ಇಂತಹ ತಪ್ಪುಗಳನ್ನು ಮಾಡದೇ ಆರೋಗ್ಯವಂತರಾಗಿ ಬಾಳಿ!


ದಿನವೂ ಸ್ನಾನ ಮಾಡಬೇಕಾ ಬೇಡ್ವ, ಎಷ್ಟು ಹೊತ್ತು ಸ್ನಾನ ಮಾಡಿದ್ರೆ ನಿಮ್ಮ ಆರೋಗ್ಯಕ್ಕೆ ಉತ್ತಮ. ತುಂಬಾ ಹೊತ್ತು ಸ್ನಾನ ಮಾಡಿದ್ರೆ ಎಷ್ಟು ಅಪಾಯಕಾರಿ ಅಂತಾ ಗೋತ್ತಾ. ಜೊತೆಗೆ ನಿಮ್ಮ ಮನೆಯಲ್ಲಿ ಎಲ್ಲರೂ ಒಂದೇ ನೇಲ್ ಕಟರ್ ಬಳಸ್ತಿರಾ. ಇದರಿಂದ ಏನೆಲ್ಲಾ ರೋಗ ಬರುತ್ತೆ ಅಂತಾ ಗೊತ್ತಾ. ನಿಮ್ಮ ಮೊಬೈಲ್ ಫೋನ್ ದಿನವು ಕ್ಲೀನ್ ಮಾಡದೆ ಇದ್ರೆ ಎಷ್ಟು ಸಮಸ್ಯೆ ಗೊತ್ತಾ. ದಿನವೂ ಕೈ ತೊಳೆಯೋ ಅಭ್ಯಾಸ ಇಲ್ಲ ಅಂದ್ರೆ ಈ ಕೂಡಲೇ ಈ ಅಭ್ಯಾಸ ರೂಢಿಸಿಕೊಳ್ಳಿ ಯಾಕೆ ಗೊತ್ತಾ.ಈ ರೀತಿಯ ನಿಮ್ಮ ಆರೋಗ್ಯಕ್ಕೆ ಅತ್ಯಾವಶ್ಯಕವಾದ ಟಿಪ್ಸ್ ಗಳು ಇಲ್ಲಿವೆ.

ಮೊದಲನೆಯದಾಗಿ ಸ್ನಾನದ ವಿಚಾರ ಸಾಮಾನ್ಯವಾಗಿ ಪ್ರತಿ ಭಾರತೀಯರು ದಿನಲೂ ಸ್ನಾನ ಮಾಡೇ ಮಾಡ್ತಾರೇ. ಆದರೆ ತುಂಬಾ ಹೊತ್ತು ಸ್ನಾನ ಮಾಡಿದ್ರೆ ಅಪಾಯಕಾರಿ. ದೇಹದಲ್ಲಿರುವ ಪಿ ಹೆಚ್ ಬ್ಯಾಲೆನ್ಸ್ ಹೆಚ್ಚು ಕಡಿಮೆಯಾಗಿ ಚರ್ಮದ ಸಮಸ್ಯೆ ಕಾಡುತ್ತೆ. ಯಾಕಂದ್ರೆ ನೀವು ಬಳಸೋ ಸೋಪ್ ಶ್ಯಾಂಪೂವಿನಲ್ಲಿ ಕೇಮಿಕಲ್ ಇರುತ್ತೆ. ಹೀಗಾಗಿ ಸ್ನಾನಕ್ಕೆ ಹೋದರೆ ಬೇಗ ಸ್ನಾನ ಮುಗಿಸಿ ಬರೋದು ಒಳ್ಳೆಯದು. ವಿಜ್ಞಾನಿಗಳ ಪ್ರಕಾರ ವಾರಕ್ಕೆ 5 ಬಾರಿ ಸ್ನಾನ ಮಾಡಿದ್ರೆ ಒಳ್ಳೆಯದು. ನಿಮಗೆ ಗೊತ್ತಾ ಚೀನಿಯರು ಸ್ನಾನ ಮಾಡೋದು ವಾರಕ್ಕೆ ಎರಡರಿಂದ ಮೂರು ಬಾರಿ ಮಾತ್ರ.

