ಮಾಂಸರಕ್ಕಿಂತಲೂ ಅಧಿಕ ಪ್ರೊಟೀನ್, ಶಕ್ತಿ ನೀಡುವ ಆಹಾರಗಳಿವು.

ಮಾಂಸಾಹಾರ ಸೇವನೆ ಮಾಡುವವರಿಗೆ ಎಲ್ಲೂ ಕೂಡ ಈಗ ಮಾಂಸ ಸಿಗ್ತಾ ಇಲ್ಲ. ಒಂದುವೇಳೆ ಸಿಕ್ಕಿದರೂ ಕೂಡ ತಿನ್ನೋಕೆ ತುಂಬಾ ಭಯ ಆಗುತ್ತೆ. ಎಲ್ಲರಿಗೂ ಗೊತ್ತಿರುವ ಹಾಗೆ ಮಾಂಸಾಹಾರ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅವಶ್ಯಕವಾದ ಫ್ಯಾಟ್, ನ್ಯುಟ್ರಿಯನ್ಸ್, ಪ್ರೊಟೀನ್ ವಿಟಮಿನ್ ಗಳನ್ನೂ ಒದಗಿಸುತ್ತದೆ ಆದರೆ, ಮಾಂಸಾಹಾರವನ್ನು ಸೇವಿಸದೇ ಅದಕ್ಕಿಂತಲೂ ಶಕ್ತಿಯನ್ನು ಕೊಡುವ ಮತ್ತು ಮನೆಯಲ್ಲಿಯೇ ಸಿಗುವ ಆಹಾರ ಇದೆ ಅದು ಯಾವುದು ಅಂತ ಗೊತ್ತಾ?? ಅದರ ಬಗ್ಗೆ ತಿಳಿದುಕೊಳ್ಳಿ.

ಧಾನ್ಯಗಳಲ್ಲಿ ಎಲ್ಲಾ ಬೀಜಗಳಿಗಿಂತ ಶೇಂಗಾ ಬೀಜ ತುಂಬಾ ಅತ್ಯುತ್ತಮ ಆದದ್ದು. ಈ ಗೋಡಂಬಿ, ಬಾದಾಮಿ, ಪಿಸ್ತಾ ಇವೆಲ್ಲವುಗಳಿಗಿಂತ ಶೇಂಗಾ ಬೀಜ ಅತ್ಯುತ್ತಮ ನ್ಯುಟ್ರಿಯೆಂಟ್ ಹೊಂದಿರುವ ಆಹಾರ. ಆದರೆ ಈ ಶೇಂಗಾ ಬೀಜವನ್ನ ನೀವು ಯಾವ ಸಮಯದಲ್ಲಿ ಹೇಗೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅನ್ನೋದು ತಿಳಿದಿದ್ದರೆ ಸಾಕು ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಸಹಾಯ ಆಗತ್ತೆ.

ನೀವು ತುಂಬಾ ತೆಳ್ಳಗೆ ಇರಬಹುದು ಏನು ಎಷ್ಟೇ ತಿಂದರೂ ದಪ್ಪನೆ ಆಗಲ್ಲ ಆನ್ನಿಸಬಹುದು. ಅದಕ್ಕೆ ಕೂಡ ಈ ಶೇಂಗಾ ಬೀಜ ತುಂಬಾ ಸಹಾಯ ಮಾಡುತ್ತದೆ. ನಾವು ದಿನನಿತ್ಯ ಶೆಂಗಾವನ್ನ ನೆನೆಸಿ ತಿನ್ನುತ್ತೇವೆ ಇಲ್ಲ ಹೊರಿದುಕೊಂಡು ತಿನ್ನುತ್ತೇವೆ ಅಥವಾ ಯಾವುದೇ ಅಡುಗೆಗೆ ಬಳಸಿ ಕೂಡ ತಿನುತ್ತೇವೆ. ಆದರೆ ಇದರಿಂದ ಶಕ್ತಿ ಮತ್ತೆ ಬಳ ಬೇಕು ಅಂದ್ರೆ ಈ ರೀತಿಯಾಗಿ ತೆಗೆದುಕೊಳ್ಳಬೇಕು. ನಾವು ಮನೆಯಲ್ಲಿ ಉಪಯೋಗಿಸುವ ಶೇಂಗಾ ಬೀಜವನ್ನು ಒಂದು ಹಿ ಅಷ್ಟು ತೆಗೆದುಕೊಂಡು ಅದನ್ನ ಒಂದು ಚಿಕ್ಕ ಬೌಲ್ ಗೆ ಹಾಕಿಕೊಂಡು ಅದಕ್ಕೆ ಶೇಂಗಾ ಬೀಜ ಮುಳುಗುವಷ್ಟು ನೀರನ್ನ ಹಾಕಿ ಇಡಿ ರಾತ್ರಿ ಚೆನ್ನಾಗಿ ನೆನೆಯಲು ಬಿಡಬೇಕು. ಈ ರೀತಿ ನೆನೆಸಿಟ್ಟ ಶೇಂಗಾ ಬೀಜ ತಿನ್ನುವುದರಿಂದ ಗ್ಯಾಸ್, ಅಸಿಡಿಟಿ ಸಮಸ್ಯೆಯನ್ನ ದೂರ ಮಾಡಿಕೊಳ್ಳಬಹುದು. ಈ ಶೇಂಗಾ ಬೀಜ ಹೃದಯಕ್ಕೆ ತುಂಬಾ ಒಳ್ಳೆಯದು. ನಾವು ಸಾಮಾನ್ಯವಾಗಿ ಮನೆಗೆ ಅಡುಗೆ ಎಣ್ಣೆ ತರುವಾಗ ಶೇಂಗಾ ಎಣ್ಣೆ ಅಂತ ಕೇಳಿ ತರ್ತೀವಿ ಯಾಕೆಂದ್ರೆ ಶೇಂಗಾ ಎಣ್ಣೆ ಸ್ವಲ್ಪ ದುಬಾರಿ ಆದರೂ ಸಹ ಆರೋಗ್ಯಕ್ಕೆ ಒಳ್ಳೆಯದು ಅಂತ. ಹಾಗೆ ಈ ಶೇಂಗಾ ಬೀಜದಿಂದ ನಾವು ನಮ್ಮ ತೂಕವನ್ನು ಹೆಚ್ಚೂ ಮಾಡಿಕೊಳ್ಳಬಹುದು ಹಾಗೂ ಕಡಿಮೆಯೂ ಮಾಡಿಕೊಳ್ಳಬಹುದು.

