ಮನೆಯ ಗೋಡೆಗೆ ಸಕತ್ ಲುಕ್ ಕೊಡೊ ಪೇಂಟಿಂಗ್ ಹೇಗೆ ಮಾಡ್ತಾರೆ ನೋಡಿ
ಒಂದು ಮನೆಯ ಅಲಂಕಾರಿಕ ಹಾಗೂ ಸೌಂದರ್ಯವರ್ಧಕವಾಗಿ ಪೇಂಟಿಂಗ್ ಅನ್ನು ಮಾಡಲಾಗುತ್ತದೆ. ಮನೆಯ ಸೌಂದರ್ಯವನ್ನು ವೃದ್ಧಿಸುವುದು ಮತ್ತು ಆಕರ್ಷಕವಾಗಿ ಕಾಣಲು ಸಹಕರಿಸುವುದು ಪೇಂಟಿಂಗ್ ಆಗಿದೆ. ವಿವಿಧ ರೀತಿಯ ಪೇಂಟಿಂಗ್ ವೈವಿಧ್ಯತೆಗಳು ಈಗಿನ ಕಾಲದಲ್ಲಿ ಹೆಚ್ಚಾಗಿ ಕಾಣುತ್ತದೆ. ಈ ಪೇಂಟಿಂಗ್ ನ ಜನರ ಆಕರ್ಷಿಕತೆಯಿಂದ ಅನೇಕ ಹೊಸ ಹೊಸ ಪೇಂಟಿಂಗ್ ಕಂಪನಿಗಳು ಆರಂಭವಾಗಿವೆ. ಪೆಂಟುಗಳನ್ನು ಸಾಮಾನ್ಯವಾಗಿ ಗೋಡೆಗಳಿಗೆ, ವುಡ್ ಗಳಿಗೆ, ಮೆಟಲ್ ಗಳಿಗೆ, ಕಬ್ಬಿಣದ ವಸ್ತುಗಳಿಗೆ ಮಾಡಲಾಗುತ್ತದೆ. ಮೆಟಲ್ ಅಥವಾ ಕಬ್ಬಿಣದ ವಸ್ತುಗಳಿಗೆ ಪೇಂಟ್ ಮಾಡುವ ಮೊದಲು ಪ್ರೈಮರ್ ಅನ್ನು ಖಂಡಿತವಾಗಿಯೂ ಹಚ್ಚಲೇಬೇಕು. ಏಕೆಂದರೆ ಇದರ ಕಬ್ಬಿಣದ ಅಥವಾ ಮೆಟಲ್ ಹಾಳಾಗದಂತೆ ತಡೆಯಲು ಮುಖ್ಯಪಾತ್ರವಹಿಸುತ್ತದೆ. ಆದ್ದರಿಂದ ನಾವು ಇಲ್ಲಿ ವಾಲ್ ಪೇಂಟಿಂಗ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪ್ರೈಮರ್ ಅನ್ನು ಎರಡು ಕೋಟಲ್ಲಿ ಬಡಿದ ನಂತರ ಪೇಂಟಿಂಗ್ ಮಾಡುವುದು ಉಪಯುಕ್ತವಾಗುತ್ತದೆ. ಇಂತಹ ವಸ್ತುಗಳಿಗೆ ಹೆಚ್ಚಾಗಿ ಆಯಿಲ್ ಪೇಂಟ್ ಅನ್ನು ಬಳಸುವುದು ಉತ್ತಮ. ಹಾಗೆಯೇ ಮರದಿಂದ ತಯಾರಿಸಿದ ವಸ್ತುಗಳಿಗೂ ಕೂಡ ಮೊದಲು ಪ್ರೈಮರನ್ನು ಹೊಡೆಯಬೇಕಾಗುತ್ತದೆ. ಅದಾದ ನಂತರ ವುಡ್ ಪೇಂಟ್ ಅನ್ನು ಹಚ್ಚುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹಾಗೆಯೇ ವಾಲ್ ಪೇಂಟಿಂಗ್ ನಲ್ಲಿ ಮೊದಲು ವೈಟ್ ಪ್ರೈಮರ್ ಅಥವಾ ಸುಣ್ಣದ ಪೇಂಟಿಂಗ್ ಮಾಡುವುದು ಉತ್ತಮ. ಏಕೆಂದರೆ ಸುಣ್ಣದ ಅಥವಾ ವೈಟ್ ಪೇಂಟಿಂಗ್ ಮಾಡುವುದರಿಂದ ವಾಲ್ ಪೇಂಟಿಂಗ್ ನಲ್ಲಿ ಬಣ್ಣಗಳ ಬಳಕೆ ಕಡಿಮೆಯಾಗುತ್ತದೆ. ಜೊತೆಗೆ ಪೇಂಟುಗಳು ಆಕರ್ಷಕವಾಗಿ ಕಾಣಲು ಸಹಕಾರಿಯಾಗುತ್ತದೆ. ಜೊತೆಗೆ ಪೇಂಟ್ ಗಳ ಕಡಿಮೆ ಬಳಕೆಗೂ ಕೂಡ ಸಹಾಯವಾಗುತ್ತದೆ .
