ಸುಶ್ಮಿತಾ ಸೇನ್ ಅವರ ಹೆಸರು ನಿಮಗೆಲ್ಲ ಚಿರಪರಿಚಿತ. ಸುಶ್ಮಿತಾ ಸೇನ್ ಅವರು ಮಿಸ್ ಯೂನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡ ಭಾರತದ ಮೊಟ್ಟ ಮೊದಲ ಮಹಿಳೆ. 1994 ರಲ್ಲಿ ಭವ್ಯ ಸುಂದರಿ ಪಟ್ಟ ಸುಷ್ಮಿತಾ ಸೇನ್ ಗೆ ಸಿಕ್ಕಿತ್ತು. 18 ನೇ ವಯಸ್ಸಿನಲ್ಲಿಯೇ ಸುಶ್ಮಿತಾ ಸೇನ್ ಇಂಥ ದೊಡ್ಡ ಸಾಧನೆಯನ್ನು ಮಾಡಿದವಳು. ಮಿಸ್ ಯುನಿವರ್ಸ್ ಆಗಿದ್ದ ಸುಸ್ಮಿತಾ ಸೇನ್ ಸಿನಿಮಾಗಳಲ್ಲಿ ನಟನೆ ಮಾಡೋಕೆ ಶುರು ಮಾಡಿದ್ರು. ಸಿನಿಮಾಗಳನ್ನು ಕೂಡ ಇವರಿಗೆ ಯಶಸ್ಸು ಸಿಕ್ಕಿತ್ತು. ಇದೀಗ ಸುಶ್ಮಿತಾ ಸೇನ್ ಅವರ ವೈಯಕ್ತಿಕ ಜೀವನ ವಿಚಾರ ಭಾರೀ ಸುದ್ದಿಯಲ್ಲಿದೆ.

ಹಲವರಿಗೆ ಈ ವಿಷಯ ತಿಳಿದಿಲ್ಲ ಸುಸ್ಮಿತಾ ಸೇನ್ ಅವರು ಇಲ್ಲಿಯವರೆಗೂ ಮದುವೆಯಾಗಿಲ್ಲ ಇವರಿಗೆ ಇದೀಗ ವಯಸ್ಸು 4೦ ವರ್ಷ. ಆದರೆ ಇವರು 2ಮಕ್ಕಳನ್ನು ದತ್ತು ಪಡೆದಿದ್ದು ಅವರನ್ನು ಸಾಕುತ್ತಿದ್ದಾರೆ. ಆದರೂ ಕೂಡ ಸುಸ್ಮಿತಾ ಸೇನ್ ಅವರ ಸಂಗಾತಿಯ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು . ರೊಹಮಾನ್ ಎಂಬ 30 ವರ್ಷದ ಪುರುಷನ ಜೊತೆ ಸುಷ್ಮಿತಾ ಸೇನ್ ಹಲವು ವರ್ಷಗಳ ಕಾಲ ಸಂಬಂಧವನ್ನು ಹೊಂದಿದ್ದರು. ಈ ಬಗ್ಗೆ ಕೂಡ ಹಲವು ಚರ್ಚೆಗಳು ಆಗಾಗ ನಡೆಯುತ್ತಿತ್ತು.

ಆದರೆ ಇದೀಗ ಸುಶ್ಮಿತಾ ಸೇನ್ ಅವರು ತನಗಿಂತ ಇಪ್ಪತ್ತು ವರ್ಷ ಹಿರಿಯ ವಯಸ್ಸಿನ ಪುರುಷನೊಬ್ಬನ ಜತೆ ಸಂಬಂಧವನ್ನು ಹೊಂದಿರುವುದು ಬಹಿರಂಗವಾಗಿದೆ. ಅದು ಬೇರೆ ಯಾರು ಅಲ್ಲ ಲಲಿತ್ ಮೋದಿ. ಲಲಿತ್ ಮೋದಿಯವರ ಹೆಸರು ನೀವೆಲ್ಲ ಕೇಳಿರುತ್ತೀರಿ. ಇವರು ಐಪಿಎಲ್ ಆಟದ ಸಂಸ್ಥಾಪಕರು ಮತ್ತು ಬ್ಯುಸಿನೆಸ್ ಮನ್ ಕೂಡ ಹೌದು.ಅಷ್ಟೇ ಅಲ್ಲದೆ ಬಿಸಿಸಿಐ ಚೆರ್ ಮಾನ್ ಕೂಡ ಆಗಿದ್ದವರು. ತೆರಿಗೆ ವಂಚನೆ ಪ್ರಕರಣದಲ್ಲಿ ಲಲಿತ್ ಮೋದಿಯವರು ಇಂಡಿಯಾವನ್ನು ಬಿಟ್ಟು ಓಡಿಹೋಗಿದ್ದಾರೆ. ಇಂಥ ನೂರಾರು ಕೋಟಿ ಆಸ್ತಿಯನ್ನು ಮಾಡಿ ತೆರಿಗೆ ವಂಚನೆ ಮಾಡಿ ಇಂಡಿಯಾವನ್ನು ಬಿಟ್ಟು ಲಂಡನ್ ನಲ್ಲಿ ಸೆಟಲ್ ಆಗಿದ್ದಾನೆ. ಮತ್ತು ಈತನನ್ನು ಪೊಲೀಸರು ಈಗಲೂ ಸಹ ಹುಡುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಲಲಿತ್ ಮೋದಿ ಮತ್ತು ಸುಷ್ಮಿತಾ ಸೇನ್ ಇಬ್ಬರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿವೆ.

