ಸುಮಾರು 120 ವರ್ಷಗಳ ಹಿಂದೆ ನಮ್ಮ ಭಾರತ ದೇಶ ಹೇಗಿತ್ತು? ಈಗ ಹೇಗಾಗಿದೆ ನಿಜಕ್ಕೂ ಎಷ್ಟೊಂದು ಬದಲಾವಣೆ ನೋಡಿ!

ನಮ್ಮ ದೇಶ ಭಾರತ ಆಗಿದೆ. ಇದನ್ನು ಭರತ ಎಂಬ ರಾಜ ಆಳುತ್ತಿದ್ದನು. ಹಾಗಾಗಿ ಭಾರತ ಎಂಬ ಹೆಸರು ಬಂದಿದೆ. ಹಾಗೆಯೇ ನಮ್ಮ ದೇಶವು ಹಿಂದೆ ಅನೇಕ ಇತಿಹಾಸಗಳನ್ನು ಹೊಂದಿದೆ. ನಮ್ಮ ದೇಶದ ಮತ್ತು ರಾಜರುಗಳ ಇತಿಹಾಸದ ಬಗ್ಗೆ ಶಾಲೆಯಿಂದ ಕಾಲೇಜಿನವರೆಗೂ ಕಲಿಯುತ್ತಾ ಬಂದಿದ್ದೇವೆ. ಏಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇತಿಹಾಸ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಇಲ್ಲಿ 1990ರಲ್ಲಿ ನಮ್ಮ ಭಾರತ ದೇಶ ಹೇಗೆ ಇತ್ತು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇತಿಹಾಸ ಎಷ್ಟರ ಮಟ್ಟಿಗೆ ಹೇಳಲು ಮತ್ತು ನೋಡಲು ಸುಂದರವಾಗಿ ಕಾಣುತ್ತದೆಯೋ ಅಷ್ಟೇ ನಿಗೂಢವಾಗಿ ಇರುತ್ತದೆ. ಅಷ್ಟಷ್ಟು ಸಮಯಕ್ಕೆ ಜೀವನಶೈಲಿ ಬದಲಾಗುತ್ತಿರುತ್ತದೆ. ಸುಮಾರು ನೂರಾ ಇಪ್ಪತ್ತು ವರ್ಷಗಳ ಹಿಂದೆ ಭಾರತದಲ್ಲಿ ಮನುಷ್ಯರ ಅಂತಿಮ ಆಯಸ್ಸು ಸುಮಾರು 48 ಆಗಿತ್ತು. ಇದಕ್ಕೆ ಕಾರಣ ಈಗಿನ ಆಧುನಿಕತೆ ಆಗ ಇರಲಿಲ್ಲ. ಹಾಗೆಯೇ ಯಾವುದೇ ರೀತಿಯ ಆಸ್ಪತ್ರೆಯ ಸೌಲಭ್ಯಗಳು ಇರಲಿಲ್ಲ. ಆದರೆ ಈಗ ಒಬ್ಬ ವ್ಯಕ್ತಿಯ ಸರಾಸರಿ ಆಯಸ್ಸು ಸುಮಾರು 74ವರ್ಷಗಳು. ಇದಕ್ಕೆ ಕಾರಣ ಈಗಿನ ಆಧುನಿಕತೆ ಮತ್ತು ತಂತ್ರಜ್ಞಾನ ಮತ್ತು ವೈದ್ಯಕೀಯಚಿಕಿತ್ಸೆ.

ಆಗಿನ ಜನಸಂಖ್ಯೆ ಸುಮಾರು 24ಕೋಟಿ ಆಗಿತ್ತು. ಆಗ ಭಾರತ ಮತ್ತು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇವೆಲ್ಲ ಸೇರಿ ಅವಿಭಾಜ್ಯವಾಗಿತ್ತು. ಈ ಮೂರು ಸೇರಿ ಜನಸಂಖ್ಯೆ 24ಕೋಟಿ ಆಗಿತ್ತು. ಆಗ ಒಬ್ಬ ಕೂಲಿಗಾರ ಒಂದು ದಿನಕ್ಕೆ 15 ರಿಂದ 20ಪೈಸೆ ದುಡಿಯುತ್ತಿದ್ದ. ಒಂದು ತಿಂಗಳಿಗೆ ಲೆಕ್ಕ ಹಾಕಿದರೆ ತಿಂಗಳ ಆದಾಯ 10ರೂಪಾಯಿಗಿಂತ ಕಡಿಮೆ ಆಗಿತ್ತು. ಒಬ್ಬನ ಜೇಬಿನಲ್ಲಿ 5ರೂಪಾಯಿ ಇದ್ದರೆ ಅವನನ್ನು ಶ್ರೀಮಂತ ಎಂದು ಕರೆಯುತ್ತಿದ್ದರು. 1917ರಲ್ಲಿ ಭಾರತದಲ್ಲಿ ಒಂದು ರೂಪಾಯಿಯ ನೋಟನ್ನು ಮುದ್ರಿಸಿ ಚಲಾವಣೆಗೆ ತರಲಾಯಿತು. ಇದಕ್ಕಿಂತ ಮೊದಲು ತಾಮ್ರ, ಬೆಳ್ಳಿ ಮುಂತಾದವುಗಳ ನಾಣ್ಯಗಳು ಬಳಕೆಯಲ್ಲಿ ಇದ್ದವು.

