ನಿಮ್ಮ ತಲೆಕೂದಲು ಉದ್ದವಾಗಿ ಬೆಳೆಯಬೇಕಾ?

ಇತ್ತೀಚಿನ ಮಹಿಳೆಯರ ಸಮಸ್ಯೆಗಳಲ್ಲಿ ಒಂದು ಪ್ರಮುಖ ಸಮಸ್ಯೆಯೆಂದರೆ ತಲೆ ಕೂದಲು ಉದುರುವುದು. ಈ ಸಮಸ್ಯೆಯನ್ನು ಬಹಳಷ್ಟು ಮಹಿಳೆಯರು ಎದುರಿಸುತ್ತಿದ್ದಾರೆ ಆದರೆ ಕೇರಳದಲ್ಲಿ ಮಹಿಳೆಯರ ತಲೆ ಕೂದಲು ಉದ್ದವಾಗಿ, ದಟ್ಟವಾಗಿ, ಶೈನ್ ಆಗಿ ಬೆಳೆದಿರುತ್ತದೆ ಇದಕ್ಕೆ ಕಾರಣ ಅವರು ಬಳಸುವ ಶಾಂಪೂ ಹಾಗಾದರೆ ಈ ಶಾಂಪೂವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ತಯಾರಿಸುವ ವಿಧಾನ ಹಾಗೂ ಅದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೇರಳದ ಮಹಿಳೆಯರ ತಲೆ ಕೂದಲು ಉದ್ದವಾಗಿ, ಆರೋಗ್ಯವಾಗಿ ಇರುತ್ತದೆ. ಅಲ್ಲಿಯ ಮಹಿಳೆಯರು ಒಂದು ರೀತಿಯ ಶಾಂಪೂವನ್ನು ಬಳಸುತ್ತಾರೆ ಅದನ್ನು ಅವರು ಥಾಲಿ ಎಂದು ಕರೆಯುತ್ತಾರೆ. ಇದನ್ನು ತಲೆ ಸ್ನಾನ ಮಾಡುವಾಗ ಬಳಸುತ್ತಾರೆ, ಕೇರಳದಲ್ಲಿ ಪ್ರತಿದಿನ ತಲೆ ಸ್ನಾನ ಮಾಡುತ್ತಾರೆ. ಈ ಥಾಲಿ ಬಹಳ ತಂಪು, ಕೋಲ್ಡ್ ಪ್ರಕೃತಿ ಇರುವವರು ಇದನ್ನು ಬಳಸಬಾರದು. ಅಧಿಕ ಉಷ್ಣಾಂಶ ಇರುವವರು ಈ ಥಾಲಿಯನ್ನು ಬಳಸುವುದರಿಂದ ತಂಪಾಗುತ್ತದೆ. ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಥಾಲಿಯನ್ನು ತಯಾರಿಸಬಹುದು. ಥಾಲಿ ಮಾಡಲು ಬೇಕಾಗುವ ಸಾಮಗ್ರಿಗಳು ಮೆಂತೆ, ದಾಸವಾಳ ಎಲೆ ಮತ್ತು ಹೂವು, ತುಳಸಿ ಎಲೆಗಳು. ಮಾಡುವ ವಿಧಾನವೆಂದರೆ ಹಿಂದಿನ ದಿನ ರಾತ್ರಿ ಎರಡು ಸ್ಪೂನ್ ಮೆಂತೆಯನ್ನು ನೀರಿನಲ್ಲಿ ನೆನೆಸಬೇಕು, ಬೆಳಗ್ಗೆ ಈ ಮೆಂತೆಗೆ 6-7 ಕೆಂಪು ಅಥವಾ ಬಿಳಿ ದಾಸವಾಳ ಹೂವು ಇಲ್ಲವೆ ದಾಸವಾಳ ಎಲೆಗಳನ್ನು ಅಥವಾ ಸ್ವಲ್ಪ ಹೂವು ಮತ್ತು ಸ್ವಲ್ಪ ಎಲೆಗಳನ್ನು, ಒಂದು ಮುಷ್ಟಿ ತುಳಸಿ ಎಲೆಗಳನ್ನು ಹಾಕಿ ಅದಕ್ಕೆ ನೀರನ್ನು ಹಾಕಿ ಮಿಕ್ಸಿಗೆ ಹಾಕಿ ರುಬ್ಬಬೇಕು ಆಗ ಥಿಕ್ ಆಗಿ ಲೋಳೆ ಲೋಳೆಯ ಶಾಂಪೂ ಸಿದ್ಧವಾಗುತ್ತದೆ. ಈ ಮಿಶ್ರಣವನ್ನು ತಲೆಗೆ ಸರಿಯಾಗಿ ಹಚ್ಚಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಬೇಕು. ತಲೆ ಸ್ನಾನ ಮಾಡುವಾಗ ಶೀಗೆ ಕಾಯಿಯನ್ನು ಬಳಸಬಹುದು ಕೇರಳದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದಿಲ್ಲ ತಣ್ಣೀರಿನಿಂದ ತಲೆ ಸ್ನಾನ ಮಾಡುತ್ತಾರೆ. ಬಹಳ ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ ಕೂದಲು ಉದುರುತ್ತದೆ.

