ಶಿವ ಯಾರ ಭಕ್ತ ಅಲ್ಲದೆ ಯಾರ ಧ್ಯಾನ ಮಾಡುತ್ತಾರೆ ಗೊತ್ತೇ?

ಶಿವ ಕೈಲಾಸ ಪರ್ವತದಲ್ಲಿ ಯಾರ ಧ್ಯಾನ ಮಾಡುತ್ತಾರೆ, ಸೃಷ್ಟಿಯ ವಿನಾಶಕ ಶಿವ ಆರಾಧಿಸುವುದು ಯಾರನ್ನು, ರಾಮರಕ್ಷಾ ಸ್ತೋತ್ರ ಹೇಗೆ ರಚನೆಯಾಯಿತು ಹಾಗೂ ಅದರ ಮಹತ್ವವನ್ನು ಈ ಲೇಖನದ ಮೂಲಕ ತಿಳಿಯೋಣ.

ಶಿವನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಒಬ್ಬನು. ಮೂವರು ತ್ರಿಮೂರ್ತಿಗಳಲ್ಲಿ ಶಿವನೇ ಶಕ್ತಿಶಾಲಿ, ವಿನಾಶಕ ಎಂದು ಶಿವಪುರಾಣದಲ್ಲಿ ಉಲ್ಲೇಖವಾಗಿದೆ. ಶಿವನಿಗೆ ದೇವಾಧಿ ದೇವ ಎಂದು ಕರೆಯಲಾಗುತ್ತದೆ. ಬ್ರಹ್ಮ, ವಿಷ್ಣುವನ್ನು ಹೊರತುಪಡಿಸಿ ಶಿವನನ್ನು ಆರಾಧ್ಯ ದೇವ ಎಂದು ಎಲ್ಲರೂ ಪರಿಗಣಿಸುತ್ತಾರೆ ಅಲ್ಲದೇ ಪೂಜೆಯನ್ನು ಮಾಡುತ್ತಾರೆ. ಕೈಲಾಸದಲ್ಲಿ ಕುಳಿತು ಶಿವ ಧ್ಯಾನ ಮಾಡುತ್ತಿರುತ್ತಾನೆ. ಪಾರ್ವತಿಗೆ ಶಿವ ಯಾರ ಧ್ಯಾನ ಮಾಡುತ್ತಿದ್ದಾನೆ ಎಂಬ ಕುತೂಹಲ ಶುರುವಾಗುತ್ತದೆ ಮೊದಲು ಸುಮ್ಮನಿದ್ದರೂ ನಂತರ ಸುಮ್ಮನಿರಲು ಆಗುವುದಿಲ್ಲ ಒಮ್ಮೆ ಶಿವನಲ್ಲಿ ನೀವು ಯಾವಾಗಲೂ ಸಮಾಧಿ ಮುದ್ರೆಯಲ್ಲಿ ಕುಳಿತು ಯಾರ ಧ್ಯಾನ ಮಾಡುತ್ತೀರಾ ಎಂದು ಕೇಳುತ್ತಾಳೆ ಅದಕ್ಕೆ ಶಿವನು ದೇವೇಶ್ವರಿ ಸಧ್ಯದಲ್ಲಿ ನಾನು ಅದಕ್ಕೆ ಉತ್ತರ ಕೊಡುತ್ತೇನೆ ಎಂದು ಶಿವ ಹೇಳುತ್ತಾನೆ.

ನಂತರ ಸ್ವಲ್ಪ ದಿನಗಳ ನಂತರ ಶಿವ ಬುಧ ಕೌಶಿಕ ಋಷಿಯ ಕನಸಿನಲ್ಲಿ ಬಂದು ರಾಮರಕ್ಷಾ ಸ್ತೋತ್ರವನ್ನು ಬರೆಯುವಂತೆ ಸೂಚಿಸುತ್ತಾನೆ ಆಗ ಋಷಿ ಕನಸಿನಲ್ಲಿ ಹೇ ದೇವಾ ನನಗೆ ರಾಮರಕ್ಷಾ ಸ್ತೋತ್ರ ಬರೆಯುವಷ್ಟು ಸಾಮರ್ಥ್ಯ ಇಲ್ಲ, ಈ ಕಾರ್ಯವನ್ನು ಬೇರೆ ಯಾರ ಬಳಿಯಾದರೂ ಮಾಡಿಸಿ ಎಂದು ಹೇಳುತ್ತಾರೆ. ಆಗ ಮಹಾದೇವ ಋಷಿಗೆ ಕನಸಿನಲ್ಲಿ ರಾಮರಕ್ಷಾ ಸ್ತೋತ್ರದ ಜ್ಞಾನ ಕೊಡುತ್ತಾರೆ. ನಂತರ ಮರುದಿನವೇ ಬುಧ ಕೌಶಿಕ ಋಷಿ ರಾಮರಕ್ಷಾ ಸ್ತೋತ್ರವನ್ನು ರಚಿಸಿದರು.

