ಹಿರೇಕಾಯಿಯನ್ನು ವಾರಕ್ಕೊಮ್ಮೆಯಾದ್ರು ಸೇವಿಸಬೇಕು ಯಾಕೆ ಗೊತ್ತೇ?

ತರಕಾರಿಗಳು ಟೊಮೆಟೊ, ಗ್ಯಾರೇಟ್, ಮೂಲಂಗಿ, ಇನ್ನೀತರೆ ತರಕಾರಿಗಳನ್ನ ನಾವು ಪ್ರತಿದಿನ ಆಹಾರ ಪದ್ಧತಿಗಳಲ್ಲಿ ಬಳಸುತ್ತೇವೆ. ನಮ್ಮ ಮನೆಯಲ್ಲಿ ಪ್ರತಿನಿತ್ಯ ಬಳಸುವ ತರಕಾರಿಗಳು ಪೋಷಕಾಂಶಗಳಿಂದ ಕೂಡಿರುತ್ತದೆ.ಆದರೆ ತುಂಬಾ ಜನ ತರಕಾರಿಗಳನ್ನ ತಿನ್ನಲು ಇಷ್ಟಪಡುವುದಿಲ್ಲ. ಇದರಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಕೆಲವೊಂದು ತರಕಾರಿಗಳಲ್ಲಿ ಹೇರಳವಾಗಿ ಪೋಷಕಾಂಶಗಳಿರುತ್ತವೆ. ಅಂತಹ ತರಕಾರಿಗಳಲ್ಲಿ ಹೀರೇಕಾಯಿ ಸಹ ಒಂದು.

ಹೀರೇಕಾಯಿ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯ ಸ್ನೇಹಿ ತರಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ, ವಿಟಿಮಿನ್ ಬಿ2 ವಿಟಮಿನ್ ಬಿಸಿ, ಕ್ಯಾರೋಟಿನ್, ನಿಯಾಸಿಸ್ ,ಕ್ಯಾಲ್ಸಿಯಂ, ಕಬ್ಬಿಣ, ಪಾಸ್ ಪರಸ್ ಇನ್ನು ಅನೇಕ ಅಂಶಗಳನ್ನ ನಮ್ಮ ದೇಹಕ್ಕೆ ನೀಡುತ್ತದೆ. ಈ ಹೀರೇಕಾಯಿ ಸೇವನೆಯಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಪ್ರತಿದಿನ ಹೀರೇಕಾಯಿ ಸೇವನೆಯಿಂದ ಮದುಮೇಹಿಗಳು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಮೂತ್ರವರ್ಧಕ ಗುಣವನ್ನು ಹೊಂದಿರುವ ಹೀರೇಕಾಯಿಯು ದಿನವೀಡಿ ನಮ್ಮ ದೇಹವನ್ನು ಉತ್ಸಾಹವಾಗಿ ಇರುವಂತೆ ನೋಡಿಕೊಳ್ಳುತ್ತದೆ. ನಮ್ಮ ಮನಸ್ಸು ಚಂಚಲವಾಗದಂತೆ ಕಾಪಾಡುತ್ತದೆ.

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಇದು ಸಹಕಾರಿ. ದೇಹವನ್ನು ಶುದ್ಧಿಕರಿಸುವ ಕಾರ್ಯಕ್ಕೆ ಹೀರೇಕಾಯಿ ಉತ್ತಮ ಆಹಾರ ಪದಾರ್ಥವಾಗಿದೆ. ಹೀರೇಕಾಯಿಯನ್ನು ಪೇಸ್ಟ್ ಮಾಡಿಕೊಂಡು ಹಾಲು ಅಥವಾ ನೀರಿನೊಂದಿಗೆ ಸೇವಿಸುವುದರಿಂದ ಕಿಡ್ನಿಯಲ್ಲಿನ ಕಲ್ಲು ಕರಗುತ್ತದೆ.

ಹೀರೇಕಾಯಿಯು ದೇಹವನ್ನ ತಂಪಾಗಿರುವಂತೆ ಸಹಕರಿಸುತ್ತದೆ. ಬೇಸಿಗೆ ಕಾಲದಲ್ಲಿ ಸೇವಿಸುವ ಅತ್ಯುತ್ತಮ ತರಕಾರಿಗಳಲ್ಲಿ ಹೀರೇಕಾಯಿ ಸಹ ಒಂದಾಗಿದೆ. ಜಾಂಡೀಸ್ ಸಮಸ್ಯೆಗೆ ಉತ್ತಮ ಚಿಕಿತ್ಸೆಗಾಗಿ ಹೀರೇಕಾಯಿಯನ್ನ ಬಳಸಲಾಗುತ್ತದೆ. ಈ ಕಾಯಿಲೆ ಇರುವವರು ಹೀರೇಕಾಯಿ ಸೇವಿಸುವುದು ಉತ್ತಮ.

ರಕ್ತವನ್ನ ಶುದ್ಧಿಕರಿಸುವ ಕೆಟ್ಟ ಕೋಲೆಸ್ಟ್ರಾಲ್ ಅನ್ನು ಹೊರಹಾಕುವ ಕಾರ್ಯವನ್ನ ಹೀರೇಕಾಯಿ ಮಾಡುತ್ತದೆ. ಅನಗತ್ಯ ತೂಕ ಕಳೆದುಕೊಳ್ಳಲು ಹೀರೇಕಾಯಿ ಸೇವನೆ ಒಳ್ಳೆಯದು. ಅಲ್ಲದೆ ಚರ್ಮದ ಆರೋಗ್ಯಕ್ಕೆ ಹೀರೇಕಾಯಿ ತುಂಬಾ ಉತ್ತಮವಾಗಿದೆ. ಕಣ್ಣಿನ ಆರೋಗ್ಯಕ್ಕೆ ಹೀರೇಕಾಯಿ ಸೂಕ್ತವಾಗಿದ್ದು, ಕಣ್ಣಿನಲ್ಲಿ ನೋವಾಗಿ ತೀವ್ರ ನೀರು ಬರುತ್ತಿದ್ದರೆ ಹೀರೇಕಾಯಿ ಇದರ ಶಮನಕ್ಕೆ ಸಹಕಾರಿಯಾಗುತ್ತದೆ. ಹೀಗೆ ಹಲವಾರು ಪ್ರಯೋಜನಗಳನ್ನ ಹೀರೇಕಾಯಿ ಹೊಂದಿದೆ.

Leave a Comment

error: Content is protected !!