ಸಿಲೆಂಡರ್ ಗ್ಯಾಸ್ ಬೇಗನೆ ಖಾಲಿಯಾಗದಂತೆ ಮಾಡುವ ಸುಲಭ ವಿಧಾನ

ಹಿಂದಿನ ಕಾಲದಲ್ಲಿ ಅಡುಗೆ ಕೆಲಸಕ್ಕೆ ಅಥವಾ ನೀರು ಕಾಯಿಸಲು ಎಲ್ಲದಕ್ಕೂ ಸಹ ಕಟ್ಟಿಗೆಯ ಒಲೆಯನ್ನು ಬಳಸುತ್ತಿದ್ದರು. ಕ್ರಮೇಣವಾಗಿ ಕಾಲ ಕಳೆಯುತ್ತಾ ಹೋದಂತೆ, ಆಧುನಿಕತೆಯ ಕಾರಣದಿಂದಾಗಿ ಕಟ್ಟಿಗೆಯ ಒಲೆಗಳು ಮಾಯವಾಗಿ ಗ್ಯಾಸ್ ಸ್ಟೋವ್ ಬಂದಿದೆ. ಎಲ್ಲೋ ಹಳ್ಳಿಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಟ್ಟಿಗೆ ಒಲೆಯನ್ನು ಕಾಣಬಹುದು ಅಷ್ಟೇ. ಇಂದು ಪ್ರತಿಯೊಬ್ಬರ ಮನೆಯಲ್ಲೂ ಸಹ ಸಿಲಿಂಡರ್ ಗ್ಯಾಸ್ ಇದ್ದೆ ಇದೆ. ಸಿಲಿಂಡರ್ ಗ್ಯಾಸ್ ಇಲ್ಲದ ಮನೆಯಿಲ್ಲ . ಆದರೆ ಇತ್ತೀಚಿನ ದಿನಗಳಲ್ಲಿ ಈ ಸಿಲಿಂಡರ್ ಗ್ಯಾಸ್ ಗಳ ಬೆಲೆಯೂ ಸಹ ತೀರಾ ಹೆಚ್ಚಾಗಿದೆ. ಹಾಗಾಗಿ ಇತಮಿತವಾಗಿ ನಾವು ಗ್ಯಾಸ್ ಬಳಕೆ ಮಾಡಬೇಕು. ಸರಿಯಾಗಿ ಬಳಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು. ಹಾಗಾಗಿ ಇವತ್ತು ಸಿಲಿಂಡರ್ ಗ್ಯಾಸ್ ಅನ್ನು ಕಡಿಮೆಯಾಗಿ ಇತಮಿತವಾಗಿ ಹೇಗೆ ಬಳಸೋದು ಅಂತ ಕೆಲವೊಂದು ಟಿಪ್ಸ್ ನೋಡೋಣ.

ಕೆಲವು ಮನೆಯಲ್ಲಿ ಮಹಿಳೆಯರು ಅಡುಗೆ ಮಾಡ್ತಾ ಮಾಡ್ತಾ ಕೆಲವೊಂದು ಸಣ್ಣ ಸಣ್ಣ ತಪ್ಪುಗಳನ್ನು ಮಾಡ್ತಾರೆ ಇದರಿಂದ ಅನಾವಶ್ಯಕವಾಗಿ ಗ್ಯಾಸ್ ವ್ಯರ್ಥ ಆಗ್ತಾ ಇರತ್ತೆ. ಇದರಿಂದ ಬಹಳ ಬೇಗ ಸಿಲಿಂಡರ್ ಖಾಲಿ ಆಗತ್ತೆ. ಆದ್ರೆ ನಮಗೆ ಈ ಸಿಲಿಂಡರ್ ಗ್ಯಾಸ್ ಬಿಟ್ರೆ ಅಡುಗೆ ಮಾಡೋಕೆ ಬೇರೆ ದಾರಿ ಇರಲ್ಲ. ಮೈಕ್ರೋ ವೋವೆನ್ ಇದ್ರು ಕೂಡ ಅದರ ಬಳಕೆ ಕಡಿಮೆಯೇ. ಹಾಗಾಗಿ ಹೆಚ್ಚುತ್ತಿರುವ ಸಿಲಿಂಡರ್ ಬೇಕೆಯನ್ನ ಗಮನದಲ್ಲಿ ಇಟ್ಟುಕೊಂಡು ನಾವು ಬೇಗ ಬೇಗ ಅಡುಗೆಯನ್ನು ಮುಗಿಸಿಕೊಳ್ಳಬೇಕು. ಈ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಂಡರೆ ನಾವು ಬಹಳ ಬೇಗ ಇತ ಮಿತವಾಗಿ ಗ್ಯಾಸ್ ಬಳಸಬಹುದು ಹಾಗೂ ಬೇಗ ಅಡುಗೆ ಕೂಡ ಮುಗಿಸಬಹುದು.

