ಈ ರೈತನ ಪ್ಲಾನ್ ನೋಡಿ ಫಿದಾ ಆದ್ರು ಜನ

ಬಹಳಷ್ಟು ಜನರು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ವ್ಯವಸಾಯದಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ದಾವಣಗೆರೆ ಜಿಲ್ಲೆಯ ರಾಘವ ಎನ್ನುವವರು ತಮ್ಮ ಜಮೀನಿನಲ್ಲಿ ಸಹಜ ಅಂದರೆ ನೈಸರ್ಗಿಕ ಪದ್ಧತಿಯ ಮೂಲಕ ಬೆಳೆ ಬೆಳೆಯುತ್ತಿದ್ದಾರೆ. ಅವರ ಪದ್ಧತಿಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮಾನವ ತನ್ನ ಪ್ರಾರಂಭದ ದಿನಗಳಲ್ಲಿ ದಟ್ಟವಾದ ಕಾಡುಗಳಲ್ಲಿ ಮರಗಳಲ್ಲಿ ಸಿಗುವ ಹಣ್ಣುಗಳನ್ನು ತಿಂದುಕೊಂಡು ಸುಖ ಜೀವನ ನಡೆಸುತ್ತಿದ್ದ. ಕಾಡುಗಳಲ್ಲಿರುವ ಮರಗಳಿಗೆ ಮಾನವ ಗೊಬ್ಬರ, ನೀರು ಹಾಕಿ ಬೆಳೆಸುತ್ತಿರಲಿಲ್ಲ, ಅವೆ ನೈಸರ್ಗಿಕವಾಗಿ ಬೆಳೆಯುತ್ತಿದ್ದವು. ನಂತರದ ದಿನಗಳಲ್ಲಿ ಮಾನವ ವ್ಯವಸಾಯ ಮಾಡಲು ಪ್ರಾರಂಭಿಸಿ ದವಸ ಧಾನ್ಯಗಳನ್ನು ಬೆಳೆದ, ತನಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದಿದ್ದನ್ನು ಮಾರಾಟ ಮಾಡುತ್ತಿದ್ದ. ನಂತರ ಮನುಷ್ಯನಿಗೆ ಆಸೆ ಹುಟ್ಟಿಕೊಂಡಿತು ಹೆಚ್ಚು ಇಳುವರಿ ಬಂದರೆ ಹೆಚ್ಚು ಹಣ ಸಿಗುತ್ತದೆ ಎಂಬ ದುರಾಸೆಯಿಂದ ಕೆಮಿಕಲ್ ಗೊಬ್ಬರವನ್ನು ಬಳಸತೊಡಗಿದನು, ಅದರೊಂದಿಗೆ ನಾನಾ ರೀತಿಯ ರೋಗಗಳನ್ನು ಆಹ್ವಾನಿಸಿದನು. ದಾವಣಗೆರೆ ಜಿಲ್ಲೆಯ ಮಲ್ಲನಾಯಕನ ಹಳ್ಳಿಯ ರಾಘವ ಎನ್ನುವವರು ಎಮ್ ಬಿಎ ಓದಿದ್ದಾರೆ. ಇವರಿಗೆ ಒಳ್ಳೆಯ ಕೆಲಸ ಸಿಕ್ಕಿತ್ತು, ಆದರೆ ಆ ಕೆಲಸಕ್ಕಿಂತ ವ್ಯವಸಾಯ ಮಾಡುವುದರಲ್ಲಿ ಸಂತೋಷ ಸಿಗುತ್ತದೆ ಎಂದು ಭಾವಿಸಿದ ರಾಘವ ಅವರು ಕೆಲಸ ಬಿಟ್ಟು ಊರಿಗೆ ಬಂದು ನಾನು ವ್ಯವಸಾಯ ಮಾಡುತ್ತೇನೆ ಎಂದು ಹೇಳಿದಾಗ ಪೋಷಕರು ಒಪ್ಪಲಿಲ್ಲ. ಆದರೆ ಪಟ್ಟು ಬಿಡದೆ ರಾಘವ ಅವರು ತಮ್ಮ ತಂದೆಗಿರುವ 21ಎಕರೆ ಜಮೀನಿನಲ್ಲಿ ಸಹಜ ವ್ಯವಸಾಯ ಅಂದರೆ ನ್ಯಾಚುರಲ್ ವ್ಯವಸಾಯ ಮಾಡಲು ಮುಂದಾದರು. ಗುಡ್ಡ, ಕಾಡುಗಳಲ್ಲಿ ಬೆಳೆಯುವ ಮರಗಿಡಗಳಿಗೆ ಯಾರೂ ಗೊಬ್ಬರ, ನೀರು ಹಾಕುವುದಿಲ್ಲ, ಅವುಗಳು ಬಿಡುವ ಹಣ್ಣುಗಳು ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು ಇದನ್ನು ಆಧಾರವಾಗಿಟ್ಟುಕೊಂಡು ರಾಘವ ಅವರು ತಮ್ಮ ಜಮೀನಿನಲ್ಲಿ ಸಹಜ ವ್ಯವಸಾಯ ಪ್ರಾರಂಭಿಸಿದರು. ಮೊದಲು ಮಣ್ಣನ್ನು ಫಲವತ್ತಾಗಿ ಮಾಡಿಕೊಂಡು, ಹತ್ತು ಹಲವು ಆರೋಗ್ಯಕರ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿದರು. ಮಾವು, ಸಪೋಟಾ, ಪಪ್ಪಾಯ, ದಾಳಿಂಬೆ, ಸೀತಾಫಲ, ನೇರಳೆ ಇತರೆ ಹಣ್ಣಿನ ಬೀಜಗಳನ್ನು ರಾಘವ ಅವರು ತಮ್ಮ ಜಮೀನಿನಲ್ಲಿ ಹಾಕಿದರು ಅಲ್ಲದೆ ಗೊಬ್ಬರ, ನೀರು ಹಾಕಲಿಲ್ಲ, ಅವು ತಮ್ಮಷ್ಟಕ್ಕೆ ತಾವೇ ಬೆಳೆಯುವ ವಾತಾವರಣವನ್ನು ಸೃಷ್ಟಿ ಮಾಡಿದರು. ಅವರು ಹಾಕಿದ ಗಿಡ, ಮರಗಳು ರುಚಿಕರವಾದ, ಆರೋಗ್ಯಕರವಾದ ಹಣ್ಣುಗಳನ್ನು ಬಿಡುತ್ತಿವೆ. ಮಾರುಕಟ್ಟೆಯಲ್ಲಿ ಹೆಚ್ಚು ಹಣವನ್ನು ಕೊಟ್ಟು ತಂದಿರುವ ಹಣ್ಣುಗಳಿಗಿಂತ ರಾಘವ ಅವರು ಬೆಳೆದ ಹಣ್ಣುಗಳು ರುಚಿಯಾಗಿರುತ್ತವೆ.

