ಮೈದಾ, ಮೊಟ್ಟೆ, ಸಕ್ಕರೆ ಹಾಗೂ ಓವೆನ್ ಇಲ್ಲದೇನೆ ಹಬೆಯಲ್ಲಿ ಚಾಕಲೇಟ್ ಕೇಕ್ ಮಾಡೋದು ಹೇಗೆ ಅಂತ ನೋಡೋಣ. ಓವೆನ್ ಇಲ್ದೆ ಕೇಕ್ ಬೆಯಸೋಕೆ ಮರಳು ಉಪ್ಪು ಬಳಸೋದು ಅಳತೆ ಗೊತ್ತಾಗಲ್ಲ ಇದಕ್ಕೆ. ಇಡ್ಲಿ ತರ ನೀರು ಇಟ್ಟು ನೀರಲ್ಲಿ ಕೇಕ್ ಮಿಕ್ಸ್ ಇಟ್ಟು ಬೇಯಿಸಬೇಕು ಕೇಕ್ ರೆಡಿ ಆಗತ್ತೆ. ಹಾಗಾದ್ರೆ ಈ ಕೇಕ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

ಮೊದಲು ಒಂದು ಬೌಲ್ ಗೆ ಒಂದು ಲೋಟ ಅಳತೆಗೆ ಇಟ್ಟುಕೊಂಡು ಆ ಲೋಟದಲ್ಲಿ ಕಾಲು ಲೋಟ ಮೊಸರು, ಅದೇ ಲೋಟದ ಅಳತೆಯಲ್ಲಿ ಕುಟ್ಟಿ ಪುಡಿ ಮಾಡಿದ ಬೆಲ್ಲ ಅರ್ಧ ಲೋಟ ಹಾಕಿ ಬೆಲ್ಲ ಮೊಸರಲ್ಲಿ ಕರಗುವವರೆಗು ಚೆನ್ನಾಗಿ ಮಿಕ್ಸ್ ಮಾಡಬೇಕು. ಬೆಲ್ಲ ಕರಗಿದ ನಂತರ ಮೊಸರಿನ ಅಳತೆಯಷ್ಟೇ ಅಂದರೇ, ಕಾಲು ಲೋಟ ಅಡುಗೆ ಎಣ್ಣೆ ಹಾಕಿ ಮತ್ತೆ ಒಂದು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಬೇಕು‌ . ನಂತರ ಒಂದು ಲೋಟ ಗೋಧಿ ಹಿಟ್ಟು ಹಾಕಬೇಕು. ಅದಕ್ಕೇ ಕಾಲು ಚಮಚ ಬೇಕಿಂಗ್ ಸೋಡಾ ಹಾಗೂ ಒಂದು ಚಮಚ ಬೇಕಿಂಗ್ ಪೌಡರ್ ಹಾಕಿಕೊಂಡು ಅದಕ್ಕೆ ಎರಡು ಚಮಚ ಕೊಕೋ ಪೌಡರ್ ಸೇರಿಸಿ ಮಿಕ್ಸ್ ಮಾಡುತ್ತಾ ಅದಕ್ಕೆ ಕಾಲು ಕಪ್ ತಣ್ಣನೆಯ ಹಾಲನ್ನು ಸ್ವಲ್ಪ ಸ್ವಲ್ಪ ಆಗಿ ಸೇರಿಸಿ, ಮಿಕ್ಸ್ ಮಾಡಿ ಗಟ್ಟಿ ಆದ್ರೆ ಮತ್ತು ಸ್ವಲ್ಪ ಹಾಲನ್ನು ಸೇರಿಸಿಕೊಳ್ಳಬಹುದು. ಹಾಗೇ ಮಿಕ್ಸ್ ಮಾಡಿ ಹಿಟ್ಟು ರೆಡಿ ಮಾಡಿಟ್ಟುಕೊಳ್ಳಬೇಕು.

