ಮನೆಯಲ್ಲಿಯೇ ಸುಲಭವಾಗಿ ಕಡಿಮೆ ವಸ್ತುಗಳನ್ನು ಬಳಸಿಕೊಂಡು ಎರಡು ರೀತಿಯಲಿ ಜಿಲೇಬಿ ಹೇಗೆ ಮಾಡೋದು ಅಂತ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು: ಮೊದಲು ಸಕ್ಕರೆ ಪಾಕಕ್ಕೆ ಸಕ್ಕರೆ 1ವರೆ ಕಪ್, ಮೈದಾ ಹಿಟ್ಟು 1 ಕಪ್, ಕಾಲು, ಕಪ್ ಮೊಸರು, ಸೋಡಾ, ಕೇಸರಿ ಕಲರ್, ಎಣ್ಣೆ

ಮಾಡುವ ವಿಧಾನ:- ಮೊದಲು ಸಕ್ಕರೆ ಪಾಕಕ್ಕೆ ಸಕ್ಕರೆ 1ವರೆ ಕಪ್ ಅಷ್ಟು ಸಕ್ಕರೆಗೆ ಒಂದು ಕಪ್ ನೀರು ಹಾಕಿ ಸ್ಟೌ ಮೇಲೆ ಇಟ್ಟು ಪಾಕಕ್ಕೆ ಇಟ್ಟುಕೊಳ್ಳಬೇಕು. ಅರ್ಧದಷ್ಟು ಒಆಕ ರೆಡಿ ಆದಮೇಲೆ ಒಂದು ಸ್ಪೂನ್ ಅಷ್ಟು ನಿಂಬೆ ರಸವನ್ನ ಹಾಕಿ ಮಧ್ಯಮ ಉರಿಯಲ್ಲಿ ಒಂದು ಎಳೆ ಪಾಕ ಮಾಡಿಕೊಂಡು ಸೈಡ್ ಅಲ್ಲಿ ಇಟ್ಟುಕೊಳ್ಳಬೇಕು.

ಜಿಲೇಬಿ ಹಿಟ್ಟಿಗೆ ಒಂದು ಬೌಲ್ ನಲ್ಲಿ ಒಂದು ಕಪ್ ಮೈದಾ ಹಿಟ್ಟು, ಕಾಲು ಕಪ್ ಮೊಸರು , ಕಾಲು ಸ್ಪೂನ್ ಸೋಡಾ ಸೇರಿಸಿ ಮಿಕ್ಸ್ ಮಾಡಿಕೊಮ್ದು ಸ್ವಲ್ಪ ಸ್ವಲ್ಪ ನೀರಿ ಸೇರಿಸ್8 ಹಿಟ್ಟಣ್ಣ ರೆಡಿ ಮಾಡಿಕೊಳ್ಳಬೇಕು. ಒಂದು ಕಪ್ ಮೈದಾ ಹಿಟ್ಟಿಗೆ ಒಂದು ಕಪ್ ನೀರು ಹಿಡಿಯತ್ತೆ ಸ್ವಲ್ಪ ಸ್ವಲ್ಪ ವಾಗಿ ಹಾಕಿಕೊಳ್ಳಬೇಕು. ನಂತರ ಚಿಟಿಕೆ ಅಷ್ಟು ಅದಕ್ಕೆ ಕೇಸರಿ ಕಲರ್ ಸೇರಿಸಿ ಮತ್ತೇ ಮಿಕ್ಸ್ ಮಾಡಿ ಹಿಟ್ಟು ರೆಡಿ ಆಗತ್ತೆ.

ನಂತರ ಎಣ್ಣೆ ಬಿಸಿಗೆ ಇಟ್ಟುಕೊಂಡು ಸಾಸ್ ಬಾಟಲ್ ನಲ್ಲಿ ಅಥವಾ ಸಾಸ್ ಬಾಟಲ್ ಇಲ್ಲ ಅಂದ್ರೆ ಹಾಲಿನ ಪ್ಯಾಕೆಟ್ ಅಥವಾ ಯಾವುದೇ ಪ್ಲಾಸ್ಟಿಕ್ ಕವರ್ ಇಂದ ಕೂಡ ಮಾಡಬಹುದು. ಅದರೊಳಗೆ ಜಿಲೇಬಿ ಹಿಟ್ಟನ್ನ ತುಂಬಿಕೊಂಡು ಸಣ್ಣದಾಗಿ ಕವರ್ ನ ಒಂದು ತುದಿಗೆ ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು. ನಂತರ ಎಣ್ಣೆ ಕಾದ ಮೇಲೆ ಅದಕ್ಕೆ ಎರಡು ಸ್ಪೂನ್ ತುಪ್ಪ ಹಾಕಿ ಜಿಲೇಬಿ ಯಾವ ಗಾತ್ರಕ್ಕೆ ಬೇಕೋ ನೋಡಿಕೊಂಡು ಬಾಟಲ್ / ಕವರ್ ಯಾವುದರ ಸಹಾಯದಿಂದಲೂ ಬಿಟ್ಟುಕೊಂಡು ಎರಡೂ ಕಡೆ ಸರಿಯಾಗಿ ಬೇಯಿಸಿಕೊಂಡು ಬೆಂದ ನಂತರ ಬಿಸಿ ಇರುವ ಪಾಕಕ್ಕೆ ತಕ್ಷಣವೇ ಹಾಕಿ ಒಂದೆರಡು ನಿಮಿಷ ನೆನೆಯಲು ಬಿಡಬೇಕು. ನಂತರ ಅದನ್ನ ತೆಗೆದು ಒಂದು ತಟ್ಟೆಗೆ ಹಾಕಿಕೊಂಡರೆ ಜಿಲೇಬಿ ರೆಡಿ.

By admin

Leave a Reply

Your email address will not be published.