ಯಾರ ಜೀವನ ಹೇಗಿರುತ್ತೆ ಅನ್ನೋದಕ್ಕೆ ಆಗೋದಿಲ್ಲ, ಪ್ರತಿ ಕ್ಷಣ ಪ್ರತಿದಿನ ಕೂಡ ಮನುಷ್ಯನನ್ನು ಬದಲಾಯಿಸಬಲ್ಲದು, ಬಡವನಾಗಿದ್ದ ಈ ವ್ಯಕ್ತಿ ಹೊಟ್ಟೆ ಪಾಡಿಗಾಗಿ ತನ್ನ ಜೀವನ ನಡೆಸಲು ಕೂಲಿ ಕೆಲಸ ಮಾಡುತ್ತಿದ್ದ ಅಷ್ಟೇ ಅಲ್ದೆ ಹೆಚ್ಚಿನ ಸಾಲ ಕೂಡ ಮಾಡಿದ್ದ, ಜೀವನವೇ ಬೇಡ ಅನ್ನೋ ಅಷ್ಟು ಬೇಸತ್ತು ಹೋಗಿದ್ದ ಆದ್ರೆ ಕೇರಳದ ಈ ವ್ಯಕ್ತಿ ಒಂದು ಲಾಟರಿಯನ್ನು ಖರೀದಿಸಿದ್ದು ಅದರ ಮೂಲಕ ಅದೃಷ್ಟ ಲಕ್ಷ್ಮಿ ಒಲೆದು ಬಂದಿದ್ದಾಳೆ.

ಹೌದು ಕೇರಳದ ಕೂತುಪರಂಬದ ನಿವಾಸಿ ಕಣ್ಣೂರಿನ ಪೊರುಣ್ಣನ್ ರಾಜನ್ ಎಂಬುದಾಗಿ ಈತನಿಗೆ ಕೇರಳದ ಲಾಟರಿ ಮೂಲಕ ಕೋಟಿ ಕೋಟಿ ಸಿಕ್ಕಿದೆ.ಈತನಿಗೆ ಲಾಟರಿ ಚೀಟಿ ಖರೀದಿ ಮಾಡುವ ಚಟವಿತ್ತು. ಇದರಿಂದ ಮನೆಯಲ್ಲಿ ಹೆಂಡತಿ ಬೋಯಿತಿದ್ದರು ಮನೆಯಲ್ಲಿ ಹಣವಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಅದರಲ್ಲಿ ಇದೊಂದು ನಿನ್ನ ಚಟವೆಂದು ಹೆಂಡತಿ ಹೇಳುತ್ತಿದ್ದರು.

ಹೆಂಡತಿ ಎಷ್ಟೇ ಹೇಳಿದರೂ ಕೂಡ ಮನೆಯವರಿಗೆ ಗೊತ್ತಿಲ್ಲದೇ ಲಾಟರಿ ಖರೀದಿ ಮಾಡುತ್ತಿದ್ದರು. ಒಂದು ದಿನ ಲಾಟರಿ ಚೀಟಿಯನ್ನು ಹಿಡಿದು ರಸ್ತಯಲ್ಲಿ ಬರುತ್ತಿದ್ದಾಗ ಲಾಟರಿ ನಂಬರ್ ನೋಡುತ್ತಾರೆ ಲಾಟರಿ ಒಡೆದಿರುವುದು ಗೊತ್ತಾಗುತ್ತದೆ. ಲಾಟರಿಯಲ್ಲಿ ಬಂದ ಹಣವನ್ನು ನೋಡಿ ರಾಜನ್ ಒಂದು ಸೆಕೆಂಡ್ ಶಾಕ್ ಆಗುತ್ತಾನೆ. ಆತನಿಗೆ ಅಂದು ಸಿಕ್ಕಿದ್ದು ಒಂದು ಎರಡು ಲಕ್ಷ ರೂಪಾಯಿ ಅಲ್ಲ.

ರಾಜನ್ ಗೆ ಲಾಟರಿಯಲ್ಲಿ ಸಿಕ್ಕಿದ್ದು ಬರೋಬ್ಬರಿ 12 ಕೋಟಿ ರೂಪಾಯಿ ಗಳು. ಇದರಿಂದ ಮನೆ ಮಂದಿಯೆಲ್ಲ ಖುಷಿ ಪಟ್ಟಿದ್ದಾರೆ, ರಾಜನ್ ಕೂಡ ಹೆಚ್ಚು ಖುಷಿ ಪಟ್ಟಿದ್ದು ಇದರಿಂದ ಬಂದಂತಂಹ ಹಣವನ್ನು ಮನೆಕಟ್ಟಿಸಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂಬುದಾಗಿ ಹೇಳುತ್ತಾರೆ. ಅದೇನೇ ಇರಲಿ ಯಾರ ಅದೃಷ್ಟ ಹೇಗೆ ಬರುತ್ತೆ ಅನ್ನೋದು ತಿಳಿಯೋದಿಲ್ಲ ಭರವಸೆ ಇರಬೇಕು ಬಾಳಲ್ಲಿ.

By admin

Leave a Reply

Your email address will not be published.