ಸ್ಪರ್ಶ ಸಿನಿಮಾ ಮೂಲಕ ಎಲ್ಲರ ಮನೆ ಮಾತಾಗಿರುವ ರೇಖಾ ಅವರು ಅಂದಿನ ದಿನಗಳಲ್ಲಿ ಸುದೀಪ್, ದರ್ಶನ್ ಅವರೊಂದಿಗೆ ಸಿನಿಮಾದಲ್ಲಿ ನಟಿಸಿ ಬಹು ಬೇಡಿಕೆಯ ನಟಿಯಾಗಿದ್ದರು. ರೇಖಾ ಅವರು ಇನ್ನು ಮುಂದೆ ಕಿರುತೆರೆಯಲ್ಲಿ ನಟಿಸಲಿದ್ದಾರೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡದ ಅನೇಕ ನಟ ನಟಿಯರು ಬೆಳ್ಳಿತೆರೆಯಲ್ಲಿ ಮಿಂಚಿದ ಮೇಲೆ ಕಿರುತೆರೆಗೆ ಎಂಟ್ರಿ ನೀಡಿ ಕಿರುತೆರೆಯಿಂದ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವುದು ಇತ್ತಿಚೆಗೆ ಬಹಳ ಸಹಜವಾಗಿಬಿಟ್ಟಿದೆ. ಹಿರಿಯ ನಟಿ ಉಮಾಶ್ರೀ ಅವರು ಜಿ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ನಟಿ ಸುಧಾರಾಣಿ ಹಾಗೂ ನಟಿ ಭಾವನಾ ಕೂಡ ಕಿರುತರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದೀಗ ಇದೆ ಸಾಲಿಗೆ ನಟಿ ಸ್ಪರ್ಶ ರೇಖಾ ಕೂಡ ಸೇರಿಕೊಳ್ಳುತ್ತಿದ್ದಾರೆ.

ಸ್ಪರ್ಶ ರೇಖಾ ಎಂಬ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ಸ್ಪರ್ಶ ಹಾಗೂ ಮೆಜೆಸ್ಟಿಕ್ ನಂತಹ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ನಂತರ ಬಣ್ಣದ ಲೋಕದಿಂದ ದೂರ ಉಳಿದ ನಟಿ ರೇಖಾ ಇದೀಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ್ದಾರೆ. ಇದೀಗ ನಟಿ ರೇಖಾ ಕಿರುತೆರೆಗೂ ಸಹ ಎಂಟ್ರಿ ನೀಡುತ್ತಿದ್ದಾರೆ ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಹಾಗಾದರೆ ನಟಿ ರೇಖಾ ನಟಿಸುತ್ತಿರುವ ಧಾರವಾಹಿ ಯಾವುದು ಎಂಬ ಕುತೂಹಲ ಅಭಿಮಾನಿಗಳಿಗೆ ಕಾಡುತ್ತಿದೆ. ಸ್ಯಾಂಡಲ್ ವುಡ್ ನಟಿ ರೇಖಾ ಅವರು ಸ್ಪರ್ಶ ಸಿನಿಮಾದಲ್ಲಿ ನಟ ಸುದೀಪ್ ಗೆ ನಾಯಕಿಯಾಗಿ ಅಭಿನಯಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.

ಇಂದಿಗೂ ಸಹ ನಟಿ ರೇಖಾ ಅವರನ್ನು ಸ್ಪರ್ಶ ರೇಖಾ ಎಂದೆ ಎಲ್ಲರೂ ಗುರುತಿಸುತ್ತಾರೆ. ಸ್ಪರ್ಶ ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಮೆಜೆಸ್ಟಿಕ್ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದರು. ಇನ್ನು ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದರು. ನಂತರ ಮದುವೆಯಾದ ಬಳಿಕ ನಟಿ ರೇಖಾ ಸಿನಿಮಾರಂಗದಿಂದ ಕೊಂಚ ದೂರ ಉಳಿದುಬಿಟ್ಟಿದ್ದರು. ಇದೀಗ ನಟಿ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

ನಟಿ ರೇಖಾ ಇದೀಗ ಕಿರುತೆರೆಗೆ ಎಂಟ್ರಿ ನೀಡುತ್ತಿದ್ದಾರೆ ಎನ್ನುವ ಮಾತುಗಳು ಸದ್ಯ ಹರಿದಾಡುತ್ತಿದೆ. ಕಿರುತೆರೆಯ ಧಾರವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಟಿ ರೇಖಾ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಆದರೆ ನಟಿ ಯಾವ ಧಾರವಾಹಿಯಲ್ಲಿ ಯಾವ ಪಾತ್ರದಲ್ಲಿ ಅಭಿನಯಿಸಲ್ಲಿದ್ದಾರೆ ಎನ್ನುವ ಬಗ್ಗೆ ಇನ್ನೂ ಯಾವುದೆ ಅಧಿಕೃತವಾದ ಮಾಹಿತಿ ದೊರಕಿಲ್ಲ. ಒಟ್ಟಿನಲ್ಲಿ ರೇಖಾ ಅವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಮಾತ್ರ ದೊರೆತಿದೆ. ಕಿರುತೆರೆಯಲ್ಲಿ ಸ್ಪರ್ಶ ರೇಖಾ ಅವರು ಕಾಣಿಸಿಕೊಳ್ಳಲಿದ್ದಾರೆ ಅವರಿಗೆ ಕಿರುತೆರೆಯಲ್ಲಿ ಯಶಸ್ಸು ಸಿಗಲಿ ಎಂದು ಆಶಿಸೋಣ.

By admin

Leave a Reply

Your email address will not be published.