ಭೂಮಿಯ ಮೇಲಿನ ಕೈಲಾಸ ಶ್ರೀ ಕ್ಷೇತ್ರ ಗೋಕರ್ಣದ ಬಗ್ಗೆ ನೀವು ತಿಳಿಯದ ಕುತೂಹಲಕಾರಿ ವಿಷಯ

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಪ್ರಸಿದ್ಧಿ ಕ್ಷೇತ್ರ ಗೋಕರ್ಣ. ಇದು ಅಘನಾಶಿನಿ ಮತ್ತು ಗಂಗಾವತಿ ನದಿಗಳ ಮಧ್ಯದಲ್ಲಿ ಗೋವಿನ ಕಿವಿಯ ಆಕಾರದಲ್ಲಿ ರುವುದರಿಂದ ಗೋಕರ್ಣ ಎನ್ನಲಾಗಿದೆ ಭಾರತ ದೇಶದಲ್ಲಿ ಅತ್ಯಂತ ಶೈವ ಕ್ಷೇತ್ರಗಳಲ್ಲಿ ಗೋಕರ್ಣ ಮುಂಚೂಣಿಯಲ್ಲಿದೆ. ಗೋಕರ್ಣ, ಕಾಶಿ, ರಾಮೇಶ್ವರಗಳು ಭಾರತದ ತ್ರಿಸ್ಥಳ ಶೈವ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿದೆ.

ಪೌರಾಣಿಕ ಹಿನ್ನೆಲೆ:-ರಾವಣ ಮತ್ತು ಕೈಕಸೆಯು ಶಿವನ ಪರಂಭಕ್ತರು. ನದಿಯಲ್ಲಿ ಸ್ನಾನ ಮಾಡಿ ಮರಳಿನಲ್ಲಿ ಶಿವಲಿಂಗವನ್ನು ಮಾಡಿ ಪೂಜಿಸುತ್ತಿದಾಗ ಅಲೆಯು ಬಂದು ಶಿವಲಿಂಗ ಕೊಚ್ಚಿ ಹೋಯಿತು. ಇದರಿಂದ ನೋವಾಗಿ ರಾವಣ ಶಿವನ ಆತ್ಮಲಿಂಗಕ್ಕಾಗಿ ತಪಸ್ನನ್ನು ಮಾಡಿದಾಗ ಶಿವನು ಪ್ರತ್ಯಕ್ಷ್ಯನಾಗಿ ಕೋರಿಕೆಯನ್ನು ಕೇಳಿದಾಗ ಆತ್ಮಲಿಂಗವನ್ನು ನೀಡುವಂತೆ ಹೇಳಿದನು.ಆಗ ಈ ಆತ್ಮಲಿಂಗವನ್ನು ಲಂಕೆಯವರೆಗೆ ಹೋಗುವ ತನಕ ಎಲ್ಲೂ ಕೆಳಗಿಡಬಾರದೆಂಬ ನಿಬಂಧನೆಯೊಂದಿಗೆ ವರವನ್ನು ನೀಡಿದನು.

ಈ ವರದಿಂದ ಮುಂದೆ ದೊಡ್ಡ ಕಂಟಕವೆಂದು ತಿಳಿದು ದೇವಾನುದೇವತೆಗಳು ಉಪಾಯ ಮಾಡಿದರು. ಗಣಪತಿಯು ಬ್ರಹ್ಮಚಾರಿಯ ವೇಷವನ್ನು ಧರಿಸಿ ಭೂಮಿಗೆ ಬಂದನು. ಸಾಯಂಕಾಲದ ಹೊತ್ತಿಗೆ ರಾವಣನು ಲಿಂಗವನ್ನು ಯಾರ ಹತ್ತಿರವಾದರೂ ನೀಡಿ ಸಂಧ್ಯಾವಂದನೆ ಮಾಡಬೇಕೆಂದುಕೊಂಡಾಗ ಗಣಪತಿಯ ಹತ್ತಿರ ನೀಡುತ್ತಾನೆ. ಆಗ ಗಣಪತಿಯು ನಾನು 3ಬಾರಿ ಕರೆದಾಗ ಬರದಿದ್ದರೆ ಈ ಆತ್ಮಲಿಂಗವನ್ನು ನೆಲಕ್ಕೆ ಇಡುತ್ತೇನೆ ಎಂದು ಹೇಳುತ್ತಾನೆ. ಗಣಪತಿಯು 3ಬಾರಿ ಕರೆದರೂ ರಾವಣ ಬರದ ಕಾರಣ ಆತ್ಮಲಿಂಗವನ್ನ ನೆಲಕ್ಕಿಡುತ್ತಾನೆ. ಆದ್ದರಿಂದ ಆತ್ಮಲಿಂಗವಿರುವ ಆ ಸ್ಥಳವೇ ಗೋಕರ್ಣ.

ಗೋಕರ್ಣವು ಹತ್ತಿರದಲ್ಲಿಯೇ ಬೀಚ್ ಹೊಂದಿದ್ದು ನೋಡಲು ಆಕರ್ಷಣೀಯವಾಗಿದೆ. ಶಿವರಾತ್ರಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ. ಸಹಸ್ರಾರು ಭಕ್ತಾದಿಗಳು ಬಂದು ಆಶೀರ್ವಾದವನ್ನು ಪಡೆಯುತ್ತಾರೆ

Leave a Comment

error: Content is protected !!