ರಾಮಾಯಣದಲ್ಲಿ ರಾವಣ, ದ್ವಾಪರಯುಗದಲ್ಲಿ ದುರ್ಯೋಧನ ಆದ್ರೆ ಈ ಕಲಿಯುಗದಲ್ಲಿ ಯಾರು ಗೊತ್ತೇ

ವಿಷ್ಣುವಿನ ಹತ್ತು ಅವತಾರ ನಮಗೆ ಗೊತ್ತೆ ಇದೆ. ಆದರೆ ಪ್ರತಿಯೊಂದು ಅವತಾರ ತಾಳಿದಾಲೂ ಒಂದೊಂದು ರಾಕ್ಷಸರ ಸಂಹಾರ ಆಗಿ ಧರ್ಮ ಸಂಸ್ಥಾಪನೆಯ ಕಾರ್ಯ ನಡೆದಿದೆ. ಉದಾಹರಣೆಗೆ ಕೃಷ್ಣಾವತಾರದಲ್ಲಿ ಕಂಸ, ರಾಮಾಯಣದಲ್ಲಿ ರಾವಣ, ಹಾಗಾದರೆ ಹತ್ತನೆ ಅವತಾರವಾದ ಕಲ್ಕಿಯು ಈ ಕಲಿಯುಗದಲ್ಲಿ ಸಂಹರಿಸುವ ರಾಕ್ಷಸ ಯಾರು ಎಂಬ ಪ್ರಶ್ನೆ ಕಾಡುತ್ತದೆ. ಹಾಗಾದರೆ ಅದು ಯಾರು ಏನು ನಾವು ತಿಳಿಯೋಣ.

ದೂರ್ವಾಸರ ಶಾಪದಂತೆ ವಿಷ್ಣು ಹತ್ತು ಅವತಾರ ಎತ್ತುತ್ತಾನೆ. ಅಧರ್ಮವು ಎಲ್ಲೆ ಮೀರಿದಾಗ, ಸದ್ಗುಣಿಗಳಿಗೆ ತೊಂದರೆಯಾದಾಗ ಮಹಾವಿಷ್ಣು ಯಾವುದೋ ಒಂದು ಅವತಾರದಲ್ಲಿ ರಕ್ಕಸರ ಸಂಹಾರ ಮಾಡುತ್ತಾನೆ ಹಾಗೂ ಧರ್ಮ ಉಳಿಸುತ್ತಾನೆ. ಈಗಾಗಲೇ ಒಂಬತ್ತು ಅವತಾರಗಳನ್ನು ಎತ್ತಿದ್ದಾನೆ ಶೇಷಶಯನ. ಪುರಾಣಗಳ ಪ್ರಕಾರ ವಿಷ್ಣುವಿನ ಕೊನೆಯ ಅವತಾರ ಕಲ್ಕಿ. ಪರಶುರಾಮ, ಹನುಮಂತ, ಹಾಗೂ ಕಲ್ಕಿ ಮೂವರು ಸೇರಿ ಕಲಿಯುಗದ ರಾಕ್ಷಸನ ಸಂಹಾರ ಮಾಡುತ್ತಾರಂತೆ. ಕಲಿಯುಗದ ಅಂತ್ಯ ಮಾಡಿ ಸತ್ಯಯುಗದ ಆರಂಭಕ್ಕೆ ಮುನ್ನುಡಿ ಬರೆಯುತ್ತಾನಂತೆ. ಪುರಾಣದಲ್ಲಿ ಉಲ್ಲೇಖಗೊಂಡ ಚಿರಂಜೀವಿಗಳು ಈ ಕಾರ್ಯಕ್ಕೆ ಸಹಾಯ ಮಾಡುತ್ತಾರಂತೆ. ಶಿವನ ರುದ್ರಾಂಶ ಹನುಮಂತ ಹಾಗೂ ವಿಷ್ಣುವಿನ ಅಂಶ ಹಾಗೂ ಅವತಾರ ಎರಡು ಆದ ಪರಶುರಾಮ ಆ ಚಿರಂಜಿವಿಗಳು. ದ್ವಾಪರ ಯುಗದ ಕಂಸ, ದುರ್ಯೋಧನ ಹಾಗೂ ರಾಮಾಯಣದ ರಾವಣನಂತಹ ಅಧರ್ಮಿಗಳ ಅಟ್ಟಹಾಸ ಅಂತ್ಯಗೊಳಿಸಿ ಧರ್ಮ ಸ್ಥಾಪನೆ ಮಾಡಲು ವಿಷ್ಣು ಅವತಾರ ಎತ್ತಬೇಕಾಯಿತು.