ಈ ಶಾಂಪೂವನ್ನು ಪುರುಷರು ಸಹ ಬಳಸಬಹುದು. ಈ ಶಾಂಪೂವನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ ಕೂದಲು ಉದುರುವುದಿಲ್ಲ, ತಲೆಯಲ್ಲಿ ಹೊಟ್ಟು ಇದ್ದರೆ ಅದು ನಿವಾರಣೆಯಾಗುತ್ತದೆ ಮತ್ತು ಕೂದಲು ಶೈನ್ ಆಗುತ್ತದೆ. ತಲೆ ತಂಪಾಗುತ್ತದೆ ಟೆನ್ಷನ್, ಸ್ಟ್ರೆಸ್ ಆಗಿದ್ದರೆ ಅದು ನಿವಾರಣೆಯಾಗುತ್ತದೆ. ಈ ಶಾಂಪೂವಿನಲ್ಲಿ ಯಾವುದೇ ಕೆಮಿಕಲ್ಸ್ ಹಾಕಿರುವುದಿಲ್ಲ ಆದ್ದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಈ ಶಾಂಪೂ ತಯಾರಿಸಲು ಹಣ ಖರ್ಚು ಮಾಡಬೇಕಾಗಿಲ್ಲ. ಕೂದಲಿನ ಆರೋಗ್ಯವನ್ನು ಕಾಪಾಡಲು ಆಹಾರ ಶೈಲಿಯು ಪ್ರಮುಖ ಪಾತ್ರವಹಿಸುತ್ತದೆ. ಕೇರಳದಲ್ಲಿ ಕೋಕೋನಟ್ ಆಯಿಲ್ ಅನ್ನು ಅಡುಗೆಗೆ ಬಳಸುತ್ತಾರೆ ಕೋಕೋನಟ್ ಆಯಿಲ್ ಕೂದಲಿನ ಆರೋಗ್ಯಕ್ಕೆ ಉತ್ತಮ. ಅದರೊಂದಿಗೆ ಹಣ್ಣುಹಂಪಲುಗಳನ್ನು ಹೆಚ್ಚು ಸೇವಿಸಬೇಕು, ಹೆಚ್ಚು ನೀರನ್ನು ಕುಡಿಯಬೇಕು. ಒಳ್ಳೆಯ ಫ್ಯಾಟ್ ಅಂದರೆ ಮೊಸರು, ಮಜ್ಜಿಗೆ, ತುಪ್ಪ, ಗೋಡಂಬಿ, ಪಿಸ್ತಾ, ಬಾದಾಮಿ, ಡ್ರೈ ಫ್ರೂಟ್ಸ್ ಅನ್ನು ಸೇವಿಸಬೇಕು. ಅಲ್ಲದೆ ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸಬೇಕು. ಪ್ರೊಟೀನ್ ಪುಡಿ, ಹಾಲು, ಹಣ್ಣು, ಪೀನಟ್ ಬಟರ್, ಬಾದಾಮಿ ಬೇಕಾದರೆ ಜೋನಿಬೆಲ್ಲ ಇವುಗಳಿಗೆ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡರೆ ಪ್ರೊಟೀನ್ ಶೇಕ್ ಸಿದ್ಧವಾಗುತ್ತದೆ ಇದನ್ನು ಪ್ರತಿದಿನ ಎರಡು ಹೊತ್ತು ಕುಡಿಯುತ್ತಾ ಬಂದರೆ ಕೂದಲು ಆರೋಗ್ಯವಾಗಿರುತ್ತದೆ. ಕೆಲವರಿಗೆ ಪೋಷಕಾಂಶದ ಕೊರತೆಯಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ ಆದ್ದರಿಂದ ಪೋಷಕಾಂಶಯುಕ್ತ ಔಷಧಿ, ಆಹಾರವನ್ನು ತೆಗೆದುಕೊಳ್ಳಬೇಕು ಇದರಿಂದ ಕೂದಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ‌ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

Leave a Comment

error: Content is protected !!