ಮನೆಯಲ್ಲಿ ಮುತ್ತೈದೆಯರು ಇಂತಹ ತಪ್ಪು ಮಾಡಿದರೆ ಏನಾಗುತ್ತೆ ಗೊತ್ತೇ
ಮುತ್ತೈದೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬಾರದು. ಮನೆಯಲ್ಲಿನ ಆಚಾರ ವಿಚಾರಗಳು ಗೊತ್ತಿದ್ದು ಗೊತ್ತಲ್ಲದೆನೇ ಇಂತಹ ತಪ್ಪುಗಳು ನಡೆಯುತ್ತವೆ. ಈ ತಪ್ಪುಗಳನ್ನು ಮಾಡೋದರಿಂದ ಮಹಾಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸೋದಿಲ್ಲ. ನಿಮ್ಮಲ್ಲಿನ ಕಷ್ಟಗಳು ಪರಿಹರಆಗೋದಿಲ್ಲ. ಮನೆಯಲ್ಲಿ ಸುಖಶಾಂತಿ ನೆಲಸಬೇಕು ಅಂದ್ರೆ ಈ ತಪ್ಪುಗಳನ್ನ ಮಾಡಬೇಡಿ. ಸ್ರೀ ಎಂದರೆ ದೇವರ ಸ್ವರೂಪ ಹಾಗಾಗಿ ಮನೆಯಲ್ಲಿನ ಮುತ್ತೈದೆಯರು ಲವಲವಿಕೆಯಿಂದ ಮನೆಯಲ್ಲಿ ಓಡೋಡಿಕೊಂಡ ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಬೇಕು.
ಮಹಿಳೆಯರು ಯಾವ ತಪ್ಪುಗಳನ್ನ ಮಾಡಬಾರದೆಂದರೆ: ಸಂಜೆ ವೇಳೆಗೆ ಬಟ್ಟೆಗಳನ್ನ ಒಗೆಯಬಾರದು. ಸಂಜೆ ವೇಳೆಯಲ್ಲಿ ಮಹಾಲಕ್ಷ್ಮೀಯ ಪ್ರವೇಶದ ಕಾಲವಾದ್ದರಿಂದ. ಆ ಸಮಯದಲ್ಲಿ ಬಟ್ಟೆ ಒಗೆಯುವುದು ಸೂಕ್ತವಲ್ಲ.ಮಹಿಳೆಯರು ಉದ್ದವಾಗಿ ಉಗುರಗಳನ್ನ ಬೆಳೆಸಬಾರದು. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದಲ್ಲದೆ, ಇದರಿಂದ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ. ಹಾಗೇ ಹಾಣಕಾಸಿನ ಸಮಸ್ಯೆ ಉದ್ಭವವಾಗುತ್ತದೆ.
ಮಹಿಳೆಯರು ಹೆಚ್ಚು ಹೊತ್ತು ನಿದ್ರಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಯಶಸ್ಸು ಲಭಿಸುವುದಿಲ್ಲ. ಮಂಗಳವಾರ ಹಾಗೂ ಶುಕ್ರವಾರದ ದಿನ ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರನ್ನ ಹಾಕಬಾರದು.ಕೆಲವರು ಜೀವನದಲ್ಲಿ ಮಾನಸಿಕವಾಗಿ ನೊಂದು ಯಾವಾಗಲೂ ಕಣ್ಣೀರನ್ನ ಹಾಕುತ್ತಾರೆ. ಇದು ಮನೆಗೆ ಶ್ರೇಯಸ್ಸಲ್ಲ.
ಆರ್ಟಿಫಿಶಲ್ ಹೂವುಗಳನ್ನು ಪೂಜೆಗೆ ಬಳಸಬಾರದು. ತಪ್ಪದೇ ನಿಮ್ಮ ಮನೆಯ ಅಂಗಳದಲ್ಲಿ ರಂಗೋಲಿಯನ್ನ ಹಾಕಿ. ಎಷ್ಟೋ ಜನರ ಮನೆಯಲ್ಲಿ ತುಳಸಿ ಪೂಜೆಯನ್ನ ಮಾಡೋದಿಲ್ಲ. ತಪ್ಪದೇ ಮುತ್ತೈದೆಯರು ತುಳಸಿ ಪೂಜೆಯನ್ನ ಮಾಡಬೇಕು.

ಹೆಣ್ಣು ಮಕ್ಕಳು ಕೂದಲನ್ನು ಕಟ್ಟದೇ ಪೂಜೆಯನ್ನ ಮಾಡಬಾರದು. ಇದರಿಂದ ಪೂಜೆಯ ಫಲ ಸಿಗೋದಿಲ್ಲ.ಹಾಗಾಗಿ ಮಡಿಯಿಂದ ಪೂಜೆ ಮಾಡಬೇಕು.ಯಾವುದೇ ಶುಭ ಸಮಾರಂಭಗಳಿಗೆ ಹೋಗುವಾಗ ಅಥವಾ ಮನೆಯಲ್ಲಿ ಇರುವಾಗ ಮುತ್ತೈದೆಯರು ಕುಂಕುಮವನ್ನ ಹಣೆಯ ಮೇಲೆ ಹಚ್ಚಿಕೊಳ್ಳಬೇಕು. ಇಲ್ಲವಾದಲ್ಲಿ ನಿಮಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಎಲ್ಲಾ ತಪ್ಪುಗಳನ್ನ ಮಾಡದೇ ಮುತ್ತೈದೆಯರು ಲಕ್ಷ್ಮೀಯನ್ನ ನಿಮ್ಮ ಮನೆಗೆ ಆಹ್ವಾನಿಸಿಕೊಳ್ಳಿ.