ಚಿರಂಜೀವಿಗಳ ಸಹಾಯದ ಅಗತ್ಯವಿದೆ ಎಂದರೆ ಕಲಿಯುಗದ ಅಧರ್ಮಿ ಅತ್ಯಂತ ಶಕ್ತಿಯನ್ನು ಹೊಂದಿರಬೇಕು. ಈ ರಕ್ಕಸನ ಹೆಸರೆ ಕಲಿಪುರುಷ. ಸಮುದ್ರ ಮಂಥನದ ಸಮಯದಲ್ಲಿ ಬಂದ ವಿಷದ ಒಂದು ತುಣುಕಿನಿಂದ ಹುಟ್ಟಿದವನಂತೆ ಈ ಕಲಿಪುರುಷ. ಸಮಯ ಸರಿದಂತೆ ಅತ್ಯಂತ ಶಕ್ತಿಶಾಲಿಯಾಗುತ್ತಾ ಸಾಗುತ್ತಿದ್ದಾನೆ ಕಲಿ. ಕಲಿಯುಗದ ಅಂತ್ಯದ ಸಮಯದಲ್ಲಿ ಎಲ್ಲಾ ಕಡೆಗಳಲ್ಲಿ ಕಲಿಯ ರಾಜ್ಯಭಾರವಿರುತ್ತದೆ. ಕಲಿಪುರುಷನ ಪ್ರಭಾವ ದ್ವಾಪರಯುಗದಲ್ಲಿ ಕೃಷ್ಣನ ದೇಹತ್ಯಾಗದ ನಂತರದಲ್ಲಿ ಪ್ರಾರಂಭವಾಯಿತು. ಅದಕ್ಕೆ ಕಲಿಗಾಲ ಎಂದು ಹೆಸರು. ಮನುಷ್ಯನ ಮನಸ್ಸಿನಲ್ಲಿ ವಾಸ ಮಾಡುವ ಈ ಕಲಿಗೆ ಆಕಾರವೇ ಇಲ್ಲ.

ಕಲಿಯುಗವು ಇರುವ 4,32,000 ವರ್ಷಗಳಲ್ಲಿ 5000 ವರ್ಷಗಳ ಸಮಯ ಸರಿದಿದೆ. ದೇವತೆಗಳೊಂದಿಗೆ ಯುದ್ದ ಮಾಡಲು ಶಕ್ತರಿಲ್ಲದ ಮನುಷ್ಯರು ಅಸ್ತ್ರಗಳನ್ನು ತಯಾರಿಸಿದ್ದಾರೆ. ಇನ್ನಷ್ಟು ಸಮಯದಲ್ಲಿ ಅತಿ ವಿನಾಶಕ ಶಕ್ತಿಯನ್ನು ಮನುಜರಿಗೆ ಕಲಿಪುರುಷ ನೀಡುತ್ತಾನೆ. ಕೆಟ್ಟ ಕೆಲಸಗಳೆ ಈ ಶಕ್ತಿಯ ಮೂಲ. ಕಲಿಪುರುಷ ಕೂಡ ಇದರಿಂದ ಶಕ್ತಿ ಪಡೆಯುತ್ತಾನೆ‌. ಅದೃಷ್ಯವಾಗಿರುವ ಕಲಿ ಪುರುಷ ಭೌತಿಕ ಆಕಾರವನ್ನು ಕಲಿಯುಗದ ಅಂತ್ಯದ ವೇಳೆಯಲ್ಲಿ ಪಡೆಯುತ್ತಾನೆ. ಕಲಿಯನ್ನು ಸಂಹರಿಸಲು ಬಿಳಿ ಕುದುರೆಯೆರಿ ವಿಷ್ಣು ಕಲ್ಕಿ ಅವತಾರದಲ್ಲಿ ಬರುತ್ತಾನಂತೆ. ಕಲ್ಕಿಯ ವಿರುದ್ಧ ಮನುಷ್ಯರು ಕೂಡ ಯುದ್ದ ಮಾಡುತ್ತಾರಂತೆ. ಇದಕ್ಕಾಗಿಯೆ ಎಲ್ಲಾ ಚಿರಂಜೀವಿಗಳ ಅವಶ್ಯಕತೆ ಕಲ್ಕಿಗೆ ಇದೆ. ಈ ಪ್ರಳಯದಿಂದ ಪಾರಾಗಲು ದೇವರ ಮೇಲಿನ ಭಕ್ತಿಯೊಂದೆ ದಾರಿ. ಕಲ್ಕಿ ಹಾಗೂ ಕಲಿಯ ಯುದ್ಧದಲ್ಲಿ ಕಲಿಯ ಅಂತ್ಯವಾದ ನಂತರ ಚಿರಂಜೀವಿಗಳು ದೈವದಲ್ಲಿ ಲೀನವಾಗಿ, ಹೊಸಯುಗದ ಪ್ರಾರಂಭವಾಗಿ ಜ್ಞಾನ ಜ್ಯೋತಿ ಉರಿಯುತ್ತದಂತೆ. ಈ ಯದ್ಧದ ಮಾಹಿತಿ ಯಾವ ಪುರಾಣದಲ್ಲಿಯೂ ಉಲ್ಲೇಖವಾಗಿಲ್ಲ.

ಈ ಮಾಹಿತಿ ನೋಡಿದಾಗ ಕಲಿ ಬೇರೆ ಯಾರೂ ಆಗಿರದೆ ಮನುಷ್ಯನ ಮನಸ್ಸಿನ ಮೇಲೆ ಹಿಡಿತ ಸಾಧಿಸುವ ವಂಚನೆ, ಅತಿಯಾಸೆ, ಮೋಸ, ದ್ವೇಷ ಇವುಗಳೆ ಇರಬೇಕು ಅನಿಸುತ್ತದೆ. ಯಾವಾಗ ಮನುಷ್ಯನ ಮನಸ್ಸಿನ ಶಾಂತಿ, ಪ್ರೀತಿ ನೆಲೆಸುತ್ತದೆಯೊ ಅಲ್ಲಿ ಪರಮಾತ್ಮನ ವಾಸ ಇರುತ್ತದೆ.

Leave a Comment

error: Content is protected !!