ಇದಾದ ನಂತರ ಶಿವ ಪಾರ್ವತಿಯನ್ನು ಹತ್ತಿರಕ್ಕೆ ಕರೆದು ದೇವಿ ನಾನು ಯಾವಾಗಲೂ ರಮನಾಮವನ್ನು ಸ್ಮರಿಸುತ್ತೇನೆ ಎಂದು ಹೇಳುತ್ತಾರೆ. ಪಾರ್ವತಿ ಇನ್ನಷ್ಟು ಕುತೂಹಲದಿಂದ ಹೇ ದೇವಾ ಶ್ರೀರಾಮ ವಿಷ್ಣುವಿನ ರೂಪ ಹೀಗಿರುವಾಗ ನೀವು ವಿಷ್ಣುವನ್ನು ಬಿಟ್ಟು ಶ್ರೀ ರಾಮನ ಧ್ಯಾನ ಯಾಕೆ ಮಾಡುತ್ತೀರಾ ಎಂದು ಕೇಳುತ್ತಾಳೆ ಆಗ ಶಿವ ಹೇ ದೇವಿ ನಾನು ಶ್ರೀ ರಾಮನನ್ನು ಸ್ಮರಿಸಲು ಕಾರಣಗಳಿವೆ ಯಾವಾಗ ಮನುಷ್ಯರು ಬಾಯಾರುತ್ತಾರೋ ಆಗ ಅವರು ನೀರನ್ನು ನೆನೆಯುತ್ತಾರೆ ಅದೇ ರೀತಿ ನಾನು ವಿಷ್ಣುವಿನ ಸಾಕ್ಷಾತ್ ರೂಪವನ್ನು ಸ್ಮರಿಸುತ್ತೇನೆ.

ಯಾವ ರೀತಿ ಚಳಿಯಿಂದ ಕಂಗೆಟ್ಟ ಜೀವ ಬೆಂಕಿಯನ್ನು ಸ್ಮರಿಸುತ್ತೋ ಅದೇ ರೀತಿ ಮನುಷ್ಯರು, ಋಷಿಗಳು ವಿಷ್ಣುವನ್ನು ಸ್ಮರಣೆ ಮಾಡುತ್ತಾರೆ, ಮದುವೆಯಾದ ಸ್ತ್ರೀ ತನ್ನ ಪತಿಯನ್ನು ಸ್ಮರಣೆ ಮಾಡುತ್ತಾಳೆ. ಭಯದಲ್ಲಿರುವ ವ್ಯಕ್ತಿ ಸಮಸ್ಯೆಯಿಂದ ಪಾರಾಗಲು ಚಿಂತಿಸುತ್ತಾನೆ. ಹಣದ ವ್ಯಾಮೋಹ ಇರುವ ವ್ಯಕ್ತಿ ಯಾವಾಗಲೂ ಹಣದ ಬಗ್ಗೆಯೇ ಯೋಚನೆ ಮಾಡುತ್ತಾನೆ. ಮಕ್ಕಳ ನಿರೀಕ್ಷೆಯಲ್ಲಿ ಇರುವ ದಂಪತಿಗಳು ಮಕ್ಕಳಿಗಾಗಿ ಪರಿತಪಿಸುತ್ತಾರೆ. ಹೀಗೆ ಎಲ್ಲರೂ ಯಾವುದಾದರೂ ಒಂದು ಸಂಗತಿಯ ಬಗ್ಗೆ ಸ್ಮರಣೆ ಮಾಡುತ್ತಾರೆ ಅದೇ ರೀತಿ ನಾನು ಕೂಡ ಶ್ರೀ ರಾಮನ ಸ್ಮರಣೆ ಮಾಡುತ್ತೇನೆ ಎಂದು ಹೇಳುತ್ತಾನೆ.

ಬಹಳ ಹಿಂದೆ ವಿಷ್ಣು ಮೂಲಕ ನಿರ್ಮಾಣವಾದ ಈ ಜಗತ್ತು ಕರ್ಮದ ಅಧೀನದಲ್ಲಿ ಇದೆ ಮತ್ತು ಆ ಕರ್ಮ ವಿಷ್ಣುವಿನ ಅಧೀನದಲ್ಲಿ ಇದೆ. ರಾಮನಾಮ ವಿಷ್ಣುವಿನ ಸಾವಿರ ನಾಮಗಳಿಗೆ ಸಮಾನವಾಗಿದೆ ಹೀಗಾಗಿ ನಾನು ಯಾವಾಗಲೂ ರಾಮನಾಮ ಮಂತ್ರ ಪಠಿಸುತ್ತೇನೆ ಎಂದು ಶಿವ ಹೇಳುತ್ತಾರೆ. ಶಿವನು ನೀಡಿದ ವಿವರಣೆಯಿಂದ ಪಾರ್ವತಿಗೆ ಸಂತೋಷವಾಗುತ್ತದೆ. ವಿಷ್ಣು ರೂಪಿ ಶ್ರೀರಾಮ ಮಹಾದೇವನನ್ನು ಆರಾಧಿಸುತ್ತಾನೆ. ರಾಮ ಮಂದಿರದಲ್ಲಿ ಶಿವ ಲಿಂಗ ಇರುವುದನ್ನು ನೋಡುತ್ತೇವೆ ಏಕೆಂದರೆ ಶ್ರೀರಾಮ ಶಿವನನ್ನು ನೆನೆಯದೆ ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಶಿವ ಹಾಗೂ ಶ್ರೀರಾಮನ ಭಕ್ತಿಯ ಬಗೆಗಿನ ಕಥೆಯನ್ನು ತಿಳಿದುಕೊಳ್ಳಿ.

Leave a Comment

error: Content is protected !!