ವಾಲ್ ಪೇಂಟಿಂಗ್ ನಲ್ಲಿ ಇಂಟೀರಿಯರ್ ವಾಲ್ ಪೇಂಟಿಂಗ್ ಮತ್ತು ಎಕ್ಸ್ಟೆರಿಯರ್ ಪೇಂಟಿಂಗ್ ಎಂಬ ಎರಡು ವಿಧಗಳಿವೆ. ಗೋಡೆಗಳಿಗೆ ಸರಿಯಾಗಿ ಪೇಂಟಿಂಗ್ ಮಾಡುವ ವಿಧಾನವೆಂದರೆ ಒಂದು ಕೋಟಿಂಗ್ ಸುಣ್ಣ, ಎರಡು ಕೋಟಿಂಗ್ ಪ್ರೈಮರ್ ಹಾಗೂ ಎರಡು ಕೋಟಿಂಗ್ ಪೇಂಟಿಂಗ್ ಮಾಡುವುದರಿಂದ ವಾಲ್ ಗಳು ಅತ್ಯಾಕರ್ಷಕವಾಗಿ ಕಾಣುತ್ತದೆ. ಜೊತೆಗೆ ಒಳ್ಳೆ ಫಿನಿಶಿಂಗ್ ಕೂಡ ದೊರೆಯುತ್ತದೆ. ವಾಲ್ ಗಳಿಗೆ ಹೊಡೆಯುವ ಪ್ರೈಮರ್ ಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ವಾಟರ್ ಬೇಸಡ್ ಪ್ರೈಮರ್ ಹಾಗೂ ಆಯಿಲ್ ಬೇಸಡ್ ಪ್ರೈಮರ್. ವಾಲ್ ಗಳಿಗೆ ಹೆಚ್ಚಾಗಿ ಆಯಿಲ್ ಬೇಸಡ್ ಪ್ರೈಮರ್ ಹೊಡೆಯುವುದು ಉತ್ತಮವಾಗಿದೆ. ಏಕೆಂದರೆ ಇದರ ಮೇಲೆ ಪುನಃ ಬೇಕಾದ ಬಣ್ಣದ ಪೇಂಟಿಂಗ್ ಗಳನ್ನು ಮಾಡಲು ಅನುಕೂಲಕರವಾಗುತ್ತದೆ.

ವಾಟರ್ ಬೇಸರ ಪ್ರೈಮರ್ ಹೊಡೆಯುವುದರಿಂದ ಪುನಃ ಬೇರೆ ಪೇಂಟಿಂಗ್ ಮಾಡಲು ಕಷ್ಟವಾಗುತ್ತದೆ. ವಾಟರ್ ಬೇಸಡ್ ಪೇಂಟ್ ಗಳಿಗೆ ನೀರಿನ ಮಿಕ್ಸ್ ಮಾಡಿದರೆ ಆಯಿಲ್ ಬೇಸಡ್ ಪೇಂಟ್ ಗಳಿಗೆ ತಿನ್ನರ್ ಗಳನ್ನು ಮಿಕ್ಸ್ ಮಾಡಲಾಗುತ್ತದೆ. ವಾಟರ್ ಬೆಸ್ಟ್ ಪೇಂಟ್ ಗಳಿಗೆ ನೀರಿನ ಮಿಕ್ಸ್ ಮಾಡುವ ರೀತಿ ಎಂದರೆ 200ಎಂ.ಏಲ್. ಪೇಂಟ್ ಗೆ ಒಂದು ಲೀಟರ್ ನೀರನ್ನು ಮಿಕ್ಸ್ ಮಾಡಿ ಪೇಂಟಿಂಗ್ ಮಾಡಬೇಕು. ಎರಡು ತಾಸುಗಳಲ್ಲಿ ಪೇಯಿಂಟ್ ಗಳು ಡ್ರೈಯಾಗುತ್ತದೆ. ಇದೇ ತರಹ ಎರಡು ಕೋಟಿಂಗ್ ನಲ್ಲಿ ಪೇಂಟ್ ಮಾಡಬೇಕಾಗುತ್ತದೆ. ಇದಾದ ನಂತರ ಗೋಡೆಗಳ ಮೇಲೆ ನಮಗೆ ಬೇಕಾದ ಚಿತ್ರ ತರಹದ ಪೇಂಟಿಂಗ್ ಗಳನ್ನು ಕೂಡ ಮಾಡಿಕೊಳ್ಳಬಹುದು. ಆ ಚಿತ್ರಗಳಿಗೆ ತರತರಹದ ಬಣ್ಣವನ್ನು ತುಂಬಿ ಅಲಂಕಾರಿಕವಾಗಿ ಗೋಡೆಗಳು ಕಾಣುವಂತೆ ಮಾಡಬಹುದಾಗಿದೆ. ಹೀಗೆ ನಮ್ಮ ಅನುಕೂಲಗಳಿಗೆ ನಮ್ಮ ಆಶೋಭಿಲಾಷೆಗಳಿಕೆಗೆ ತಕ್ಕಂತೆ ಪೇಂಟಿಂಗ್ ಗಳನ್ನು ಮಾಡಿಕೊಳ್ಳಬಹುದಾಗಿದೆ.