ಲಲಿತ್ ಮೋದಿ ಅವರು 1991 ರಲ್ಲಿ ಮಿನಲ್ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಮಿನಲ್ ಎಂಬ ಈ ಮಹಿಳೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು 2018 ರಲ್ಲಿ ಈಕೆ ತನ್ನ ಪ್ರಾಣವನ್ನು ಕಳೆದುಕೊಂಡರು. ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡ ನಂತರ ಲಲಿತ್ ಮೋದಿಯವರು ಸುಶ್ಮಿತಾ ಸೇನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಇವರಿಬ್ಬರ ಒಡನಾಟ ಸುಮಾರು 3 ವರ್ಷಗಳಿಂದ ನಡೆಯುತ್ತಿದೆ. ಆದರೆ ಈ ಸಂಬಂಧ ಇದೀಗ ಬೆಳಕಿಗೆ ಬಂದು ಬಹಿರಂಗವಾಗಿದೆ. ಲಲಿತ್ ಮೋದಿ ಅವರು ಒಬ್ಬ ಶ್ರೀಮಂತ ಬಿಸಿನೆಸ್ ಮೆನ್. ಈತ ಇದೀಗ ಭಾರತವನ್ನು ಬಿಟ್ಟು ಲಂಡನ್ ಗೆ ಹೋಗಿ ಸೆಟಲ್ ಆಗಿ ಒಳ್ಳೆಯ ಐಷಾರಾಮಿ ಜೀವನ ಬದುಕುತ್ತಿದ್ದಾನೆ.

ಸುಶ್ಮಿತಾ ಸೇನ್ ಕೂಡ ಈತನ ಜೊತೆ ಲಂಡನ್ ನಲ್ಲಿ ವಾಸವಾಗಿದ್ದಾಳೆ ಲಲಿತ್ ಮೋದಿ ಮತ್ತು ಸುಶ್ಮಿತ ಸೇನ್ ಇತ್ತೀಚೆಗೆ ಪ್ರವಾಸಕ್ಕೆಂದು ಮಾಲ್ಡೀವ್ಸ್ ಗೆ ಹೋಗಿದ್ದರು. ಇಬ್ಬರು ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡಿ ಸಂತಸದ ಕ್ಷಣಗಳನ್ನು ಕಳೆದಿದ್ದು ಇದೀಗ ತಾವು ಕಳೆದ ಸಂತಸದ ಕ್ಷಣಗಳ ಫೋಟೋಗಳನ್ನು ಕೂಡ ಲಲಿತ್ ಮೋದಿ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಹಾಗೆ ಲಲಿತ್ ಮೋದಿ ಅವರು ತಮ್ಮಿಬ್ಬರ ಸಂಬಂಧದ ಬಗ್ಗೆ ಸ್ಪಷ್ಟೀಕರಣವನ್ನು ಕೂಡ ನೀಡಿದ್ದಾರೆ. ನಾವಿಬ್ಬರು ಇನ್ನೂ ಮದುವೆಯಾಗಿಲ್ಲ ನಾವಿಬ್ಬರೂ ರಿಲೇಷನ್ ಶಿಪ್ ಮಾತ್ರ ಹೊಂದಿದ್ದೇವೆ ಮುಂದೆ ಮದುವೆ ಆಗುವ ಯೋಚನೆ ಕೂಡ ಇದೆ ಎಂದು ಬಹಿರಂಗವಾಗಿ ಸ್ಪಷ್ಟನೆ ನೀಡಿದ್ದಾರೆ.

By admin

Leave a Reply

Your email address will not be published.