ಮನೆಗೆ ಗ್ಯಾಸ್ ಬಳಸುತ್ತಿದ್ರೆ ಎಕ್ಸ್ ಪರಿ ದಿನಾಂಕವನ್ನು ತಿಳಿಯಿರಿ

ಹಿಂದಿನ ಕಾಲದಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಆದರೆ ಈಗ ಕರೆಂಟ್ ಒಲೆಗಳು, ಗೊಬ್ಬರ್ ಗ್ಯಾಸ್ ಒಲೆ, ಸಿಲಿಂಡರ್ ಗ್ಯಾಸ್ ಒಲೆ, ಹೀಗೆ ಬೇರೆ ಬೇರೆ ರೀತಿಯ ಒಲೆಗಳನ್ನು ಬಳಸಿ ಅಡುಗೆ ಮಾಡುತ್ತಾರೆ. ಈಗ ಬೆಂಕಿ ಉರಿಸದೆ ಸಹ ಅಡುಗೆ ಮಾಡಬಹುದು. ಅಂತಹ ಟೆಕ್ನಾಲಜಿಗಳನ್ನು ಸಹ ಬಳಸಲಾಗುತ್ತಿದೆ. ಆದರೆ ಇಲ್ಲಿ ಸಿಲಿಂಡರ್ ಗ್ಯಾಸ್ ಬಗೆಗೆ ಮಾಹಿತಿ ನೀಡಲಾಗಿದೆ. ಮಾನವನಿಂದ ತಯಾರಿಸಲ್ಪಟ್ಟ ಪ್ರತಿಯೊಂದು ವಸ್ತುವಿಗೂ ಇಂತಿಷ್ಟು ಅವಧಿಯ ಸಮಯಾವಕಾಶ ಇರುತ್ತದೆ. ಹಾಗೆಯೆ ಗ್ಯಾಸ್ ಸಿಲಿಂಡರ್ ಗೂ ಕೂಡ ಅವಧಿಯ ಮಿತಿ ಇರುತ್ತದೆ. ಅವಧಿ ಮುಗಿದ ನಂತರವು ಬಳಸಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಗ್ಯಾಸ್ ಸಿಲಿಂಡರ್ ನ ಅವಧಿಯ ಸಮಯ ನೋಡುವುದು ಹೇಗೆ ಎಂಬುದನ್ನು ಇಲ್ಲಿರುವ ಮಾಹಿತಿಯಿಂದ ನಾವು ತಿಳಿಯೋಣ.

ನಾವು ಸಿಲಿಂಡರ್ ತರುವಾಗ ಅವಧಿ ಮುಗಿದಿದೆಯೋ ಇಲ್ಲವೋ ನೋಡುವುದಿಲ್ಲ ಇಲ್ಲವೇ ಕೆಲವರಿಗೆ ಇದರ ಬಗೆಗೆ ಮಾಹಿತಿ ತಿಳಿದಿರುವುದಿಲ್ಲ. ಗ್ಯಾಸ್ ಸಿಲಿಂಡರ್ ಖಾಲಿಯಾದಾಗ ಮತ್ತೊಂದನ್ನು ಬುಕ್ ಮಾಡಿ ಗ್ಯಾಸ್ ತಂದುಬಿಡುತ್ತಾರೆ. ಆದರೆ ಹೀಗೆ ಮಾಡುವ ಮೊದಲು ಸಿಲಿಂಡರ್ ಹಿಡಿಕೆಯ ಒಳಗಡೆಯಲ್ಲಿ ಇರುವ ಕೊಡ್ ಗಳನ್ನು ಗಮನಿಸಬೇಕು. ಇಲ್ಲವಾದಲ್ಲಿ ಅನಾಹುತವಾಗಬಹುದು. ಗ್ಯಾಸ್ ಸಿಲಿಂಡರ್ ಮೇಲೆ‌ ಎ, ಬಿ, ಸಿ, ಡಿ ಎಂದು ಬರೆದು ಅದರ ಮುಂದೆ ಎರಡು ಸಂಖ್ಯೆಗಳನ್ನು ನಮೂದಿಸಿರುತ್ತಾರೆ. ಇದರ ಅರ್ಥ ಏನೆಂದರೆ ಎ, ಬಿ, ಸಿ, ಡಿ ಎನ್ನುವುದು ತಿಂಗಳಿನ ಅವಧಿಯ ಗುರುತು. ಅದರ ಮುಂದೆ ನಮೂದಿಸಿರುವುದು ವರ್ಷದ ಸಂಖ್ಯೆ.

