ಕನ್ನಡ ಚಿತ್ರರಂಗದಲ್ಲಿ ಯಂಗ್ ಆ್ಯಂಡ್ ಎನೆರ್ಜಿಟಿಕ್ ಆಗಿರುವ ಶಿವಣ್ಣ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ? ನಿಜಕ್ಕೂ ಶಾಕ್ ಆಗ್ತೀರಾ

ಕನ್ನಡ ಚಿತ್ರರಂಗದ ಯಂಗ್ ಆ್ಯಂಡ್ ಎನೆರ್ಜಿಟಿಕ್ ವ್ಯಕ್ತಿ ಎಂದರೆ ಮೊದಲು ನೆನಪಿಗೆ ಬರುವುದೇ ನಮ್ಮ ಶಿವಣ್ಣ ಅಲಿಯಾಸ್ ಡಾಕ್ಟರ್ ಶಿವರಾಜ್ ಕುಮಾರ್ ಅವರು ನಾವೆಲ್ಲರೂ ಪ್ರೀತಿಯಿಂದ ಅವರನ್ನು ಶಿವಣ್ಣ ಎಂದೇ ಕರೆಯುತ್ತೇವೆ ಇಂದಿಗೂ ಅವರಲ್ಲಿ ಸ್ವಲ್ಪನೂ ಎನರ್ಜಿ ಕಮ್ಮಿ ಆಗಿಲ್ಲ ಇಂದಿಗೂ ಅವರು ಮಾಡುವ ನೃತ್ಯ ಎಲ್ಲರ ಕಣ್ಣು ಮನ ಸೆಳೆಯುವುದು.ಎಲ್ಲರೊಂದಿಗೆ ನಗುನಗುತ್ತಲೇ ಬೆರೆಯುವ ಎನರ್ಜಿಟಿಕ್ ಸ್ಟಾರ್ ಆಗಿರುವ ನಮ್ಮ ಶಿವಣ್ಣ ಅವರ ನಿಜವಾದ ವಯಸ್ಸೆಷ್ಟು ಅನ್ನೋದು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ಇವರು ರಾಜಕುಮಾರ್ ಅವರ ಹಿರಿಯ ಪುತ್ರ ಇವರು ಕೂಡ ತಮ್ಮನ್ನು ಅಪ್ಪನ ಹಾಗೆಯೇ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಹಲವರು ಸಿನಿಮಾ ಅಲ್ಲಿ ನಟನೆ ಮಾಡಿದ್ದು ಅವರ ನಟನೆ ಹಾಗೂ ನೃತ್ಯಕ್ಕೆ ಅಭಿಮಾನಿಗಳು ಮನಸೊತಿದ್ದಾರೆ. ಅವರ ಮೊದಲ ಸಿನಿಮಾ ಆನಂದ್ ಆಗಿದ್ದು ಮುಂದಿನ ಎರಡು ಸಿನಿಮಾ ಕೂಡ ಶತದಿನ ಓಡಿದ್ದು, ಅಭಿನಯದ ಮೊದಲ ಮೂರು ಚಿತ್ರಗಳು ಶತದಿನೋತ್ಸವ ಆಗಿದ್ದಕ್ಕೆ ಅವರನ್ನು ಹ್ಯಾಟ್ರಿಕ್ ಹೀರೋ ಎಂದೇ ಪ್ರಸಿದ್ಧಿ ಪಡೆದರು. ಹೀಗೇ ಹಲವರು ಸಿನಿಮಾ ಅಲ್ಲಿ ನಟಿಸಿ ಹಲವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ 36 ವರ್ಷ ಆದರೂ ಕೂಡ ಇಂದಿಗೂ ಅವರ ಲವಲವಿಕೆ ಹಾಗೂ ಉತ್ಸಾಹ ಒಂದಿಂಚು ಕಡಿಮೆ ಆಗಿಲ್ಲ . ಹಾಗೂ ಇಲ್ಲಿಯವರೆಗೆ ಸರಿ ಸುಮಾರು 126 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕೆಲವೊಂದು ಸಿನಿಮಾಕ್ಕೆ ನಿರ್ಮಾಪಕರು ಆಗಿದ್ದಾರೆ ಹಾಗೂ ನಿರೂಪಕರು ಆಗಿದ್ದಾರೆ. ಶಿವಣ್ಣ ಒಬ್ಬ ಹಿನ್ನಲೆ ಗಾಯಕ ಎಂದರೆ ತಪ್ಪಲ್ಲ ಆನಂದ್, ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಅದ್ಬುತ ಹಿಟ್ ಆದ ಬಳಿಕ ಉಪೇಂದ್ರ ಅವರ ನಿರ್ದೇಶನದ ಓಂ ಚಿತ್ರ ಶಿವರಾಜ್ ಕುಮಾರ್ ಅವರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಕೊಟ್ಟ ಸಿನಿಮಾ ಎಂದೇ ಹೇಳಬಹುದು. ಓಂ ಚಿತ್ರ ಭರ್ಜರಿ ಹಿಟ್ ಆದ ಬಳಿಕ ಇಡೀ ಚಿತ್ರರಂಗವೇ ಶಿವಣ್ಣ ಕಡೆ ಮುಖ ಕೊಟ್ಟರು ಹಾಗೂ ಅವರ ಕಾಲಶೀಟ್ ಕಾಯುತಲಿದ್ದರು ಎಂದರೆ ಸುಳ್ಳಲ್ಲ ಅಷ್ಟೊಂದು ಪ್ರಸಿದ್ಧ ನಟ ಆಗಿದ್ದರು.