ನಂತರ ಒಂದು ಸ್ಟೀಲ್ ಪಾತ್ರೆಗೆ ಅರ್ಧ ಲೀಟರ್ ನೀರು ಹಾಕಿ ಒಂದು ಸ್ಟಾಂಡ್ ಇಟ್ಟು ಮುಚ್ಚಳ ಮುಚ್ಚಿ ೧೦ನಿಮಿಷ ಕುದಿಯಲು ಬಿಡಬೇಕು. ನಂತರ ಬೇರೆ ಯಾವುದೇ ಒಂದು ಚೆನ್ನಾಗಿ ಎಣ್ಣೆ ಸವರಿದ ಪಾತ್ರೆಗೆ ಸ್ವಲ್ಪ ಒಣ ಗೋಧಿ ಹಿಟ್ಟನ್ನು ಉದುರಿಸಿ, ಕೇಕ್ ಹಿಟ್ಟನ್ನ ಹಾಕಿ ಒಂದೆರಡು ಬಾರಿ ಪಾತ್ರೆಯನ್ನ ಕುಟ್ಟಿ ಹಾಟ್ಟೆಲ್ಲಾ ಸರಿ ಆಗುವಂತೇ ಮಾಡಿ ಮೇಲಿಂದ ಕಟ್ ಮಾಡಿದ ಯಾವುದೇ ಡ್ರೈ ಫ್ರೂಟ್ಸ್ ಹಾಕಿ ಒಂದು ಪ್ಲೇಟ್ ಮುಚ್ಚಿ, ಕುದಿಯುತ್ತಾ ಇರುವ ನೀರಿನ ಪಾತ್ರೆಯಲ್ಲಿ ಇಟ್ಟು ಅದಕ್ಕೆ ಇನ್ನೋಂದು ಮುಚ್ಚಳ ಮುಚ್ಚಿ ಅರ್ಧ ಗಂಟೆ ಸಣ್ಣ ಉರಿಯಲ್ಲಿ ಬೇಯಿಸಬೇಕು. ಅರ್ಧ ಗಂಟೆಯ ನಂತರ ಒಮ್ಮೆ ಬೆಂದಿದೆಯೋ ಇಲ್ವೋ ಅಂತ ಒಂದು ಸ್ಪೂನ ಚುಚ್ಚಿ ಚೆಕ್ ಮಾಡಿ, ಬೇಯದೇ ಇದ್ರೆ ಮತ್ತೆ ಸ್ವಲ್ಪ ಸಮಯ ಬೇಯಿಸಬೇಕು. ಬೆಂದ ನಂತರ ಅರ್ಧ ಗಂಟೆ ತಣಿಯಲು ಬಿಟ್ಟು ನಂತರ ಒಂದು ಚಾಕುವಿನಿಂದ ಸೈಡ್ ಎಲ್ಲಾ ಬಿಡಿಸಿಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಬೇಕು.

ನಂತರ ಡೆಕೊರೇಶನ್ ಗೆ ಡೈರಿ ಮಿಲ್ಕ್ ಚಾಕಲೇಟನ್ನೇ ಕರಗಿಸಿ, ಸಿರಪ್ ಮಾಡಿಕೊಂಡು ಅದನ್ನ ಕೇಕ್ ಮೇಲೆ ಹಾಕಬೇಕು. ಅದರ ಮೇಲಿಂದ ತುರಿದ ಚಾಕಲೇಟನ್ನ ಹಾಕಬೇಕು.ಹೀಗೆ ಸುಲಭವಾಗಿ ಮನೆಯಲ್ಲಿನ ಪದಾರ್ಥಗಳನ್ನ ಬಳಸಿಕೊಂಡು ಒವೆನ್, ಮೈದಾ, ಮೊಟ್ಟೆ ಹಾಗೂ ಸಕ್ಕರೆ ಇಲ್ಲದೇ ಆರೋಗ್ಯಕರವಾದ ಕೇಕ್ ಮಾಡಬಹುದು. ಇದು ಮಕ್ಕಳಿಗೂ ಕೂಡಾ ಎಷ್ಟು ಬೇಕಾದರೂ ಕೊಡಬಹುದು ಆರೋಗ್ಯಕ್ಕೆ ಕೂಡಾ ಒಳ್ಳೆಯದು

By admin

Leave a Reply

Your email address will not be published.