ಎಲ್ಲ ದುಃಖಕ್ಕೂ ಕಾರಣ ಏನು? ಗೌತಮ ಬುದ್ಧ ಹೇಳಿದ ಬದುಕಿನ ನಿಜವಾದ ಸತ್ಯವಿದು

ಗೌತಮ ಬುದ್ಧನನ್ನು ಏಷ್ಯಾದ ಬೆಳಕು ಎಂದು ಕರೆಯಲಾಗುತ್ತದೆ. ಇವನ ಸಿದ್ಧಾಂತಗಳು ಸತ್ಯದ ಆಧಾರವಾಗಿವೆ. ಇವನು ತನ್ನ ಶ್ರಮ ಮತ್ತು ತಪಸ್ಸಿನಿಂದ ಜ್ಞಾನೋದಯವನ್ನು ಪಡೆದಿದ್ದಾನೆ. ಹಾಗೆಯೇ ಇವನ ಸಿದ್ಧಾಂತಗಳು ಸತ್ಯದ ಆಧಾರವಾಗಿದೆ. ಇವನು ಮಾನವತ್ವದ ಸಂಕೇತವಾಗಿದ್ದಾನೆ. ನಾವು ಇಲ್ಲಿ ಬುದ್ಧನ ಒಂದು ಸಂದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಒಂದು ದಿನ ಒಂದು ನಗರದಲ್ಲಿ ಬುದ್ಧ ಪ್ರವಚನವನ್ನು ಮಾಡುತ್ತಿದ್ದ. ಮಾನವನ ದುಃಖಕ್ಕೆ ಕಾರಣವೆಂದರೆ ಅವನು ಬೇರೆಯವರ ಜೊತೆ ಬಂಧನಕ್ಕೆ ಒಳಗಾಗುವುದು. ಆಗ ದುಃಖ, ನೋವುಗಳು ಉಂಟಾಗುತ್ತದೆ. ಹೀಗೆ ಕೆಲವು ಮಾತುಗಳನ್ನು ಆಡಿ ಅಂದಿನ ಪ್ರವಚನ ಮುಗಿಸಿದ. ಹಾಗೆಯೇ ಮರುದಿನ ಒಬ್ಬ ಬಂದು ನಾನು ಎಲ್ಲ ಬಂಧನಗಳಿಂದ ಮುಕ್ತನಾಗಿ ನಿಮ್ಮ ಜೊತೆ ಇರಲು ಬಂದಿದ್ದೇನೆ ಎಂದು ಹೇಳುತ್ತಾನೆ. ಆಗ ಬುದ್ಧ ಯಾವ ಯಾವ ಬಂಧನದಿಂದ ಮುಕ್ತನಾಗಿದ್ದೀಯಾ ಎಂದು ಕೇಳುತ್ತಾನೆ. ಆಗ ಆ ವ್ಯಕ್ತಿ ಸಂಸಾರ ಬಂಧನದಿಂದ ಮುಕ್ತನಾಗಿದ್ದೇನೆ ಎಂದು ಹೇಳುತ್ತಾನೆ. ಆಗ ಬುದ್ಧ ಸರಿ ನೀನು ನಾಳೆ ಬೆಳಿಗ್ಗೆ ಏನು ಮಾಡಬೇಕು ಎಂದು ಹೇಳುತ್ತೇನೆ ಎಂದು ಹೇಳಿದ.

ಮರುದಿನ ಬುದ್ಧ ಪೂರ್ವದಲ್ಲಿ ಆ ಹಳ್ಳಿಯ ಕಡೆ ಹೋಗು. ಅಲ್ಲಿ ಒಬ್ಬ ಸ್ತ್ರೀ ಇದ್ದಾಳೆ. ಅವಳು ನಿನಗೆ ಕೊಡುವುದನ್ನು ತೆಗೆದುಕೊಂಡು ಬಾ ಎಂದು ಹೇಳಿದನು. ಹಾಗೆಯೇ ಹೊರಟಾಗ ಉರಿ ಬಿಸಿಲು ಇತ್ತು. ಆಗ ಆ ವ್ಯಕ್ತಿ ಮನೆಯಲ್ಲಿ ಇದ್ದಿದ್ದರೆ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಬಹುದಿತ್ತು ಎಂದು ಯೋಚಿಸಿದ. ಹಾಗೆಯೇ ಸ್ತ್ರೀಯ ಮನೆಗೆ ಹೋದಾಗ ಅವಳು ಬರಮಾಡಿಕೊಂಡಳು. ಅವಳು ತುಂಬಾ ತೇಜಸ್ವಿಯಾಗಿದ್ದಳು. ನಂತರ ಆ ವ್ಯಕ್ತಿಗೆ ಊಟ ಬಡಿಸಿದಳು. ಊಟ ಮಾಡುತ್ತಿರುವಾಗ ಸ್ತ್ರೀಯ ಕಾಲನ್ನು ನೋಡಿ ಎಷ್ಟು ಸುಂದರವಾಗಿದೆ ಎಂದುಕೊಂಡ. ಆದರೆ ಆ ಸ್ತ್ರೀ ಬುದ್ಧನ ಕಾಲು ಎಷ್ಟು ಸುಂದರವಾಗಿದೆ. ಬುದ್ಧನ ಕಾಲಿನಲ್ಲಿ ಸ್ಥಾನ ಸಿಕ್ಕರೆ ಬೇರೆಯವರ ಚರಣದ ಅವಶ್ಯಕತೆ ಇರುವುದಿಲ್ಲ ಎಂದಳು.

