ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಮಾಸ್ಟರ್ ಆನಂದ್ ಅವರು ಚಿಕ್ಕ ವಯಸ್ಸಿನಿಂದಲೂ ಕರ್ನಾಟಕಕ್ಕೆ ಚಿರಪರಿಚಿತ. ಗೌರಿ ಗಣೇಶ ಎಂಬ ಚಿತ್ರದ ಮೂಲಕ ಬಾಲನಟನಾಗಿ ಇಡೀ ಕರ್ನಾಟಕದ ಎಲ್ಲೆಡೆ ಮಾಸ್ಟರ್ ಆನಂದ್ ಅವರು ಪ್ರಸಿದ್ಧಿ ಪಡೆದಿದ್ದರು. 90 ರ ದಶಕದಲ್ಲಿ ಮಾಸ್ಟರ್ ಆನಂದ್ ಅವರು ಕರ್ನಾಟಕದ ಪ್ರಸಿದ್ಧ ಬಾಲನಟನಾಗಿ ದ್ದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಾಸ್ಟರ್ ಆನಂದ್ ಅವರಿಗೆ ಅಭಿನಯ ಶಾರದೆ ಒಲಿದಿದ್ದಾಳೆ. ಬಾಲನಟನಾಗಿ ಅಭಿನಯಿಸಿ ಹಲವಾರು ರಾಜ್ಯಪ್ರಶಸ್ತಿಗಳನ್ನು ಕೂಡ ಮಾಸ್ಟರ್ ಆನಂದ್ ಅವರು ಗಳಿಸಿದ್ದಾರೆ.

ವಿಪರ್ಯಾಸವೆಂದರೆ ಮಾಸ್ಟರ್ ಆನಂದ್ ಅವರಿಗೆ ಬಾಲನಟನಾಗಿ ಸಿನಿಮಾದಲ್ಲಿ ಸಿಕ್ಕ ಅವಕಾಶಗಳು ದೊಡ್ಡವರಾದ ಮೇಲೆ ಸಿಗಲಿಲ್ಲ. ನಟನಾಗಿ ಮತ್ತು ಕಾಮಿಡಿ ನಟನಾಗಿ ಮಾಸ್ಟರ್ ಆನಂದ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಹೇಳುವಷ್ಟು ದೊಡ್ಡದಾದ ಬ್ರೇಕ್ ಸಿಗಲಿಲ್ಲ. ತದನಂತರ ಮಾಸ್ಟರ್ ಆನಂದ್ ಅವರು ಟಿವಿ ಸೀರಿಯಲ್ ಗಳಲ್ಲಿ ಮತ್ತು ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡೋಕೆ ಪ್ರಾರಂಭ ಮಾಡಿದರು. ಸದ್ಯಕ್ಕೆ ಮಾಸ್ಟರ್ ಆನಂದ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದ ನಿರೂಪಣೆಯ ಕೆಲಸ ಮಾಡುತ್ತಿದ್ದಾರೆ.

ಹಲವು ಜನರಿಗೆ ತಿಳಿದಿರುವ ಹಾಗೆ ಮಾಸ್ಟರ್ ಆನಂದ್ ಅವರು ಬ್ರಾಹ್ಮಣ ಕುಟುಂಬದವರು. ದೇವಸ್ಥಾನದ ಪೂಜೆ ಹಾಗೂ ಪುನಸ್ಕಾರಗಳ ಕೆಲಸ ಮಾಸ್ಟರ್ ಆನಂದ್ ಅವರಿಗೆ ಅಚ್ಚುಕಟ್ಟಾಗಿ ಗೊತ್ತು. ಇತ್ತೀಚೆಗೆ ಮಾಸ್ಟರ್ ಆನಂದ್ ಅವರು ಹಾಡುಗೆರಿ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಶಿವಲಿಂಗದ ಪೂಜೆಯನ್ನು ಸಹ ಮಾಸ್ಟರ್ ಆನಂದ್ ಅವರೇ ನೆರವೇರಿಸಿದರು. ಮತ್ತು ಶಿವನ ಲಿಂಗಕ್ಕೆ ಪೂಜೆ ಮಾಡುತ್ತಿರುವ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಮಾಸ್ಟರ್ ಅನ್ನಲು ಹಂಚಿಕೊಂಡಿದ್ದರು. ಈ ವಿಡಿಯೋವನ್ನು ನೋಡಿದ ಅಭಿಮಾನಿ ಒಬ್ಬ ಮಾಸ್ಟರ್ ಆನಂದ್ ಅವರಿಗೆ ನೀವು ಬ್ರಾಹ್ಮಣರಾಗಿ ಜನಿವಾರವನ್ನು ಏಕೆ ಹಾಕಿಕೊಂಡಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಈ ಕಮೆಂಟ್ ನೋಡಿ ಮಾಸ್ಟರ್ ಆನಂದ್ ಅವರು ಅದ್ಭುತವಾದ ರಿಪ್ಲೈ ನೀಡಿದ್ದಾರೆ. ಬ್ರಾಹ್ಮಣರಾಗಿ ನೀವು ಜನಿವಾರವನ್ನು ಏಕೆ ಹಾಕಿಕೊಳ್ಳುವುದಿಲ್ಲ ದಯವಿಟ್ಟು ನಮ್ಮ ಸಂಸ್ಕೃತಿಯನ್ನು ಮರೆಯಬೇಡಿ ಎಂದು ಕೇಳಿದ ಪ್ರಶ್ನೆಗೆ ಮಾಸ್ಟರ್ ಆನಂದ್ ಅವರು “ನಾನು ಪ್ರತಿವಾರ ಹೊಸ ಜನಿವಾರ ಹಾಕಿಕೊಳ್ಳಬೇಕಾಗುತ್ತೆ ಅದಕ್ಕೆ ನಾನು ಜನಿವಾರ ಹಾಕುವುದಿಲ್ಲ. ಹಾಗೇ ನಾನು ಹುಟ್ಟಿದ್ದು ಬ್ರಾಹ್ಮಣನಾಗಿ ಆದರೆ ಕ್ಷತ್ರಿಯನಾಗಿ ಕೆಲಸ ಅಥವಾ ಕರ್ಮವನ್ನು ಮಾಡು ತ್ತಿದ್ದೇನೆ “ಎಂದು ತಮ್ಮ ಅಭಿಮಾನಿಯೊಬ್ಬರ ಪ್ರಶ್ನೆಗೆ ಸರ್ವೋತ್ಕೃಷ್ಟ ಉತ್ತರ ನೀಡಿದ್ದಾರೆ.

By admin

Leave a Reply

Your email address will not be published.