ಎರಡನೇಯದಾಗಿ ಒಂದೇ ನೆಲ್ ಕಟರ್ ಗಳನ್ನು ಬಳಸೋ ಅಭ್ಯಾಸ ಕೆಲವರಲ್ಲಿ ಇರುತ್ತೆ. ಹೀಗಾಗಿ ಅಪರೂಪಕ್ಕೆ ನೆಲ ಕಟ್ ಮಾಡರೋ ಮನೆಯಲ್ಲಿ ಒಂದೇ ನೆಲ್ ಕಟರ್ ಇರುತ್ತೆ. ನಿಮಗೆ ಗೊತ್ತಾ ಇದು ತುಂಬಾ ಅಪಾಯಕಾರಿ. ನೋಡೊಕೆ ನಿಮ್ಮ ನೆಲ್ ಕಟರ್ ಕ್ಲೀನ್ ಅನ್ನಿಸಬಹುದು. ಒಂದೇ ನೆಲ್ ಕಟರ್ ಬಳಸಿದ್ರೆ ಸಮಸ್ಯೆ ಇಲ್ಲ ಅನ್ಸ್ ಬಹುದು. ಆದ್ರೆ ಉಗುರಲ್ಲಿ ಸಾಕಷ್ಟು ಕ್ರಿಮಿ ಕೀಟಗಳು ಸಂಗ್ರಹವಾಗಿರುತ್ತವೆ ಹೀಗಿರುವಾಗ ನೆಲ್ ಕಟರ್ ನಿಂದ ಉಗುರನ್ನು ಕಟ್ ಮಾಡಿದ್ರೆ. ನೆಲ ಕಟರ್ ಗೂ ಕ್ರಿಮಿ ಕೀಟಗಳು ಅಂಟಿಕೊಳ್ಳುತ್ತವೆ. ಅದ್ದರಿಂದ ಬೇರೆ ಬೇರೆ ನೆಲ್ ಕಟರ್ ಗಳನ್ನ ಬಳಸೋದು ಒಳ್ಳೆಯದು.

ತುಂಬಾ ಜನಕ್ಕೆ ಹೀಯರ್ ಬಡ್ಸ್ ಬಳಸೋರು, ಕಿವಿಯನ್ನು ಕ್ಲೀನ್ ಮಾಡಿಕೊಳ್ಳೋರಲ್ಲಿ ತುಂಬಾ ಕ್ಲೀನ್ ಅನ್ನೋ ಭಾವನೆ ಇರುತ್ತೆ ಆದರೆ ನಿಮ್ಮ ಲೆಕ್ಕಚಾರ ತಪ್ಪು. ಕಿವಿಗಳಿಗೆ ಹೀಯರ್ ಬಡ್ಸ್ ಬಳಸಬಾರದು. ತುಂಬಾ ಅಪಾಯಕಾರಿ. ಇನ್ನು ಕೆಲವರು ತಮ್ಮ ಕಿವಿಗಳನ್ನು ಪೀನ್ ಗಳಿಂದ ಕ್ಲೀನ್ ಮಾಡಿಕೊಳ್ಳುತ್ತಾರೆ. ಇದೂ ಕೂಡ ತಪ್ಪು ಹೀಗಾಗಿ ಸ್ನಾನ ಮಾಡುವಾಗ ಕಿವಿಗಳನ್ನ ತೊಳೆದುಕೊಂಡರೆ ಕ್ಷೀನ್ ಆಗುತ್ತವೆ.

ಇನ್ನು ತುಂಬಾ ಜನಕ್ಕೆ ಹಲ್ಲು ಉಜ್ಜುವುದೇ ಒಂದು ಸಂಭ್ರಮ. ದಿನಕ್ಕೆ ಕಾಲು ಗಂಟೆಯಾದ್ರೂ ಹಲ್ಲು ಉಜ್ಜುವುದನ್ನು ರೂಢಿಸಿಕೊಂಡಿರುತ್ತಾರೆ. ಇದು ಸರಿಯಾದ ಕ್ರಮವಲ್ಲ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದು ಉತ್ತಮ .ಅದರಂತೆಯೇ 2ರಿಂದ 3 ನಿಮಿಷಗಳು ಮಾತ್ರ ಹಲ್ಲನ್ನು ಉಜ್ಜಬೇಕು. ಹಲ್ಲನ್ನು ಉಜ್ಜುವುದಕ್ಕೂ ಒಂದು ಕ್ರಮವಿದೆ. ಅ ಕ್ರಮದಂತೆ ಬಾಯಿಯಲ್ಲಿನ ಮೇಲ್ಭಾಗ ಹಾಗೂ ಕೆಳಭಾಗದ ಹಲ್ಲನ್ನು ವರ್ಟಿಕಲ್ ಪೋಜಿಷನ್ ನಲ್ಲಿ ಹಲ್ಲನ್ನು ಉಜ್ಜಬೇಕು. ಅಲ್ಲದೆ ಎರಡು ತಿಂಗಳಗೊಮ್ಮೆ ಬ್ರೇಶ್ ಅನ್ನು ಬದಲಾಯಿಸಿ ನಿಮ್ಮ ಹಲ್ಲಿನ ಆರೋಗ್ಯವನ್ನ ಕಾಪಾಡಿ.

