ತರಕಾರಿಗಳನ್ನು ಅಂದರೆ ಟೊಮೆಟೊ, ಮೂಲಂಗಿ, ಹೀರೆಕಾಯಿ, ಗಜ್ಜರಿ ಮುಂತಾದ ತರಕಾರಿಗಳನ್ನು ನಾವು ದಿನನಿತ್ಯ ಆಹಾರದಲ್ಲಿ ಬಳಸುತ್ತೇವೆ.ಇವು ತುಂಬಾ ಪೋಷಕಾಂಶಗಳಿಂದ ಕೂಡಿರುತ್ತದೆ. ಕೆಲವೊಬ್ಬರು ತರಕಾರಿಗಳನ್ನು ತಿನ್ನೋದಿಲ್ಲ ಇದರಿಂದ ಅವರ ಆರೋಗ್ಯ ಅವರೇ ಹಾಳುಮಾಡಿಕೊಳ್ಳುತ್ತಾರೆ. ಹೀರೆಕಾಯಿಯು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಇದು ನಾರಿನಾಂಶ, ವಿಟಮಿನ್ ಈ, ವಿಟಮಿನ್ ಸಿ,ಕ್ಯಾಲ್ಸಿಯಂ, ಕಬ್ಬಿಣ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ.

ಇದರ ಸೇವನೆಯಿಂದ ಆರೋಗ್ಯಕರ ಲಾಭಗಳಿವೆ.
ಇದರ ನಿರಂತರ ಸೇವನೆ ಮಧುಮೇಹಿಗಳಿಗೆ ಸಹಕಾರಿ. ಇದು ದಿನವಿಡೀ ಉತ್ಸಾಹದಿಂದ ಇರುವಂತೆ ಮನಸ್ಸನ್ನು ಚಂಚಲಗೊಳಿಸದಂತೆ ನೋಡಿಕೊಳ್ಳುತ್ತದೆ. ಮಲಭದ್ಧತೆ ನಿವಾರಣೆಗೆ ಇದು ಸಹಕರಿಸುತ್ತದೆ.

ಹೀರೆಕಾಯಿಯನ್ನು ಬೇಯಿಸಿ ಹಾಲು ಅಥವಾ ನೀರಿನಲ್ಲಿ ಸೇವಿಸುವುದರಿಂದ ಕಿಡ್ನಿಯಲ್ಲಿನ
ಕಲ್ಲು ಕರಗುತ್ತೆ. ಹಾಗೆಯೇ ದೇಹವನ್ನು ತಂಪಾಗಿಡುತ್ತದೆ. ಆದ್ದರಿಂದ ಅತ್ಯುತ್ತಮ ತರಕಾರಿಗಳಲ್ಲಿ ಹೀರೆಕಾಯಿ ಒಂದು.

ಗ್ಯಾಸ್ಟ್ರಿಕ್ ಗೆ ಇದು ಒಳ್ಳೆಯ ಔಷಧಿಯಾಗಿದೆ. ರಕ್ತವನ್ನು ಶುದ್ಧೀಕರಣ ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಹೋಗಲಾಡಿಸಿ ರಕ್ತ ಸಂಚಲನವನ್ನು ಉಂಟುಮಾಡುತ್ತದೆ. ಅನಗತ್ಯ ತೂಕ ಕಳೆದುಕೊಳ್ಳಲು ಇದು ಪ್ರಯೋಜನವಾಗಿದೆ. ಇನ್ನು ಚರ್ಮದ ಆರೋಗ್ಯಕ್ಕೆ ಇದು ಸಹಕಾರಿ. ಆದ್ದರಿಂದ ಹೀರೆಕಾಯಿ ಪ್ರಯೋಜನ ಬಹಳ. ಇದನ್ನು ಸೇವಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

By admin

Leave a Reply

Your email address will not be published.