ಊಟ ಮುಗಿಸಿದ ನಂತರ ವಿಶ್ರಾಂತಿ ಪಡೆದಿದ್ದರೆ ಎಂದುಕೊಳ್ಳುತ್ತಿರುವಾಗ ಸ್ತ್ರೀ ಬಂದು ವಿಶ್ರಾಂತಿ ಪಡೆಯಿರಿ ನಾನು ಗಾಳಿ ಬೀಸುತ್ತೇನೆ ಎಂದಳು. ಆಗ ಅವಳನ್ನು ನೋಡಿ ಇವಳು ಎಷ್ಟು ಸುಂದರವಾಗಿದ್ದಾಳೆ ಇವಳು ನನ್ನ ಮಡದಿಯಾಗಿದ್ದರೆ ಎಂದು ಯೋಚಿಸಿದ. ಆಗ ಅವಳು ಶರೀರ ನಶ್ವರ. ಇದರಲ್ಲಿ ಮಾಂಸಖಂಡಗಳು, ಮೂಳೆ ಇರುವುದು ಅಷ್ಟೇ ಎಂದಳು. ಆಗ ಅವನು ನೀವು ಮನಸಿನ ಮಾತನ್ನು ಕೇಳಿಸಿಕೊಳ್ಳುತ್ತೀರಾ ಎಂದನು. ಆಗ ಇಲ್ಲಾ ಆದರೆ ಜೀವನದ ಭಾವನೆಗಳನ್ನು ಅರಿತಿದ್ದೇನೆ. ಬುದ್ಧನಿಂದ ಎಲ್ಲಾ ಕಲಿತಿದ್ದೇನೆ. ಜೀವನದಲ್ಲಿ ಆಸೆಗಳು ಮನುಷ್ಯನನ್ನು ದುಃಖಕ್ಕೆ ತಳ್ಳುತ್ತವೆ ಎಂದಳು. ಆ ವ್ಯಕ್ತಿ ಎಂತಹ ತಪ್ಪು ಮಾಡಿದೆ ಎಂದುಕೊಂಡ.

ಹಾಗೆಯೇ ನಂತರ ಬುದ್ಧನ ಬಳಿ ಬಂದು ನಾನು ತಪ್ಪು ಮಾಡಿದೆ ಎಂದ. ಆಗ ಬುದ್ಧ ನನಗೆ ತಿಳಿದಿತ್ತು ನೀನು ಹೀಗೆ ಮಾಡುತ್ತೀಯಾ ಎಂದು. ಬಹಿರ್ಮುಖಿಯಾಗಿ ಬಂಧನದಿಂದ ಮುಕ್ತ ಆಗುವುದು ಮುಖ್ಯವಲ್ಲ. ಅಂತರ್ಮುಖಿಯಾಗಿ ಬಂಧನದಿಂದ ಮುಕ್ತ ಆಗುವುದು ಮುಖ್ಯ. ಬಂಧನವು ಹೊರಗೆ ಇರುವುದಿಲ್ಲ. ಬಂಧನವು ಮನಸಿನ ಒಳಗೆ ಇರುತ್ತದೆ. ಕ್ರೋಧ ಅವರವರ ಮನಸ್ಸಿನಿಂದ ಉತ್ಪತ್ತಿಯಾಗುತ್ತದೆ. ಮನಸ್ಸಿನಿಂದಲೇ ಬೇರೆಯವರ ಜೊತೆ ಬಂಧನಕ್ಕೆ ಒಳಗಾಗುತ್ತಾರೆ. ಹಾಗೆಯೇ ಮನಸಿನ ಬಂಧನದ ಕಾರಣದಿಂದ ದುಃಖಕ್ಕೆ ಒಳಗಾಗುತ್ತಾರೆ. ಇದು ಬದುಕಿನ ನಿಜವಾದ ಸತ್ಯ ಎಂದು ಬುದ್ಧ ಹೇಳಿದನು.

Leave a Comment

error: Content is protected !!