ಹೊಸಮನೆ ಕಟ್ಟುತಿದ್ದೀರಾ? ಅಥವಾ ಹೊಸ ಮನೆ ಖರೀದಿಸುತ್ತಿದ್ರೆ ಈ ಯೋಜನೆಯನ್ನು ಪಡೆದುಕೊಳ್ಳಿ.

ಹೊಸ ಮನೆ ಕಟ್ಟುತ್ತಿದ್ದರೆ ಮತ್ತು ಹೊಸ ಮನೆಯನ್ನು ಖರೀದಿಸುತ್ತಾ ಇದ್ದರೆ 2,67,000 ರೂಪಾಯಿಗಳನ್ನು ಉಚಿತವಾಗಿ ಸಬ್ಸಿಡಿಯನ್ನು ಪಡೆಯಬಹುದು. ಕೇಂದ್ರ ಸರ್ಕಾರದಿಂದ ಕೊಡುವ 2,67,000 ರೂಪಾಯಿಗಳನ್ನು ಹೇಗೆ ಪಡೆಯುವುದು, ಅದನ್ನು ಪಡೆಯಲು ಏನೇನು ದಾಖಲೆಗಳು ಬೇಕು? ಎಲ್ಲಿ ಪಡೆಯುವುದು ಅನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೇಂದ್ರ ಸರ್ಕಾರದಿಂದ 2022 ರ ಒಳಗಾಗಿ ಎಲ್ಲರಿಗೂ ಸೂರು ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿ ಅಂದರೆ, PMAY ಅಡಿಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ಯಾವುದೇ ರೀತಿಯ ಜಾತಿ ಬೇಧ ಇಲ್ಲ ಯಾರು ಬೇಕಿದ್ದರೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಯರಾದರೂ ಹೊಸ ಮನೆಯನ್ನು ಖರೀದಿಸುತ್ತಾ ಇದ್ದರೆ ಅಥವಾ ಹೊಸ ಮನೆಯನ್ನು ಕಟ್ಟುತ್ತಾ ಇದ್ದರೆ ಈ ಯೋಣನೆಯ ಅಡಿಯಲ್ಲಿ 2,67,000 ರೂಪಾಯಿ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿ ನಿಮಗೆ ಸಾಲವಾಗಿ 2,67,000 ರೂಪಾಯಿ ಸಬ್ಸಿಡಿಯನ್ನು ಪಡೆಯಬಹುದಾಗಿದೆ.

ಈ ಸೌಲಭ್ಯವನ್ನು ಪಡೆಯಲು ಏನೆಲ್ಲಾ ದಾಖಲೆಗಳು ಬೇಕು ಅಂತ ನೋಡುವಾದರೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್ ಹಾಗೂ ಪಾಸ್ಪೋರ್ಟ್ ಅಳತೆಯ ಎರಡು ಫೋಟೋ. ಈ ಸೌಲಭ್ಯವನ್ನು ಪಡೆಯಲು ಈ ಎಲ್ಲಾ ದಾಖಲೆಗಳು ಇರಬೇಕಾಗುತ್ತದೆ. ಈ ಸೌಲಭ್ಯವು ವಾರ್ಷಿಕ ಆದಾಯ 6 ಲಕ್ಷದಿಂದ 12 ಲಕ್ಷ , 12 ಲಕ್ಷದಿಂದ 18 ಲಕ್ಷದ ಒಳಗೆ ಇರಬೇಕು. ಆದಾಯ ಪ್ರಮಾಣ ಪತ್ರದಲ್ಲಿ 18 ಲಕ್ಷಕ್ಕಿಂತಲೂ ಕಡಿಮೆ ಆದಾಯಾ ಇರಬೇಕು. ಮನೆ ಕಟ್ಟಲು 9 ಲಕ್ಷ ಸಾಲ ಪಡೆದರೆ 2,35,000 ರೂಪಾಯಿ ಸಬ್ಸಿಡಿಯನ್ನು ಪಡೆಯಬಹುದಾಗಿದೆ. ಅಥವಾ 12 ಲಕ್ಷದಿಂದ 18 ಲಕ್ಷದವರೆಗೆ ಸಾಲವನ್ನು ಪಡೆದರೆ 2,67,000 ರೂಪಾಯಿಯನ್ನು ಸಬ್ಸಿಡಿಯನ್ನಾಗಿ ನೀಡಲಾಗುತ್ತದೆ. ಹಾಗಾದ್ರೆ ಸಾಲವನ್ನು ಎಲ್ಲಿ ಹೇಗೆ ಪಡೆಯಬಹುದು ಎಂದು ನೋಡುವುದಾದರೆ, ನಿಮ್ಮ ಬ್ಯಾಂಕ್ ಖಾತೆಯನ್ನು ಹೊಂದಿರುವ ಹತ್ತಿರದ ಶಾಖೆಗೆ ಹೋಗಿ, ಬ್ಯಾಂಕ್ ಅಧಿಕಾರಿಗಳ ಬಳಿ ಭೇಟಿ ನೀಡಿ ನೇರವಾಗಿ ಕೇಳಿದರೆ ಈ ಸಾಲಗಳನ್ನು ಪಡೆಯಬಹುದು ಅಥವಾ ನಿಮ್ಮ ವಲಯಕ್ಕೆ ಬರುವ ಕೇಂದ್ರ ಸರ್ಕಾರದ PMAY ಈ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಗಳಿಂದ ಸಾಲವನ್ನು ಪಡೆದುಕೊಂಡು 2,67,000 ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಹಾಗಾಗಿ ಯಾರಾದರೂ ಹೊಸದಾಗಿ ಮನೆಯನ್ನು ಕಟ್ಟುವವರು ಇದ್ದಲ್ಲಿ ಅಥವಾ ಹೊಸ ಮನೆಯನ್ನು ಕೊಳ್ಳುವವರು ಉದ್ದರೆ ಅಥವಾ ಈಗ ಇರುವ ಮನೆಯನ್ನೇ ಇನ್ನೂ ಅಭಿವೃದ್ಧಿ ಮಾಡುವವರು ಇದ್ದರೆ ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಗೆ ಭೇಟಿ ನೀಡಿ ಈ ಮೇಲೆ ಹೇಳಿದ ಎಲ್ಲ ದಾಖಲೆಗಳನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Leave a Comment

error: Content is protected !!