ಸೊಳ್ಳೆಗಳಿಂದ ಬರುವ ರೋಗಕ್ಕೆ ಮನೆಮದ್ದು

ಇಂದಿನ ದಿನಮಾನಗಳಲ್ಲಿ ಪರಿಸರದಲ್ಲಿನ ಹಲವಾರು ಬದಲಾವಣೆಗಳಿಂದ ಹೊಸ ಹೊಸ ಖಾಯಿಲೆಗಳು ಹುಟ್ಟಿಗೊಳ್ಳುತ್ತಿವೆ. ಪ್ರಾಣಿ, ಪಕ್ಷಿ,, ಕೀಟಗಳಿಂದ ಬರುವ ವಿಷಕಾರಿ ವೈರಸ್ ಗಳಿಂದ ಮನುಷ್ಯರ ಮೇಲೆ ವಿವಿಧ ಖಾಯಿಲೆಗಳು ಅಪ್ಪಳಿಸುತ್ತಿವೆ. ಸೊಳ್ಳೆಯಂತಹ ಸಣ್ಣ ಕ್ರಿಮಿಕೀಟದಿಂದ ಬರುವ ಮಲೇರಿಯಾ, ಡೆಂಗ್ಯೂ ಖಾಯಿಲೆಗಳು ಮನುಷ್ಯನನ್ನು ಅನಾರೋಗ್ಯದಿಂದ ನರಳುವಂತೆ ಮಾಡುತ್ತಿವೆ.

ಸೊಳ್ಳೆಯಂತಹ ಕ್ರಿಮಿಕೀಟದಿಂದ ಮನುಷ್ಯನಿಗೆ ಸಮಸ್ಯೆತಪ್ಪಿದ್ದಲ್ಲ. ಸೊಳ್ಳೆಯಿಂದ ಉಂಟಾಗುವ ಕೀಲುನೋವು ಸಮಸ್ಯೆ ಮೂಳೆಯನ್ನು ವಿಪರೀತ ನೋವಿಗಿಡು ಮಾಡುತ್ತದೆ. ಈ ಸಮಸ್ಯೆ ಉಲ್ಬಣವಾಗುವ ಮುನ್ನ ಈ ಮನೆ ಮದ್ದು ಬಳಸಿ ಪರಿಹಾರ ಕಂಡುಕೊಳ್ಳಿ .

ಪಾರಿಜಾತ ಎಲೆಗಳ ಕಷಾಯ: ಪಾರಿಜಾತ ಎಲೆಗಳು ಅನೇಕ ಪೋಷಕಾಂಶ ಹೊಂದಿದ್ದು ಮನುಷ್ಯನ ದೇಹದಲ್ಲಿನ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಸಹಾಯಕವಾಗುತ್ತದೆ. ದೈವಿಕ ಗುಣ ಹೊಂದಿರುವ ಪಾರಿಜಾತ ಗಿಡಗಳು ಅನೇಕ ರೀತಿಯಾದ ಆರ್ಯುವೇದಿಕ್ ಔಷಧಿಗಳಿಗೆ ಬಳಸಲಾಗುತ್ತದೆ. ಪಾರಿಜಾತ ಎಲೆಗಳ ಕಶಾಯವನ್ನು ಹೀಗೆ ಮಾಡಿ ಕುಡಿಯಿರಿ.

ಪಾರಿಜಾತದ 20 ಎಲೆಗಳನ್ನು ಎರಡು ಲೋಟದ ನೀರಿನೊಂದಿಗೆ ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ,ನಂತರ ಸೋಸಿದ ಮೇಲೆ ಬಂದ ರಸದಲ್ಲಿ ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಸೇವಿಸಿ.ಈ ರೀತಿ ಒಂದು ತಿಂಗಳವರೆಗೆ ಕಶಾಯ ಸೇವನೆ ಮಾಡಿದರೆ ಮಂಡಿನೋವು, ಕೀಲುನೋವಿನಂತಹ ಸಮಸ್ಯೆಗಳು ನಿವಾರಣೆ ಯಾಗುತ್ತದೆ.

Leave a Comment

error: Content is protected !!