ಹೃದಯಾಘಾತಕ್ಕೆ ಕಾರಣ ಮತ್ತು ಅದರ ಲಕ್ಷಣಗಳಿವು


ಒಬ್ಬ ಮನುಷ್ಯನ ಹೃದಯ ದಿನಕ್ಕೆ 1,15,000 ಬಾರಿ ಬಡಿದುಕೊಳ್ಳುತ್ತದೆ ಹಾಗೇ ದಿನಕ್ಕೆ 7,600 ಲೀಟರ್ ಅಷ್ಟು ರಕ್ತವನ್ನು ಪಂಪ್ ಮಾಡುತ್ತದೆ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಬಳಸುವ ಪಂಪ್ ಅನ್ನು ಇಡೀ ದಿನ ಬಳಸುತ್ತಲೇ ಇದ್ದರೆ ಅದರ ಸ್ಥಿತಿ ಹೇಗೆ ಎಂಬುದು ನಮಗೆ ಗೊತ್ತು ಇನ್ನೂ ನಮ್ಮ ಹೃದಯ, ಪಾಪ ನಮ್ಮ ಜೀವನ ಪೂರ್ತಿ ಸ್ವಲ್ಪವೂ ವಿಶ್ರಾಂತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಲೆ ಇರುತ್ತದೆ. ಇಂತಹ ಹೃದಯ ಕೆಲವೊಂದು ಬಾರಿ ತನ್ನ ಕೆಲಸವನ್ನು ನಿಲ್ಲಿಸಿಬಿಡತ್ತೆ. ಯಾಕೆ ಹಾಗೆ ಹೃದಯ ಬಡಿತ ನಿಂತು ಹೃದಯಾಘಾತ ಆಗುತ್ತೆ ಯಾಕೆ ಹಾಗೆ ಆಗುತ್ತೆ ಎಂದು ತಿಳಿಯುವ ಮೊದಲು ನಮ್ಮ ಹೃದಯದ ಕಾರ್ಯ ಏನು ಅದು ಹೇಗೆ ತನ್ನ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ಸಲ್ಪ ತಿಳಿಯೋಣ.

ನಮ್ಮ ಹೃದಯದ ಮುಖ್ಯ ಕೆಲಸ ಏನಪ್ಪಾ ಅಂದ್ರೆ, ರಕ್ತದ ಮೂಲಕ ನಮ್ಮ ದೇಹಕ್ಕೆ ಆಮ್ಲಜನಕ (ಆಕ್ಸಿಜನ್) ಪೂರೈಕೆ ಮಾಡುವುದು. ಆಮ್ಲಜನಕ ಇಲ್ಲಾ ಅಂದ್ರೆ ನಮ್ಮ ದೇಹದ ಮಾಂಸ ಖಂಡಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಇವುಗಳ ಜೊತೆ ಹೃದಯಕ್ಕೂ ಸರಿಯಾದ ಆಮ್ಲಜನಕ ಬೇಕಾಗುತ್ತದೆ ಆಗಲೇ ನಮ್ಮ ಹೃದಯ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹೃದಯದ ಮಾಂಸ ಖಂಡಗಳಿಗೆ ಆಮ್ಲಜನಕ ಒದಗಿಸುವ ರಕ್ತ ನಾಳಗಳನ್ನು ಕರೋನರಿ ಅರ್ಟ್ವಿಸ್ ಅಂತ ಹೇಳ್ತಾರೆ.

ಈ ರಕ್ತ ನಾಳಗಳಲ್ಲಿ ಏನಾದ್ರೂ ಅದ್ದ ಸಿಕ್ಕಿದ್ರೆ ಹೃದಯಕ್ಕೆ ಬೇಕಾದ ಆಮ್ಲಜನಕ ಪೂರೈಕೆ ನಿಂತುಹೋಗುತ್ತದೆ ಆಗ ನಮ್ಮ ಹೃದಯ ತನ್ನ ಕೆಲಸವನ್ನು ನಿಲ್ಲಿಸುತ್ತದೆ. ಇದನ್ನೇ ಹೃದಯಾಘಾತ ಅಥವಾ ಅಟ್ಯಾಕ್ ಅಂತ ಕರೀತಾರೆ.