ಮನೆಯಲ್ಲಿಯಲ್ಲಿನ ಎಲ್ಲಾ ವಸ್ತುಗಳನ್ನ ಕ್ಲೀನ್ ಮಾಡ್ತಾರೇ ಆದರೆ ಮೊಬೈಲ್ ಹಾಗೂ ಟಿವಿ ರಿಮೋಟ್ ಕ್ಲೀನ್ ಮಾಡೋದನ್ನ ನೋಡಿದ್ದೀರಾ. ಹೆಚ್ಚಿನವರಿಗೆ ಗೊತ್ತಿಲ್ಲ ಅವರ ಮೊಬೈಲ್ ಫೋನ್ ಅವರ ಸಿಂಗ್ ಕ್ಕಿಂತಲೂ ತುಂಬಾ ಗಲೀಜು ಇರುತ್ತೆ ಅಂತಾ. ಹೀಗಾಗಿ ಮೊಬೈಲ್ ಫೋನ್ ನನ್ನು ಹ್ಯಾಂಡ್ ಸ್ಯಾನಿಟೈಸರ್ ನಿಂದ ಕ್ಲೀನ್ ಮಾಡ್ತಾ ಇರೀ. ಯಾಕಂದ್ರೆ ಮೊಬೈಲ್ ಫೋನ್ ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇಟ್ಟುಕೊಂಡಿರುತ್ತವೆ . ಇದರಿಂದ ಮೊಬೈಲ್ ನಲ್ಲಿ ಅಂಟಿಕೊಂಡ ಬ್ಯಾಕ್ಟೀರಿಯಾ ನಮಗೂ ಅಂಟಿಕೊಳ್ಳಬಹುದು ಹಾಗಾಗಿ ಮೊಬೈಲ್ ಫೋನ್ ನನ್ನು ಕ್ಲೀನ್ ಮಾಡಿಕೊಳ್ಳಿ.

ಇನ್ನು ಈಗಿನ ಯುವಕರು ಸಾಕ್ಸ್ ಹಾಕದೇ ಶೂ ಹಾಕುವುದು ಒಂದು ಟ್ರೇಂಡ್ ಆಗಿಬಿಟ್ಟಿದೆ. ಆದ್ರೆ ಇದು ತುಂಬಾ ಅಪಾಯಕಾರಿ .ಹೀಗೆ ಮಾಡೋದದಿಂದ ನಿಮ್ಮ ಕಾಲು ಹೆಚ್ಚು ವಾಸನೆಯಿಂದ ಕೂಡಿರುತ್ತೆ, ಅಲ್ಲದೆ ಕಾಲುಗಳಿಗೆ ಅನೇಕ ಸೋಂಕುಗಳು ಬರುವ ಸಾಧ್ಯತೆಯಿದೆ. ಹಾಗಾಗಿ ಸಾಕ್ಸ್ ಹಾಕಿ ಶೂ ಗಳನ್ನ ಧರಿಸಿ.

ಮತ್ತೊಂದು ಕೈ ತೊಳೆಯೋ ವಿಚಾರ. ಎಷ್ಟೋ ಜನಕ್ಕೆ ಊಟಕ್ಕೆ ಮುನ್ನ ಕೈ ತೊಳೆಯಿರಿ ಅಂದ್ರೆ, ಊಟ ಆದಮೇಲೆ ತೊಳಿತ್ತಿವಲ್ಲ ಅನ್ನೋ ಮನೋಭಾವನೆ. ಆದರೆ ದಿನಕ್ಕೆ ಐದು ಬಾರಿ ಕೈತೊಳೆಯಲೇ ಬೇಕು ಇದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ಕೈ ಗಳನ್ನ ಶುಭ್ರವಾಗಿಟ್ಟುಕೊಂಡಷ್ಟು ನಿಮ್ಮ ಆರೋಗ್ಯ ಉತ್ತಮವಾಗಿರುತ್ತೆ. ಇವೆಲ್ಲಾ ಸಾಮಾನ್ಯವಾಗಿ ಪಾಲಿಸಬೇಕಾದ ಆರೋಗ್ಯ ನಿಯಮಗಳು. ಈರೀತಿ ಮಾಡೋದ್ರಿಂದ ನಿಮ್ಮ ಆರೋಗ್ಯವು ಸೇಫ್ ನೀವು ಸೇಫ್ ಆಗಿ ಇರ್ತೀರಾ.


Leave A Reply

Your email address will not be published.