ಆತ್ಮೀಯ ಓದುಗರೇ ಮನುಷ್ಯ ಹತ್ತಾರು ಪ್ರಯೋಜನಕಾರಿ ಕೆಲಸಗಳನ್ನು ಮಾಡಿದ್ರು ಸಹ ಕೆಲವೊಮ್ಮೆ ಯಶಸ್ಸು ಅನ್ನೋದು ಸಿಗೋದಿಲ್ಲ ಆದ್ರೆ ಕೆಲವೊಮ್ಮೆ ಮಾಡುವ ಚಿಕ್ಕ ಪುಟ್ಟ ಐಡಿಯಾದಿಂದಲೇ ಬೇಗನೆ ಸಕ್ಸಸ್ ಕಾಣುತ್ತಾನೆ. ವಿಷ್ಯಕ್ಕೆ ಬರೋಣ ಅದೇನಪ್ಪ ಆದ್ರೆ ಇಲ್ಲೊಬ್ಬ ಹೆಣ್ಣುಮಗಳು ಕೃಷಿ ಮಾಡಿ ಲಕ್ಷ ಲಕ್ಷ ದುಡೀತಿದಾಳೆ ಅದು ಹೇಗೆ ಅನ್ನೋದನ್ನ ತಿಳಿಯೋಣ.

ಬಳಷ್ಟು ಜನಕ್ಕೆ ಹಿರೇಕಾಯಿ ಕೃಷಿ ಬಗ್ಗೆ ಗೊತ್ತಿರುತ್ತದೆ ಇನ್ನು ಕೆಲವರಿಗೆ ಗೊತ್ತಿಲ್ಲದೇ ಕೂಡ ಇರಬಹುದು ಭೂಮಿಯ ಮೇಲೆ ಹೀರೆಕಾಯಿ ಬೆಳೆಯನ್ನು ಬೆಳೆಯುವುದು ಹಳೆಯ ಪದ್ಧತಿ ನಂತರ ಬೇರೆಬೇರೆ ಹೊಸ ಮಾದರಿಗಳಲ್ಲಿ ಬೆಳೆಯುತ್ತಿದ್ದಾರೆ. ತಂತಿಗಳನ್ನು ಕಟ್ಟಿ, ಕೆಳಗಡೆ ಮಲ್ಚಿಂಗ್ ಪೇಪರ್ ಹಾಕಿ ಹೀರೆಕಾಯಿ ಬೆಳೆಯಲಾಗುತ್ತದೆ ಹೀಗೆ ಬೆಳೆಯುವುದರಿಂದ ಅನೇಕ ಲಾಭಗಳಿವೆ ಹೀರೆಕಾಯಿ ಸ್ಟ್ರೇಟ್ ಆಗಿ ಬೆಳೆಯುತ್ತದೆ ಬಾಗುವುದಿಲ್ಲ, ಎಲೆಗಳು ಉದುರುವುದಿಲ್ಲ ಮತ್ತು ಕಳೆ ಸಮಸ್ಯೆ ಇರುವುದಿಲ್ಲ.

ಇನ್ನೊಂದು ವಿಶೇಷವೆಂದರೆ ಒಮ್ಮೆ ಮಲ್ಚಿಂಗ್ ಪೇಪರ್ ಹಾಕುವುದರಿಂದ ಮೂರು ಬೆಳೆಯನ್ನು ಬೆಳೆಯಬಹುದು. ಹೀರೆಕಾಯಿ ಬೆಳೆಯು ಒಂದೂವರೆ ತಿಂಗಳಿಗೆ ಫಸಲು ಬರುತ್ತದೆ. ಹೀರೆಕಾಯಿ ಬೆಳೆಯಲ್ಲಿ 4-5 ತಳಿಗಳಿವೆ ಅವುಗಳಲ್ಲಿ ಮುಖ್ಯವಾದ ತಳಿಗಳೆಂದರೆ ಅರ್ಕಾ ಪ್ರಸನ್ನ, ಅರ್ಕಾ ವಿಕ್ರಮ್ ಮತ್ತು ಅರ್ಕಾ ಸುಮೀತ್ ಇವು ಹೈಬ್ರಿಡ್ ಆಗಿದ್ದು ಬೇಗನೆ ಕಾಯಿ ಬಿಡುತ್ತದೆ ಮತ್ತು ಉತ್ತಮ ಕಾಯಿಗಳು ಬರುತ್ತದೆ.

ಹೌದು ಅರ್ಕಾ ವಿಕ್ರಮ್ ಒಂದು ಹೆಕ್ಟೇರ್ ಗೆ 3-4 ಟನ್ ಹೀರೆಕಾಯಿಯನ್ನು ಬೆಳೆಯಬಹುದು. ಒಂದು ಎಕರೆ ಹೀರೆಕಾಯಿ ಬೆಳೆಯಲು ಒಂದುವರೆ ಲಕ್ಷ ಖರ್ಚಾಗುತ್ತದೆ. ಅರ್ಕಾ ವಿಕ್ರಮ್ ಬೆಳೆಯನ್ನು ಸಾಮಾನ್ಯವಾಗಿ ಹೆಚ್ಚು ಬೆಳೆಯಲಾಗುತ್ತದೆ. ಅದರಿಂದ ಒಂದು ಎಕರೆಗೆ 3-5 ಲಕ್ಷ ಆದಾಯ ಪಡೆಯಬಹುದು. ಅರ್ಕಾ ವಿಕ್ರಮ್ ತಳಿಯ ಹೀರೆಕಾಯಿ ಬೀಜಗಳು 2,500ರೂಪಾಯಿಗೆ ಸಿಗುತ್ತದೆ. 1ಕೆಜಿ ಬೀಜದಿಂದ ಒಂದು ಎಕರೆಯಲ್ಲಿ ಹೀರೆಕಾಯಿ ಬೆಳೆಯಬಹುದು. ಅರ್ಕಾ ಸುಮೀತ್ ಇದು ಒಂದು ವಿಶೇಷವಾದ, ಹೆಚ್ಚು ಇಳುವರಿ ಬರುವ ಹೀರೆಕಾಯಿ ತಳಿಯಾಗಿದೆ, ಇದರಿಂದ ಹೆಚ್ಚು ಆದಾಯ ಬರುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲಾ ರೈತ ಬಾಂಧವರಿಗೆ ತಿಳಿಸಿ.

By admin

Leave a Reply

Your email address will not be published.