ರಕ್ತ ನಾಳಗಳಲ್ಲಿ ಈ ಅಡಚರಣೆಗಳು ಹೇಗೆ ಮತ್ತೆ ಏಕೆ ಬರತ್ತೆ? ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳಲ್ಲಿ ಕೊಬ್ಬು ಹೆಚ್ಚಾಗಿ ತಡೆಯನ್ನು ಉಂಟು ಮಾಡುತ್ತದೆ. ಹೀಗೆ ಗಡ್ಡೆ ಕಟ್ಟಿದ್ದ ಕೊಬ್ಬನ್ನು ಬ್ಲಾಕ್ ಅಂತ ಹೇಳ್ತಾರೆ ಕರೋನಾರಿ ಆರ್ಟ್ವಿಜ್ ಅಲ್ಲಿ ಬ್ಲಾಕ್ ಹೆಚ್ಚಾದರೆ ಅಲ್ಲಿ ರಕ್ತ ಗಟ್ಟಿ ಆಗಿ ಗಡ್ಡೆ ಆಗುತ್ತದೆ. ಹೀಗೆ ಆದಾಗ ಹೃದಯದ ಮಾಂಸ ಖಂಡಗಕ್ಕೇ ಸರಿಯಾದ ಆಮ್ಲಜನಕ ದೊರಕದೆ ಹೃದಯ ಬಡಿತ ನಿಲ್ಲುತ್ತದೆ ಆಗ ಹಾರ್ಟ್ ಅಟ್ಯಾಕ್ ಆಗುತ್ತದೆ. ಈ ಸ್ಥಿತಿಯನ್ನು ಕರೋನರಿ ಆರ್ಟ್ವೀಜ್ ಡಿಸೀಸ್ ಅಂತ ಕರೀತಾರೆ.

ಇಂತಹ ಸ್ಥಿತಿ ಬರಲು ೨ಕಾರಣಗಳಿವೆ. ಇಂದು ಅನುವಂಶೀಯತೆ:- ನಮ್ಮ ಕುಟುಂಬದಲ್ಲಿ ಯಾರಿಗಾದರೂ ಇಂತಹ ಕಾಯಿಲೆ ಇದ್ದರೆ ಅವರಿಂದ ಅವರ ಮುಂದಿನ ಪೀಳಿಗೆಗೆ ಹರಡುತ್ತದೆ ಮತ್ತು ಇನ್ನೊಂದು *ನಮ್ಮ ಜೀವನ ಶೈಲಿ:- ನಾವು ತಿನ್ನುವ ಆಹಾರ, ನಮಗೆ ಇರುವ ಹವ್ಯಾಸಗಳು ನಾವು ಜೀವಿಸುವ ರೀತಿ. ವಯಸ್ಸು ಹೆಚ್ಚಾದಾಗ ಹೆಚ್ಚು ಧೂಮಪಾನ, ಮಧ್ಯಪಾನ ಮಾಡುವವರಿಗೆ, ಸಕ್ಕರೆ ಕಾಯಿಲೆ ಇರುವವರಿಗೆ ಈ ಕರೋನರಿ ಆರ್ಟ್ವೀಜ್ ಡಿಸೀಸ್ ಬರುವ ಸಾಧ್ಯತೆ ಹೆಚ್ಚು.

ಈ ಕಾಯಿಲೆ ಇದ್ದವರಿಗೆ ಮೊದಲು ರಕ್ತವನ್ನು ತಿಳಿಗೊಳಿಸಲು ಔಷಧಿಯನ್ನು ನೀಡುತ್ತಾರೆ ಒಂದುವೇಳೆ ಇದರ ತೀವ್ರತೆ ಹೆಚ್ಚಿದ್ದರೆ ಶಸ್ತ್ರ ಚಿಕಿತ್ಸೆ ನೀಡುವ ಪರಿಸ್ಥಿತಿ ಬರತ್ತೆ. ಹೃದಯಾಘಾತಕ್ಕೆ ೨ ರೀತಿಯ ಶಸ್ತ್ರ ಚಿಕಿತ್ಸೆ ಇರತ್ತೆ *ಆಂಜಿಯೋಪ್ಲಾಸ್ಟಿ ಇದರಲ್ಲಿ ಹೃದಯದ ತೊಂದರೆಗೆ ಒಳಗಾದ ರಕ್ತನಾಳದ ಒಳಗೆ ಒಂದು ಟ್ಯೂಬನ್ನು ಕಳಿಸಿ ಅದನ್ನು ಬಲೂನಿನ ರೀತಿ ಉಬ್ಬಿಸಿ ಹೆಚ್ಚಾದ ಕೊಬ್ಬನ್ನು ನಾಶ ಮಾಡಲಾಗುತ್ತೆ ಮತ್ತು ರಕ್ತನಾಳ ಮತ್ತೆ ಮುಚ್ಚದಂತೆ ಚಿಕಿತ್ಸೆ ನೀಡುತ್ತಾರೆ.