ಆಗ ಹೆಚ್ಚಾಗಿ ಮಕ್ಕಳ ಜನನ ಮನೆಯಲ್ಲಿ ಆಗುತ್ತಿತ್ತು. ಹಾಗೆಯೇ ಅಷ್ಟೇ ಸಾವು ಕೂಡ ಆಗುತ್ತಿತ್ತು. ಇದಕ್ಕೆ ಕಾರಣವೇನೆಂದರೆ ಆಸ್ಪತ್ರೆಗಳು ಇಲ್ಲದೇ ಇರುವುದು. ಆದರೆ ಈಗ 95ಶೇಕಡಾದಷ್ಟು ಮಕ್ಕಳು ಆಸ್ಪತ್ರೆಯಲ್ಲಿ ಹುಟ್ಟುತ್ತವೆ. ಆಗ ಜನರು ಹೆಚ್ಚಿನ ಸಮಯವನ್ನು ದೇವಸ್ಥಾನ, ಮರಗಳ ಕೆಳಗೆ ಮತ್ತು ದೇವಸ್ಥಾನದ ಕಟ್ಟೆಗಳ ಮೇಲೆ ಕಳೆಯುತ್ತಿದ್ದರು. ಹಾಗೆಯೇ ಬೇಟೆಯಾಡುವುದು ಎಂದರೆ ಒಂದು ಶೋಕಿಯಾಗಿತ್ತು. ಇನ್ನು ವಸ್ತ್ರದ ವಿಷಯಕ್ಕೆ ಹೋದರೆ ಆಗ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಧೋತಿ ಹಾಕುವುದು ಸರ್ವೇ ಸಾಮಾನ್ಯವಾಗಿತ್ತು. ಹಾಗೆಯೇ ಭೂತ ಪ್ರೇತಗಳನ್ನು ನಂಬುತ್ತಿದ್ದರು.

ಹೆಚ್ಚಾಗಿ ಮನೆಗಳನ್ನು ಮಣ್ಣಿನಿಂದ ಕಟ್ಟುತ್ತಿದ್ದರು. ಹಾಗೆಯೇ ಚಕ್ಕಡಿ ಗಾಡಿಗಳನ್ನು ಬಳಸುತ್ತಿದ್ದರು. ಒಳಚರಂಡಿ ವ್ಯವಸ್ಥೆ ಸರಿಯಾಗಿ ಇರುತ್ತಿರಲಿಲ್ಲ. ನಗದು ನಾಣ್ಯಗಳನ್ನು ಭೂಮಿಯಲ್ಲಿ ಹೂತು ಇಡುತ್ತಿದ್ದರು. ಹೂತಿಟ್ಟ ವ್ಯಕ್ತಿ ಸತ್ತರೆ ಯಾರಿಗೂ ತಿಳಿದಿರುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಕೆಲವು ಕಡೆ ಮಣ್ಣು ತೆಗೆದಾಗ ನಗ ನಾಣ್ಯಗಳು ಸಿಗುತ್ತವೆ. ಹಾಗೆಯೇ ಆಗ 4000ಶಾಲೆಗಳು, 540ಕಾಲೇಜುಗಳು ಹಾಗೂ 7 ರಿಂದ 8 ವಿಶ್ವ ವಿದ್ಯಾನಿಲಯಗಳು ಇದ್ದವು. ಇಷ್ಟೊಂದು ಬದಲಾವಣೆಗಳು ಮುಂಚೆ ಇತ್ತು. ಆದರೆ ಈಗ ಹಾಗಲ್ಲ. ನಮ್ಮ ದೇಶ ಬಹಳಷ್ಟು ಮುಂದುವರಿದಿದೆ. ಎಲ್ಲಾ ಕ್ಷೇತ್ರದಲ್ಲಿ ತನ್ನ ಮೇಲುಗೈ ಸಾಧಿಸಿದೆ.

Leave a Comment

error: Content is protected !!