ಶರೀರಕ್ಕೆ ಕ್ಯಾಲ್ಸಿಯಂ ಒದಗಿಸುವ ಜೊತೆಗೆ ಮೂಳೆಗಳಿಗೆ ಬಲ ನೀಡುವ ಆಹಾರಗಳಿವು

ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಅತಗತ್ಯವಾಗಿದ್ದು, ಇದರ ಪ್ರಮಾಣ ಕಡಿಮೆಯಾದರೆ ದೇಹದಲ್ಲಿ ಏರುಪೇರಾಗಿ ಇನ್ನಿಲ್ಲದ ಹಲವಾರು ದೈಹಿಕ ಸಮಸ್ಯೆಗಳು ಕಾಡಲಾರಂಭಿಸುತ್ತದೆ.ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕ್ಯಾಲ್ಸಿಯಂ ಅಂಶ ಸಮವಾಗಿರಬೇಕಾಗುತ್ತದೆ. ಹಾಲಿನ ಸೇವನೆಯಿಂದ ಅತ್ಯಧಿಕವಾದ ಕ್ಯಾಲ್ಸಿಯಂ ದೊರೆಯುತ್ತದೆ ಎಂಬುದು ಹಲವರ ಅಭಿಪ್ರಾಯ ಆದರೆ ಹಾಲಿಗಿಂತ ಮಿಗಿಲಾಗಿ ಕೆಲವು ಇಷ್ಟ್ರೋ ಆಹಾರ ಪದಾರ್ಥಗಳು ನಮಗೆ ಸಿಗುತ್ತವೆ.

ಆಧುನಿಕ ಆಹಾರ ಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಮಾನವನ ದೇಹದ ಮೂಳೆಗಳು ದುರ್ಬಲಗೊಳ್ಳುತ್ತಿದ್ದು, ಇದರಿಂದ ದೇಹವು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಸಾಧಾರಣವಾಗಿ ಮನುಷ್ಯನಿಗೆ ಎಷ್ಟು ಪ್ರಮಾಣದ ಕ್ಯಾಲ್ಸಿಯಂ ಅಗತ್ಯವಿದೆ ಎಂದರೆ ಸಣ್ಣಮಕ್ಕಳಾದರೆ 600 ಮೀ.ಗ್ರಾಂ, ದೊಡ್ಡವರಿಗಾದರೆ 400 ಮೀ,ಗ್ರಾಂ, ಬಾಣಂತಿ ಮಹಿಳೆಯರಿಗಾದರೆ 900 ಮೀ,ಗ್ರಾಂ ರಷ್ಟು ಕ್ಯಾಲಿಯಂ ಬೇಕಾಗುತ್ತದೆ.

ಮೂಳೆಗಳ ಕಟ್ಟಿಮುಟ್ಟಿಗಾಗಿ ಕ್ಯಾಲಿಯಂನಂತಹ ಪೋಷಕಾಂಶವನ್ನು ಹೊಂದಲು ನೈಸರ್ಗಿಕ ಪದಾರ್ಥಬಳಸಿ ಹೀಗೆ ಮಾಡಿ. ಬಿಳಿ ಎಳ್ಳು, ಬೆಲ್ಲ, ಏಲಕ್ಕಿ ಪದಾರ್ಥಗಳು ದೇಹಕ್ಕೆ ಬೇಕಿರುವ ಕ್ಯಾಲ್ಸಿಯಂ ನೀಡಲು ಸಹಕಾರಿಯಾಗಿದ್ದು, ಬಿಳಿ ಎಳ್ಳನ್ನು ಹಂಚಿನ ಮೇಲೆ ಹುರಿದು ತಣ್ಣಗಾಗಲು ಬಿಡಿ ನಂತರ ಏಲಕ್ಕಿ ಹಾಗೂ ಹುರಿದ ಬಿಳಿ ಎಳ್ಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಸಿ ಪುಡಿಮಾಡಿಕೊಳ್ಳಿ, ಈ ಪುಡಿಯೊಂದಿಗೆ ಬೆಲ್ಲವನ್ನು ಮಿಕ್ಸ್ ಮಾಡಿ ಪ್ರತಿದಿನ ಊಟಕ್ಕೆ ಮುನ್ನ ಒಂದು ಚಮಚದಂತೆ ಸೇವಿಸುವುದರಿಂದ ಕ್ಯಾಲ್ಸಿಯಂ ದೊರೆಯುತ್ತದೆ.

ಸೊಪ್ಪುಗಳಿಂದಲೂ ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಬಹುದು, ಹೌದು ಸೊಪ್ಪುಗಳಿಂದಲೂ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಪಡೆಯಬಹುದಾಗಿದೆ, ಮೆಂತೆ ಸೊಪ್ಪು, ಕರಿಬೇವು, ನುಗ್ಗೆ ಸೊಪ್ಪುಗಳು ಹಾಲಿಗಿಂತ ನಾಲ್ಕು ಪಟ್ಟು ಕ್ಯಾಲ್ಸಿಯಂ ಉತ್ಪತ್ತಿಮಾಡುವ ಶಕ್ತಿ ಹೊಂದಿದ್ದು, ಈ ಸೊಪ್ಪುಗಳ ಸೇವನೆಯಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

Leave a Comment

error: Content is protected !!