ಮಧುಮೇಹಿಗಳು ಕುಂಬಳಕಾಯಿ ತಿಂದ್ರೆ ಏನಾಗುತ್ತೆ ಓದಿ..

ಮಾವಿನಕಾಯಿ ತಿಂದು ಮಾವಿನ ಮರದ ಕೆಳಗೆ ಮಲಗುವುದಕ್ಕಿಂತ ಕುಂಬಳ ಕಾಯಿ ತಿಂದು ಕಷ್ಟ ಪಟ್ಟು ದುಡಿಯುವುದು ಒಳ್ಳೆಯದು ಎಂದು ಹಿಂದಿನಕಾಲದಿಂದ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಈ ಒಂದು ಕುಂಬಳ ಕಾಯಿಯಲ್ಲಿ ನಮ್ಮ ದೇಹಕ್ಕೆ ತುಂಬಾ ಲಾಭಗಳು ಸಿಗುತ್ತವೆ. ಕುಂಬಳ ಕಾಯಿಯಲ್ಲಿ ಇರುವ ಅಂಶ ನಮ್ಮ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಮಾತ್ರ ಅಲ್ಲದೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಸಹ ದೂರ ಮಾಡುತ್ತದೆ. ನಾವಿಲ್ಲಿ ಈ ಲೇಖನದ ಮೂಲಕ ಕುಂಬಳ ಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಕುಂಬಳಕಾಯಿ ನಮ್ಮ ಹೊಟ್ಟೆಗೆ ತುಂಬಾ ಲಾಭದಾಯಕ ಆಗಿದೆ. ಅದರ ಸೇವನೆಯಿಂದ ನಮ್ಮ ಹೊಟ್ಟೆಯನ್ನು ಆರೋಗ್ಯವಾಗಿ ಇರಿಸಲು ಸಹಾಯ ಮಾಡುತ್ತದೆ. ಕುಂಬಳಕಾಯಿಯಲ್ಲಿ ಡಯಟ್ರಿ ಫೈಬರ್ ಇರುವುದರಿಂದ ನಮ್ಮ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯನ್ನು ಇದು ದೂರ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ನಮ್ಮ ಅಸಿಡಿಟಿ ಮತ್ತು ಉರಿಯನ್ನು ಸಹ ಕಡಿಮೆ ಮಾಡುತ್ತದೆ. ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಂಶ ಇರುವ ಕಾರಣ ಇದು ಇನ್ಸುಲಿನ್ ಗೆ ಸಮವಾಗಿ ಇರುತ್ತದೆ. ಅಲ್ಲದೆ ಜಾಸ್ತಿ ಆಗಿರುವ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ. ಡಯಾಬಿಟಿಸ್ ರೋಗಿಗಳು ವಾರಕ್ಕೆ ಎರಡು ಬಾರಿ ಆದರೂ ಕುಂಬಳ ಕಾಯಿಯನ್ನು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಕುಂಬಳಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ತುಂಬಾ ಇರುತ್ತವೆ. ಇದು ನಮ್ಮ ದೇಹದಲ್ಲಿ ಇರುವ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ನಮ್ಮ ಡಯೆಟ್ ಲಿಸ್ಟ್ ನಲ್ಲಿ ಹೆಚ್ಚು ಹೆಚ್ಚು ಕುಂಬಳ ಕಾಯಿಯ ಪಲ್ಯ ಹಾಗೂ ಜ್ಯೂಸ್ ಗಳನ್ನು ಸೇರಿಸಿಕೊಂಡರೆ ಒಳ್ಳೆಯದು. ಕುಂಬಳಕಾಯಿ ಸೇವನೆಯಿಂದ ನಾವು ನಮ್ಮ ದೇಹದ ಒತ್ತಡ, ಕೋಪ, ಖಿನ್ನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದರ ಹೊರತು ನಮ್ಮ ದೇಹಕ್ಕೆ ತುಂಬಾ ಶಕ್ತಿಯನ್ನು ಸಹ ಒದಗಿಸುತ್ತದೆ. ಕುಂಬಳ ಕಾಯಿ ನಮ್ಮ ದೇಹದಲ್ಲಿ ಇರುವ ಕೊಬ್ಬಿನ ಅಂಶವನ್ನು ಸಹ ನಿಯಂತ್ರಣ ಮಾಡುತ್ತದೆ. ನಮಗೆ ಹೃದಯ ಸಂಬಂಧಿತ ಸಮಸ್ಯೆಗಳು ಇದ್ದರೆ ಇದರ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭದಾಯಕ ಆಗಿ ಇರುತ್ತದೆ. ಆದ್ದರಿಂದ ಕುಂಬಳಕಾಯಿ ಸೇವನೆ ಬಹಳ ಒಳ್ಳೆಯದು.

ಕುಂಬಳ ಕಾಯಿಯಲ್ಲಿ ಕ್ಯಾಲೋರಿ ಕಡಿಮೆ ಹಾಗೂ ಫೈಬರ್ ಜಾಸ್ತಿ ಇರುತ್ತದೆ. ಹಾಗಾಗಿ ಇದನ್ನ ಸೇವಿಸುವುದರಿಂದ ಪದೇ ಪದೇ ನಮಗೆ ಹೊಟ್ಟೆ ಹಸಿಯುವುದಿಲ್ಲ. ಇದರಿಂದಾಗಿ ಅಧಿಕವಾಗಿ ಆಹಾರ ಸೇವನೆ ಮಾಡಲು ಇದು ಅವಕಾಶ ನೀಡುವುದಿಲ್ಲ. ಹಾಗಾಗಿ ನಾವು ನ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಕುಂಬಳ ಕಾಯಿ ಸಹಾಯ ಮಾಡುತ್ತದೆ. ಇದರಲ್ಲಿ “ವಿಟಮಿನ್ ಎ” ಅಂಶ ಇರುವುದರಿಂದ ಇದು ನಮ್ಮ ಕಣ್ಣಿಗೆ ತುಂಬಾ ಒಳ್ಳೆಯದು. ಪ್ರತಿದಿನ ಒಂದು ಕಪ್ ಕುಂಬಳ ಕಾಯಿ ಸೇವಿಸುವುದರಿಂದ ಕೆಲವೇ ದಿನಗಳಲ್ಲಿ ನಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗಿ ಚುರುಕು ಆಗುತ್ತದೆ. ಕುಂಬಳ ಕಾಯಿಯನ್ನು ತಿನ್ನೋಕೆ ತುಂಬಾ ಜನ ಇಷ್ಟ ಪಡಲ್ಲ ಆದರೆ ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಪ್ರತೀ ದಿನ ಆಗದೆ ಇದ್ದರೂ ವಾರದಲ್ಲಿ ಎರಡು ದಿನವಾದರೂ ನಿಮ್ಮ ಅಡುಗೆಯಲ್ಲಿ ಆರೋಗ್ಯಕ್ಕೆ ಪ್ರಯೋಜನ ಆಗುವ ಕುಂಬಳ ಕಾಯಿ ಬಳಕೆ ಇರಲಿ.

Leave a Comment

error: Content is protected !!