗಳು 1 ಚಮಚ ಮೊಸರು ಮತ್ತು ೧ ನಿಂಬೆ ಹಣ್ಣು. ಇದನ್ನು ಹೇಗೆ ಬಳಸುವುದು?? ಒಂದು ಪಾತ್ರೆಗೆ ನಿಂಬೆ ಹಣ್ಣಿನ ರಸ ಮತ್ತು ಮೊಸರು ಎರಡನ್ನೂ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದನ್ನ ಮುಖಕ್ಕೆ ಹಚ್ಚಿ 20 ರಿಂದ 25 ನಿಮಿಷ ಬಿಟ್ಟು ನಂತರ ತಣ್ಣೀರನಿಂದ ಮುಖ ತೊಳೆಯಬೇಕು ಇದನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿದರೆ ಮುಖದ ಹೊಳಪು ಹೆಚ್ಚುತ್ತದೆ.

2 ಚಮಚ ಆಲಿವ್ ಆಯಿಲ್ ಮತ್ತು 1 ಚಮಚ ವಿನೆಗರ್. ಒಂದು ಬೌಲ್ ಗೆ ಇವನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಮುಖ ತೊಳೆಯಬೇಕು. ಇದನ್ನು ವಾರದಲ್ಲಿ ಒಂದುಸಲ ಪುನರಾವರ್ತಿಸಿ.

ಕಡ್ಲೆಹಿಟ್ಟು ಮತ್ತು ಮಜ್ಜಿಗೆ ಚರ್ಮದ ಬಣ್ಣವನ್ನು ಹೆಚ್ಚಿಸಲು ಕಡ್ಲೆ ಹಿಟ್ಟು ತುಂಬಾ ಸಹಾಯಕಾರಿ ಇದನ್ನ ಮಜ್ಜಿಗೆ ಜೊತೆ ಸೇರಿಸಿ ಹಚ್ಚಿದರೆ ಪರಿಣಾಮ ಹೆಚ್ಚು. ಇದಕ್ಕೆ ಬೇಕಾಗುವ ಸಾಮಗ್ರಿಗಳು 2 ಚಮಚ ಕಡ್ಲೆ ಹಿಟ್ಟು, 1ಚಮಚ ಮಜ್ಜಿಗೆ, 1ಚಮಚ ಆಪಲ್ ಜ್ಯೂಸ್ ಹಾಗೂ ಅರ್ಧ ಚಮಚ ಅರಿಶಿನ ಪುಡಿ. ಇದನ್ನು ಬಳಸುವ

ವಿಧಾನ: ಕಡ್ಲೆಹಿಟ್ಟು ಮತ್ತು ಮಜ್ಜಿಗೆ ಸೇರಿಸಿ ಮಿಶ್ರಣ ಮಾಡಿಕೊಂಡು ನಂತರ ಟೊಮೆಟೊ ಜ್ಯೂಸ್ ಹಾಗೂ ಅರಿಶಿನ ಹಾಕಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಪೇಸ್ಟ್ ತುಂಬಾ ದಾಪ್ಪಗಿದ್ದರೆ ಮಜ್ಜಿಗೆ ಹಾಕಿ ತೆಳ್ಳ ಮಾಡಿಕೊಳ್ಳಬಹುದು. ನಂತರ ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಇದನ್ನು ಪ್ರತಿದಿನವೂ ಮಾಡಿದರೆ ತುಂಬಾ ಒಳ್ಳೆಯದು. ಇವಿಷ್ಟು ನಮಗೇ ಮನೆಯಲ್ಲೇ ದೊರೆಯುವ ವಸ್ತುಗಳಿಂದ ನಾವು ಸೌಂದರ್ಯ ಕಾಪಾಡಿಕೊಳ್ಳಲು ಇರುವ ಸರಳ ಉಪಾಯಗಳು.


Leave A Reply

Your email address will not be published.