ನಾವು ಯಾವುದಾದರೂ ಲೋನ್ ಅಥವಾ ಕ್ರೆಡಿಟ್ ಗೆ ಅರ್ಜಿ ಹಾಕಿದಾಗ ಬ್ಯಾಂಕ್ ನವರು ಮೊದಲು ನೋಡುವುದು ಸಿಬಿಲ್ ಸ್ಕೋರ್. ಹಾಗಾದರೆ ಈ ಸಿಬಿಲ್ ಸ್ಕೋರ್ ಅನ್ನು ಆನ್ಲೈನ್ ನಲ್ಲಿ ಹೇಗೆ ನೋಡುವುದು ಎನ್ನುವ ಮಾಹಿತಿಯನ್ನು ನಾವು ತಿಳಿಯೋಣ.

ಲೋನ್ ಅಥವಾ ಕ್ರೆಡಿಟ್ ಅನ್ನು ಬ್ಯಾಂಕ್ ನವರು ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರವೆ ಅಪ್ರೂವಲ್ ಮಾಡುತ್ತಾರೆ. ಸಿಬಿಲ್ ಸ್ಕೋರ್ ಲೋನ್ ನ ಹಿಂದಿರುಗಿಸಿದರ ಮೇಲೆ ನಿರ್ಧರಿಸುತ್ತಾರೆ. ಸಿಬಿಲ್ ಸ್ಕೋರ್ 300 ರಿಂದ 900 ರ ವರೆಗೂ ಇರುತ್ತದೆ. 500 ರ ಕೆಳಗೆ ಸ್ಕೋರ್ ಇದ್ದರೆ ಲೋನ್ ಹಾಗೂ ಕ್ರೆಡಿಟ್ ಸಿಗುವುದಿಲ್ಲ. ಮೊಬೈಲ್ ನಲ್ಲಿ ಗೂಗಲ್ ಅಥವಾ ಕ್ರೋಮ್ ನಲ್ಲಿ SIBIL SCORE ಎಂದು ಬರೆದು ಸರ್ಚ್ ಮಾಡಬೇಕು. ಹಲವಾರು ಆಯ್ಕೆ ಬರುತ್ತದೆ ಅದರಲ್ಲಿ ಬ್ಯಾಂಕ್ ಬಜಾರ್ ಎಂದು ಇರುವುದನ್ನು ಆಯ್ದುಕೊಳ್ಳಬೇಕು. ಬ್ಯಾಂಕ್ ಬಜಾರ್ ನಲ್ಲಿ ಸಿಬಿಲ್ ಸ್ಕೋರ್ ಅನ್ನು ಫ್ರೀ ಆಗಿ ನೋಡಬಹುದು. ಮೊದಲ ಬಾರಿ ಸಿಬಿಲ್ ಸ್ಕೋರ್ ನೋಡುತ್ತಿದ್ದರೆ ಮೊಬೈಲ್ ನಂಬರ್ ಕೇಳುತ್ತದೆ. ಹಾಗೂ ಪಾನ್ ಕಾರ್ಡ್ ನಂಬರ್ ಕೇಳುತ್ತದೆ. ಅದನ್ನು ನಮೂದಿಸಿ ಲಾಗಿನ್ ಆಗಬೇಕಾಗುತ್ತದೆ. ನಂತರ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿದಾಗ ಸಿಬಿಲ್ ಸ್ಕೋರ್ ಅನ್ನು ಕಾಣಿಸುತ್ತದೆ. ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಫ್ರೀ ಕ್ರೆಡಿಟ್ ಕಾರ್ಡ್ ಸಿಗುತ್ತದೆ. ಲೋನ್ ಸುಲಭವಾಗಿ ಸಿಗುತ್ತದೆ. ಎಡಗಡೆಯಲ್ಲಿ ಕಾಣುವ ಮೂರು ಲೈನ್ ಆಯ್ದುಕೊಂಡರೆ ಅಪ್ಲಿಕೇಶನ್, ಮೈ ಸರ್ಚ್ಸ್ ನೋಡಬಹುದು, ಮೈ ಕ್ರೆಡಿಟ್ ಸ್ಕೋರ್ ಅನ್ನು ಆಯ್ದುಕೊಂಡರೆ ಮತ್ತೆ ಸಿಬಿಲ್ ಸ್ಕೋರ್ ಎಷ್ಟು ಎಂದು ಕಾಣಿಸುತ್ತದೆ.

ಈ ರೀತಿಯಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ನೋಡಬಹುದು. ಬ್ಯಾಂಕ್ ಬಜಾರ್.ಕಾಂ ವೆಬ್ ಸೈಟ್ ನಲ್ಲಿ ಖಾತೆ ತೆರೆದು ಸಿಬಿಲ್ ಸ್ಕೋರ್ ನೋಡಬಹುದು. ಸಿಬಿಲ್ ಸ್ಕೊರ್.ಕಾಂ ಎನ್ನುವ ವೆಬ್ ಸೈಟ್ ನಲ್ಲಿ ಕೂಡ ಚೆಕ್ ಮಾಡಬಹುದು. ಈ ವೆಬ್ ಸೈಟ್ ನಲ್ಲಿ ಲಾಗಿನ್ ಆದ ಮೇಲೆ ಕ್ರೆಡಿಟ್ ಕಾರ್ಡ್ ಗಳ ಫೋನ್ ಗಳು ಬರುತ್ತ ಇರುತ್ತದೆ. ಅವಶ್ಯಕತೆ ಇಲ್ಲದೆ ಅದನ್ನು ಬಳಸಿಕೊಳ್ಳಬೇಡಿ. ಕ್ರೆಡಿಟ್ ಕಾರ್ಡ್ ಕಡಿಮೆ ಬಳಸಿ.

By admin

Leave a Reply

Your email address will not be published.