ಅತಿಯಾದ ತಲೆನೋವಿನಿಂದ ತಕ್ಷಣವೇ ಪರಿಹಾರ ನೀಡುವ ಶುಂಠಿ

ತಲೆನೋವು ಸಮಸ್ಯೆ ಅನ್ನೋದು ಪ್ರತಿಯೊಬ್ಬರಿಗೂ ಕಾಡುವಂತ ಸಾಮಾನ್ಯ ಸಮಸ್ಯೆಯಾಗಿದೆ, ತಲೆನೋವು ಅನ್ನೋದು ಒಂದೇ ಕಾರಣಕ್ಕೆ ಬರೋದಿಲ್ಲ ಆದ್ರೆ ಈ ತಲೆನೋವು ಬಂದ್ರೆ ನೆಮ್ಮದಿಯಿಲ್ಲದಂತೆ ಮಾಡುತ್ತದೆ, ಯಾವಾಗ ಇದರಿಂದ ಮುಕ್ತಿ ಸಿಗುತ್ತದೆ ಅನ್ನೋದನ್ನ ಕಾಯುತ್ತೇವೆ. ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಪ್ರತಿದಿನ ಔಷಧಿ ಮಾತ್ರೆಗಳನ್ನು ಸೇವಿಸುವ ಬದಲು ಈ ನೈಸರ್ಗಿಕ ಔಷಧಿ ಗುಣಗಳನ್ನು ಹೊಂದಿರುವಂತ ಇವುಗಳನ್ನು ಬಳಸಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ತಕ್ಷಣವೇ ಗುಣ ಮುಖರಾಗಬಹುದಾಗಿದೆ.

ಶೀತ ತಲೆನೋವು ಜ್ವರಗಳಿಂದ ಉಂಟಾಗುವಂತ ತಲೆನೋವು ಸಮಸ್ಯೆಗೆ ಒಂದಿಷ್ಟು ಮನೆಮದ್ದುಗಳು ಇಲ್ಲಿವೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಒಣ ಶುಂಠಿ ಅಥವಾ ಹಸಿ ಶುಂಠಿಯಾ ಚೂರನ್ನು ನೀರಿನಲ್ಲಿ ಕುದಿಸಿ ಅದರ ಹಬೆಯನ್ನು ಹಿಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇನ್ನು ಒಂದೆರಡು ಚೂರು ಶುಂಠಿಯನ್ನು ಸಕ್ಕರೆಯೊಡನೆ ಬೆರಸಿ ಅಗೆಯುವುದರಿಂದಲೂ ತಲೆನೋವು ಕಡಿಮೆಯಾಗುವುದು.

ಸಮಪ್ರಮಾಣದಲ್ಲಿ ಶುಂಠಿಯ ರಸ ಹಾಗೂ ನಿಂಬೆಯ ರಸವನ್ನು ಬೆರಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುವುದರಿಂದ ತಲೆನೋವು ಕಡಿಮೆ ಮಾಡಿಕೊಳ್ಳಬಹುದು. ತಲೆನೋವಿಗೆ ಮತ್ತೊಂದು ಪರಿಹಾರ ನೀಡುವ ವಿಧಾನ ಅಂದರೆ ಪುದಿನ ಸೊಪ್ಪನ್ನು ಅರೆದು ಹಣೆಯ ಮೇಲೆ ಲೇಪಿಸುವುದರಿಂದ ತಲೆನೋವು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ. ಪುದಿನ ಸೊಪ್ಪಿನ ಜೊತೆ ಕೊತ್ತಂಬರಿ ಸೊಪ್ಪನ್ನು ಉಪಯೋಗಿಸುವುದರಿಂದ ಸಹ ತಲೆನೋವು ನಿವಾರಣೆಯಲ್ಲಿ ಉತ್ತಮ ಪ್ರತಿಫಲ ಕಾಣಬಹುದು.

ಒಂದು ಲೋಟ ಬಿಸಿನೀರಿಗೆ ಕೆಲವು ತುಳಸಿ ಎಲೆಗಳನ್ನು ಹಾಕಿ ಸ್ವಲ್ಪ ಹೊತ್ತು ಹಾಗೆ ಇಡಿ. ನಂತರ ಅದನ್ನು ನಿಧಾನವಾಗಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುವುದು. ಇನ್ನು ಕುದಿಯುತ್ತಿರುವ ನೀರಿಗೆ ನೀಲಗಿರಿ ತೈಲವನ್ನು ಬೆರಸಿ ಅದರ ಹಬೆಯನ್ನು ಉಸಿರಿನೊಂದಿಗೆ ಎಳೆದುಕೊಳ್ಳುವುದರಿಂದ ತಲೆನೋವಿನಿಂದ ಆರಾಮ ದೊರೆಯುತ್ತದೆ. ಈ ಮೇಲೆ ತಿಳಿಸಿದ ವಿಧಾನಗಳಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಅನುಸರಿಸಿ ತಲೆನೋವಿನಿಂದ ಮುಕ್ತಿ ಪಡೆದುಕೊಳ್ಳಬಹುದಾಗಿದೆ.

Leave a Comment

error: Content is protected !!