ಬೈಪಾಸ್ ಸರ್ಜರಿ:ಈ ವಿಧಾನದಲ್ಲಿ ನಮ್ಮ ದೇಹದಲ್ಲಿನ ಬೇರೆ ರಕ್ತನಾಳಗಳನ್ನು ತೆಗೆದು ತೊಂದರೆಗೆ ಒಳಗಾದ ರಕ್ತನಾಳಗಳ ಜೊತೆ ಸೇರಿಸಿ ಬೈಪಾಸ್ ಮಾಡುತ್ತಾರೆ ಇದನ್ನು ಓಪನ್ ಹಾರ್ಟ್ ಸರ್ಜರಿ ಅಂತನೂ ಕರೆಯುತ್ತಾರೆ.

ರಕ್ತನಾಳಗಳಲ್ಲಿ ಕೊಬ್ಬು ನಿಲ್ಲುವುದು ಅಷ್ಟೇ ಅಲ್ಲದೆ ಬೇರೆ ವಿಧಾನಗಳಿಂದಲೂ ಸಹ ಹೃದಯ ಬಡಿತ ನಿಲ್ಲುತ್ತದೆ ಇದನ್ನು ಕಾರ್ಡಿಯಾಕ್ ಅರೆಸ್ಟ್ ಎನ್ನುತ್ತಾರೆ. ಹೃದಯ ಬಡಿದುಕೊಳ್ಳುವುದು ಅನ್ನೋದು ಹೃದಯದ ನಾಡಿ ಕಳಿಸುವ ವಿದ್ಯುತ್ ಪ್ರಚೋದನೆಗಳ ಮೇಲೆ ಆಧಾರವಾಗಿರುತ್ತದೆ ಈ ಪ್ರಚೋದನೆಯಲ್ಲಿ ತೊಂದರೆಯಾಗಿ ಪ್ರಚೋದನೆಗಳು ಸರಬರಾಜ ಸರಿಯಾಗಿ ಆಗದೇ ಇದ್ದಾಗ ಹೃದಯ ಕಂಟ್ರೋಲ್ ತಪ್ಪತ್ತೆ ಆದರೆ ದಯದ ಬಡಿತ ಅತಿ ವೇಗವಾಗಿ ಅಥವಾ ನಿಧಾನವಾಗಿ ಆಗುತ್ತೆ. ಈ ಕಾಯಿಲೆಯನ್ನು ಅರೆಟ್ಮಿಯ ಅಂತ ಹೇಳ್ತಾರೆ. ಇದರಿಂದ ಬಳಲುವವರು ಹೆಚ್ಚು ಓಡುವುದು ಹೆಚ್ಚು ವ್ಯಾಯಾಮ ಮಾಡುವುದು ಹೆಚ್ಚು ಭಾರವನ್ನು ಎತ್ತುವ ಕೆಲಸವನ್ನು ಹೆಚ್ಚು ಆಯಸ್ಸು ಆಗುವಂತ ಕೆಲಸವನ್ನು ಮಾಡಿದರೆ ಹೃದಯ ನಿಂತು ಹೋಗುವ ಸಂಭವ ಇರುತ್ತದೆ.

ಈ ಕಾಯಿಲೆಯನ್ನು ನಿಯಂತ್ರಿಸಲು ಫೀಸ್ ಮೇಕರ್ ಎಂಬ ಒಂದು ವಸ್ತುವನ್ನು ಹೃದಯದ ಭಾಗದಲ್ಲಿ ಇಡಲಾಗುತ್ತದೆ. ಇದು ಹೃದಯ ಬಡಿತವನ್ನು ಸಾಧಾರಣ ಸ್ಥಿತಿಗೆ ತಂದು ಅರೆತ್ಮಿಯ ಇಂದ ರಕ್ಷಿಸುತ್ತದೆ. ಈ ಕಾಯಿಲೆಯು ಅನುವಂಶಿಯವಾಗಿ ಅಥವಾ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಹಾಗೂ ನಾಡಿಬಡಿತ ಸಮಸ್ಯೆಯಿಂದ ಬರಬಹುದು. ಇಂತಹ ರೋಗಗಳಿಂದ ದೂರವಿರಲು ಮಧ್ಯಪಾನ, ಧೂಮ ಪಾನ ಇವುಗಳನ್ನು ಬಿಡುವುದು , ಯೋಗ, ಪ್ರಾಣಾಯಾಮ ಧ್ಯಾನ ಮಾಡುವುದರಿಂದ ನಮ್ಮ ಅಮೂಲ್ಯವಾದ ಹೃದಯವನ್ನು ಉಳಿಸಿಕೊಳ್ಳೋಣ


Leave A Reply

Your email address will not be published.