ಕಾಮಾಲೆರೋಗ ನಿವಾರಣೆಗೆ ಪೇರಳೆ ಎಲೆಯಲ್ಲಿದೆ ಪರಿಹಾರ

ಪೇರಲ ಅಥವಾ ಸೀಬೆ ಹಣ್ಣಿನ ಸೇವನೆಯಿಂದ ದೇಹಕ್ಕೆ ಆಗುವ ಹಲವು ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಪೇರಲ ಅಥವಾ ಸೀಬೆ ಹಣ್ಣು ನೋಡಲು ಸುಂದರವಾಗಿ, ವಿಶಿಷ್ಟವಾದ ಪರಿಮಳವನ್ನು ಹೊಂದಿದೆ. ಈ ಹಣ್ಣಿನ ಸೇವನೆಯಿಂದ ಅನೇಕ ಉಪಯೋಗಗಳಿವೆ. ಸೀಬೆ ಹಣ್ಣಿನ ಎಲೆಯ ಕಷಾಯ ಕುಡಿಯುತ್ತಾ ಬಂದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ ಎಂದು ಆಧುನಿಕ ಸಂಶೋಧನೆಯಿಂದ ತಿಳಿದುಬಂದಿದೆ. 4-5 ಸೀಬೆ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಸ್ವಲ್ಪ ಬೆಲ್ಲ ಸೇರಿಸಿ ಕುಡಿದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ. ಕೂದಲಿನ ಸಮಸ್ಯೆಯನ್ನು ಬಹಳಷ್ಟು ಜನರು ಎದುರಿಸುತ್ತಿದ್ದಾರೆ. ಕೂದಲು ತುಂಡಾಗುವ, ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 10 ಸೀಬೆ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಕಾಲು ಗಂಟೆಗಳ ಕಾಲ ಕುದಿಸಿ ಆ ನೀರನ್ನು ಸೋಸಿಕೊಳ್ಳಬೇಕು ನಂತರ ಸೋಸಿದ ನೀರನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಲೆ ಸ್ನಾನ ಮಾಡಬೇಕು ಹೀಗೆ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗಿ ಸೋಂಪಾದ ಕೂದಲು ಬೆಳೆಯುತ್ತದೆ ಹಾಗೂ ಕಪ್ಪಾಗುತ್ತದೆ. ಮುಖದಲ್ಲಿ ಮೊಡವೆಗಳಿದ್ದರೆ ಸೀಬೆ ಎಲೆಗಳನ್ನು ನುಣ್ಣಗೆ ಅರೆದು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು ಇದರಿಂದ ಮೊಡವೆ ನಿವಾರಣೆಯಾಗುತ್ತದೆ.

ಬಾಯಿಯಲ್ಲಿ ಹುಣ್ಣುಗಳಾಗುತ್ತಿದ್ದರೆ ಸೀಬೆ ಎಲೆಯನ್ನು ಅರೆದು ಹುಣ್ಣಾಗಿರುವ ಜಾಗಕ್ಕೆ ಹಚ್ಚಿಕೊಂಡರೆ ಹುಣ್ಣು ಕಡಿಮೆಯಾಗುತ್ತದೆ ನೋವು ಕೂಡ ವಾಸಿಯಾಗುತ್ತದೆ. ಸೀಬೆ ಎಲೆಯಲ್ಲಿ ಆಂಟಿ ಆಕ್ಸಿಡೆಂಟ್ ಹೇರಳವಾಗಿದ್ದು ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಗೆ ರಾಮಬಾಣವಾಗಿದೆ. ಕೆಮ್ಮು, ನೆಗಡಿ ಹಾಗೂ ಇತರ ಸಮಸ್ಯೆಗಳು ಬೇಗ ವಾಸಿಯಾಗುತ್ತದೆ. ಸೀಬೆ ಎಲೆಗಳನ್ನು ಜಗಿದು ತಿನ್ನುವುದರಿಂದ ಹಲ್ಲುನೋವು, ದಂತಕ್ಷಯ, ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ. ಸೀಬೆ ಎಲೆಗಳು ದೇಹದ ಬೊಜ್ಜನ್ನು ಕರಗಿಸಲು ಪ್ರಮುಖ ಪಾತ್ರ ವಹಿಸುತ್ತದೆ ಆದ್ದರಿಂದ ದಿನಕ್ಕೆ ಎರಡು ಬಾರಿ ಸೀಬೆ ಎಲೆಯ ಕಷಾಯವನ್ನು ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ಸೀಬೆ ಎಲೆಯ ಕಷಾಯ ಸಕ್ಕರೆ ಖಾಯಿಲೆಗೆ ರಾಮಬಾಣವಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಅಂಶವನ್ನು ಉತ್ಪತ್ತಿ ಮಾಡುತ್ತದೆ. ದಿನಕ್ಕೆ ಎರಡು ಬಾರಿ ಸೀಬೆ ಎಲೆಯ ಕಷಾಯ ಹಾಗೂ ಒಂದು ಸೀಬೆ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ತಂಪು ಹಾಗೂ ಒಳ್ಳೆಯದು.

Leave a Comment

error: Content is protected !!