ಎ ಎನ್ನುವುದು ಜನವರಿ ಇಂದ ಮಾರ್ಚ್ ವರೆಗಿನ ಅವಧಿಯ ಗುರುತು, ಬಿ ಎನ್ನುವುದು ಎಪ್ರಿಲ್ ನಿಂದ ಜೂನ್ ವರೆಗಿನ ಅವಧಿ ತೋರಿಸುತ್ತದೆ. ಸಿ ಎನ್ನುವುದು ಜುಲೈದಿಂದ ಸಪ್ಟೆಂಬರ್ ತಿಂಗಳ ವರೆಗಿನ ಅವಧಿಯ ಗುರುತಾದರೆ, ಡಿ ಎನ್ನುವುದು ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಅವಧಿಯನ್ನು ತೋರಿಸುತ್ತದೆ. ಉದಾಹರಣೆಗೆ ಎ 16. ಇದರಲ್ಲಿ ಎ ಎನ್ನುವುದು ಜನವರಿಯಿಂದ ಮಾರ್ಚ್ ವರೆಗೂ ಆ ಸಿಲಿಂಡರ್ ಅನ್ನು ಉಪಯೋಗಿಸಬಹುದು ಎಂದು ಅರ್ಥ. 16 ಎನ್ನುವುದು 2016 ರಲ್ಲಿ ತಯಾರಿಸಲಾಗಿದೆ ಎಂದು ತೋರಿಸುತ್ತದೆ. ಗ್ಯಾಸ್ ಸಿಲಿಂಡರ್ ಅವಧಿ ಮುಗಿದಾಗ ಗ್ಯಾಸ್ ಏಜೆನ್ಸಿಗಳು ಆ ಸಿಲಿಂಡರ್ ಗಳನ್ನು ಸರ್ವಿಸ್ ಮಾಡಿಸಿ, ಸರ್ವಿಸ್ ಮಾಡಿದ ವರ್ಷ ಹಾಗೂ ತಿಂಗಳನ್ನು ನಮೂದಿಸಬೇಕಾಗುತ್ತದೆ. ಹಾಗೆ ಸರ್ವಿಸ್ ಮಾಡದ ಗ್ಯಾಸ್ ಸಿಲಿಂಡರ್ ಜೀವಕ್ಕೆ ಮಾರಕವಾಗಿರುತ್ತದೆ. ಒಂದು ವೇಳೆ ಕಳೆದ ವರ್ಷಗಳ ಅವಧಿ ಮುಗಿದ ಸಿಲಿಂಡರ್ ಕಂಡಾಗ ಅದನ್ನು ತಿರುಗಿ ಕೊಟ್ಟು ಸರಿಯಾಗಿರುವುದನ್ನು ಖರೀದಿಸಿ. ಒಂದು ಅಧ್ಯಯನದ ಪ್ರಕಾರ ಆಗುತ್ತಿರುವ ಗ್ಯಾಸ್ ಅವಗಡಗಳಿಗೆ ಕಾರಣ ಅವಧಿ ಮುಗಿದ ಸಿಲಿಂಡರ್ ಗಳು ಸರ್ವಿಸ್ ಆಗದೆ ಹಾಗೆಯೆ ಬಳಕೆ ಮಾಡುವುದು ಎಂದು ತಿಳಿದು ಬಂದಿದೆ.

ಗ್ಯಾಸ್ ಸಿಲೆಂಡರ್ ಗಳು ಅವಧಿ ಮುಗಿದ ಮೇಲೂ ಬಳಸಿದರೆ ಸ್ಪೋಟಗೊಳ್ಳುವ ಅವಕಾಶವಿರುತ್ತದೆ. ಅಪಾಯಕ್ಕೆ ಅವಕಾಶ ಕೊಡದೆ ಜಾಗ್ರತೆಯಾಗಿರುವುದು ಉತ್ತಮ. ಅವಧಿ ಮುಗಿದ ಯಾವುದೆ ವಸ್ತುಗಳಾದರೂ ಜೀವಕ್ಕೆ ಅಪಾಯಕಾರಿ ಆಗಿರುತ್ತದೆ. ಹಾಗಾಗಿ ಯಾವುದೆ ವಸ್ತುಗಳನ್ನು ಕೊಳ್ಳುವಾಗ ಅದರ ಅವಧಿ ಮುಗಿದಿದೆಯೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು ಉತ್ತಮ.

Leave a Comment

error: Content is protected !!