ಸಾಮಾನ್ಯವಾಗಿ ಚಿತ್ರಗಳು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಅದರ ಉಪಗ್ರಹ ಪ್ರಸಾರ ಹಕ್ಕು ಮಾರಾಟವಾಗುತ್ತದೆ. ಆದರೆ ಓಂ 1995ರಲ್ಲಿ ಬಿಡುಗಡೆಯಾಗಿದ್ದರೂ ಅದರ ಸ್ಯಾಟಲೈಟ್ ಹಕ್ಕು ಮಾರಾಟವಾಗಿದ್ದು 2015ರಲ್ಲಿ. ಅದೂ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು. ಇದುವರೆಗೂ ಓಂ ಚಿತ್ರ 632ಕ್ಕೂ ಹೆಚ್ಚು ಸಲ ಮರು ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವ ಸಿನಿಮಾ ಕೂಡ ಇಷ್ಟು ಬಾರಿ ಬಿಡುಗಡೆಯಾಗಿಲ್ಲ.

ಗೀತಾ ಅವರು ಶಿವರಾಜ್ ಕುಮಾರ ಅವರ ಧರ್ಮಪತ್ನಿ ಆಗಿದ್ದು ಮುದ್ದಾದ ಇಬ್ಬರು ಹೆಣ್ಣುಮಕ್ಕಳು ಪಾಲಕರು ಆಗಿದ್ದಾರೆ ಗೀತಾ ಅವರು ಕೂಡ ನಿರ್ಮಾಪಕರು ಆಗಿದ್ದಾರೆ. ಇತ್ತೀಚೆಗೆ ವೇದ ಎನ್ನುವ ಸಿನಿಮಾ ಅವರ ಪ್ರೊಡಕ್ಷನ್ ಅಲ್ಲಿ ಸೆಟ್ ಏರಿದೆ ರವಿಚಂದ್ರನ್ ,ಉಪೇಂದ್ರ ಹಾಗೂ ರಮೇಶ್ ಅವರು ಇವರ ನೆಚ್ಚಿನ ಗೆಳೆಯರು ಅವರು ಕೆಲವೊಂದು ಜಾಹೀರಾತಿಗೆ ರಾಯಭಾರಿ ಕೂಡ ಆಗಿದ್ದಾರೆ. ಇತ್ತೀಚೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಶೋ ಅಲ್ಲಿ ತೀರ್ಪುಗಾರರಾಗಿ ಬಂದಿದ್ದರು. ಇದರಿಂದ ನಮಗೆ ತಿಳಿಯುವುದೇನೆಂದರೆ ಅವರು ಒಬ್ಬ ಸರಳ ಸಜ್ಜನ ಹಾಗೂ ಯಾವುದೇ ಅಹಂಕಾರ ಇಲ್ಲದೆ ಎಲ್ಲರ ಜೊತೆ ಸೇರುವ ಮನೋಭಾವ ಎಲ್ಲರನ್ನೂ ಸೆಳೆಯುವುದು.

ಶಿವರಾಜ್ ಕುಮಾರ್ ಅವ್ರು ನಟಿಸಿದ ಕೆಲವೊಂದು ಸಿನಿಮಾ ನಮ್ಮೂರ ಮಂದಾರ ಹೂವೆ ,ಜನುಮದ ಜೋಡಿ ,ಜೋಗಿ, ಮಿಡಿದ ಶೃತಿ, Ak 47 ಮುಂತಾದ ಚಿತ್ರಗಳು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಅವಿಸ್ಮರಣೀಯ ಆಗಿದೆ.ಅದರಲ್ಲೂ ಅಣ್ಣಾ ತಂಗಿ ,ತವರಿಗೆ ಬಾ ತಂಗಿ ಸಿನಿಮಾ ಅಂತೂ ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿದಿದೆ.

ಹಾಗಿದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರವಯಸ್ಸೆಷ್ಟು ಅನ್ನೋದು ನೋಡುವುದಾದರೆ ಅವರಿಗೆ ವಯಸ್ಸು ಅರವತ್ತು ಅವರಿಗೆ 60 ಆಗಿದ್ದರು ಕೂಡ ಅದೇ ಎನರ್ಜಿಯಿಂದ ಇಂದಿಗೂ ಚಿತ್ರಗಳಲ್ಲಿ ನಟನಾಗಿ ನಟಿಸಿದ್ದು ಅವರಿಗೆ ವಯಸ್ಸು 60 ಆಗಿದೆ ಎಂದರೆ ನಂಬಲು ಸಾಧ್ಯವಿಲ್ಲ ಹಾಗೆ ನಟನೆ ಮಾಡುತ್ತಾರೆ. ಹೀಗೇ ಸದಾ ಕಾಲ ಖುಷಿಯಾಗಿ ಇರಲಿ ಎಂದು ಆಶಿಸುತ್ತಾ ಇನ್ನೂ ಹೆಚ್ಚಿನ ಸಿನಿಮಾ ನಿಮ್ಮ ಪಾಲಿಗೆ ಬರಲಿ ಹಾಗೂ ನಟಿಸುತ್ತಿರುವ ಸಿನಿಮಾ ಶತದಿನ ಆಚರಿಸಲಿ ಎಂದು ಆಶಿಸುತ್ತೇವೆ.

Leave a Comment

error: Content is protected !!