ರಾಘವ ಅವರು ವಿಶಿಷ್ಟ ವಿಧಾನದಲ್ಲಿ ಭತ್ತ ಬೆಳೆಯುತ್ತಾರೆ. ಅವರು ನಾಟಿ ಮಾಡುವುದಿಲ್ಲ, ಗೊಬ್ಬರ ಹಾಕುವುದಿಲ್ಲ, ಕಳೆ ತೆಗೆಯುವುದಿಲ್ಲ ಕೇವಲ ಕೈಯಿಂದ ಎರಚಿ ಬಿದ್ದ ಭತ್ತ 6ಅಡಿ ಎತ್ತರ ಬೆಳೆದಿದೆ, ಅದರಲ್ಲಿ ಬಿಟ್ಟಿರುವ ತೆನೆಯನ್ನು ನೋಡಿ ಸುತ್ತಮುತ್ತಲಿನ ಜನರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ನಮಗೂ ಭತ್ತದ ಬೀಜ ಕೊಡಿರಿ ಎಂದು ಸುತ್ತ ಮುತ್ತಲಿನ ರೈತರು ರಾಘವ ಅವರ ಬಳಿ ಕೇಳುತ್ತಿದ್ದಾರೆ. ತೋಟದಲ್ಲಿ ತಮ್ಮ ಮನೆಯನ್ನು ಮಣ್ಣಿನಿಂದ ಕಟ್ಟಿದ್ದಾರೆ, ಅವರು ತಮ್ಮ ಮನೆಯಲ್ಲಿ ಟಿವಿ, ಫ್ರಿಡ್ಜ್ ಇಟ್ಟುಕೊಂಡಿಲ್ಲ. ಹೀಗೆ ರಾಘವ ಅವರು ಸಹಜ ಕೃಷಿಯಿಂದ ರೋಗಗಳಿಂದ ಮುಕ್ತವಾಗಿ ತಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳೊಂದಿಗೆ ಹಾಯಾಗಿ ಪ್ರಕೃತಿಯ ಜೊತೆ ಜೀವನ ನಡೆಸುತ್ತಿದ್ದಾರೆ. ಈ ಮಾಹಿತಿಯನ್ನು ಯುವಕರು ತಿಳಿದುಕೊಳ್ಳಬೇಕು.

Leave a Comment

error: Content is protected !!