ತೂಕ ಜಾಸ್ತಿ ಮಾಡಿಕೊಳ್ಳೋದು ಹೇಗೆ ಅಂದ್ರೆ, ನಾವು ದಿನವೂ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಊಟ ತಿಂಡಿಯ ನಂತರ ಮೂರು ಹೊತ್ತೂ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡರೆ ತೂಕ ಜಾಸ್ತಿ ಮಾಡಿಕೊಳ್ಳಬಹುದು. ಅದೇ ತೂಕವನ್ನು ಕಡಿಮೆ ಮಾಡಿಕೊಳ್ಳೋಕೆ ಬೆಳಿಗ್ಗೆ ಸಮಯದಲ್ಲಿ ಸ್ವಲ್ಪ ಒಂದು ಹಿಡಿ ಅಷ್ಟು ಶೇಂಗಾ ಬೀಜವನ್ನು ತಿಂದರೆ ಹೊಟ್ಟೆ ತುಂಬಿದ ಅನುಭವ ಆಗತ್ತೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಹಿಡಿ ನೆನೆಸಿಟ್ಟ ಶೇಂಗಾ ಬೀಜವನ್ನು ತಿಂದರೆ ಹೊಟ್ಟೆ ತುಂಬಿದ ಅನುಭೂತಿ ಪಡೆಯುತ್ತಾರೆ ಅದಾದಮೇಲೆ ಮತ್ತೆ ಬೇರೆ ಏನು ಜಾಸ್ತಿ ತಿಂಡಿ ತಿನ್ನೋಣ ಆಗಲ್ಲ ಸ್ವಲ್ಪ ತಿಂಡಿ ತಿನ್ನೋದರಿಂದ ಈ ರೀತಿಯಾಗಿ ನಾವು ಪಾಲಿಸುತ್ತಾ ಬಂದರೆ ನಾವು ನಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ನೆನೆಸಿಟ್ಟ ಶೇಂಗಾ ಬೀಜ ತಿನ್ನುವುದರಿಂದ ಡಯಾಬಿಟಿಸ್ ಇರುವವರಿಗೆ ತುಂಬಾ ಒಳ್ಳೆಯದು. ಇದು ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ. ಇದು ಕ್ಯಾನ್ಸರ್ ಬರದಂತೆ ಕೂಡ ತಡೆಯುತ್ತದೆ. ಜೊತೆಗೆ ಕೂದಲು ಬೆಳೆಯಲು ಸಹ ಅದ್ಭುತವಾಗಿ ಸಹಾಯ ಮಾಡುತ್ತದೆ. ಶೇಂಗಾ ಬೀಜ ರಾತ್ರಿ ಇಡೀ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಿಕ್ಕ ಪೀಸ್ ಬೆಲ್ಲದ ಜೊತೆಗೆ ತಿನ್ನಬೇಕು ಇದರಿಂದ ಹೆಚ್ಚು ಶಕ್ತಿ ಮತ್ತೆ ಬಳವನ್ನ ಪಡೆಯಬಹುದು. ಮಕ್ಕಳಿಗೆ ತುಂಬಾ ಹೊಟ್ಟೆ ಹಸಿವಾಗ್ತ ಇದ್ದು ಏನು ತಿನ್ನದೆ ಇದ್ದಾಗ ಹೀಗೆ ಬೆಲ್ಲ ಮತ್ತೆ ನೆನೆಸಿಟ್ಟ ಶೇಂಗಾ ಬೀಜ ಕೊಡಬೇಕು. ಡಯಾಬಿಟಿಸ್ ಇದ್ದರೆ ಬೆಲ್ಲವ್ತಿನ್ನಡೆ ಬರೀ ನೆನೆಸಿಟ್ಟ ಶೇಂಗಾ ಬೀಜ ಮಾತ್ರ ತಿನ್ನಬೇಕು.

ಇನ್ನು ಹೆಚ್ಚಾಗಿ ಇದು ಮಹಿಳೆಯರಿಗೆ ತುಂಬಾನೇ ಒಳ್ಳೆಯದು. ಇದರಿಂದ ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಮುಖದ ಮೇಲಿನ ನೆರಿಗೆಗಳು ಸಣ್ಣ ಕಲೆಗಳು ನಿವಾರಣೆ ಆಗಿ ಸುಂದರವಾಗಿ ಇಟ್ಟುಕೊಳ್ಳಬಹುದು. ಪ್ರತೀ ದಿನ ರಾತ್ರಿ ಶೇಂಗಾ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಪ್ರತಿ ದಿನವೂ ಆಗದೆ ಇದ್ದಲ್ಲಿ ವಾರಕ್ಕೆ ಎರಡು ದಿನ ಆದರೂ ಕೂಡ ತಿನ್ನಬಹುದು.

Leave a Comment

error: Content is protected !!