ಮೊದಲು ನಾವು ನಮ್ಮ ಗ್ಯಾಸ್ ಸ್ಟೋವ್ ಅನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು ಹಾಗೂ ನಾವು ಏನು ಅಡುಗೆ ಮಾಡಬೇಕು ಅಂತ ಅನಕೊಂಡಿರುತ್ತಿವೋ ಅದಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಎದುರು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಗ್ಯಾಸ್ ಬಳಕೆ ಕಡಿಮೆ ಆಗುತ್ತೆ ಹಾಗೂ ಬೇಗ ಅಡುಗೆ ಕೂಡ ಮುಗಿಸಬಹುದು. ಒಮ್ಮೆ ಸ್ಟೋವ್ ಹಚ್ಚೋದು ಆಫ್ ಮಾಡೋದು ಮತ್ತೆ ಹಚ್ಚೋದು ಆಫ್ ಮಾಡೋದು ಹೀಗೆ ಮಾಡುವುದರಿಂದ ಗ್ಯಾಸ್ ಬೇಗ ಖಾಲಿ ಆಗತ್ತೆ. ಒಮ್ಮೆ ಗ್ಯಾಸ್ ಸ್ಟೋವ್ ಆನ್ ಮಾಡಿದಾಗಲೇ ನಮಗೆ ಏನೇನು ಬೇಕೋ ಎಲ್ಲವನ್ನೂ ಮಾಡಿ ಮುಗಿಸಿದ ನಂತರ ಒಂದ್ ಮಾಡಬೇಕು ಹೀಗೆ ಮಾಡುವುದರಿಂದ ಗ್ಯಾಸ್ ಉಳಿಯತ್ತೆ.

ಆದಷ್ಟು ಸಣ್ಣ ಪಾತ್ರೆಗಳನ್ನು ಬಳಸಬೇಕು ಅಂದ್ರೆ ಗ್ಯಾಸ್ ಸ್ಟೋವ್ ಗೆ ಹೊಂದುವಂತಹ ಪಾತ್ರೆಗಳನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಸಣ್ಣ ಫ್ಲೇಮ್ ಅಲ್ಲಿ ಉರಿ ಅಲ್ಲೇ ಸುತ್ತಲೂ ಇರುವುದರಿಂದ ಕಡಿಮೆ ಗ್ಯಾಸ್ ಬಳಕೆ ಆದಂತೆ ಆಗತ್ತೆ. ಬೇಳೆ ಕಾಳುಗಳನ್ನು ಗಡ್ಡೆಗಳನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಬಳಸುವುದು ಸೂಕ್ತ. ಇದರಿಂದ ಬೇಗ ಬೇಳೆ ಕಾಳುಗಳು ತರಕಾರಿಗು ಬೆಯುತ್ತವೆ ಗ್ಯಾಸ್ ಉಳಿತಾಯ ಆಗುತ್ತದೆ. ಇನ್ನು ದೊಡ್ಡ ಕುಕ್ಕರ್ ಬಳಸುತ್ತಾ ಇದ್ದರೆ, ಅಣ್ಣಾ, ಬೇಳೆ, ತರಕಾರಿ ಎಲ್ಲವನ್ನೂ ಒಟ್ಟಿಗೆ ಬೇರೆ ಬೇರೆ ಪಾತ್ರೆಗಳಿಗೆ ಹಾಕಿ ಬೆಯಿಸಬಹುದು.

ಇನ್ನೊಂದು ಟಿಪ್ ಏನಪ್ಪಾ ಅಂದ್ರೆ, ಕೆಲವೊಂದು ಬಾರಿ ನಾವು ಕೈ ತಪ್ಪಿ ತರಕಾರಿ ಅಥವಾ ಬೇಳೆ ಬೇಯಿಸಲು ಇಟ್ಟಾಗ ಹೆಚ್ಚು ನೀರು ಹಾಕಿ, ನೀರು ಹೆಚ್ಚಾಯ್ತು ಅಂತ ಮತ್ತೆ ಕುದಿಸೋಕೆ ಇಡ್ತಿವಿ. ಹೀಗೆ ಕುದಿಸೂಕೆ ಇಡುವುದರಿಂದ ಒಂದು, ತರಕಾರಿಗಳಲ್ಲಿ ಇರುವಂತಹ ಪೋಷಕಾಂಶಗಳು ಆವಿ ಆಗಿ ಹೋಗತ್ತೆ ಇನ್ನೊಂದು ಸಮಯ ವ್ಯರ್ಥ ಹಾಗೆ ಗ್ಯಾಸ್ ಕೂಡ ಖಾಲಿ ಆಗ್ತಾ ಇರತ್ತೆ. ಇನ್ನು ದ್ರವ ಪದಾರ್ಥಗಳನ್ನು ಮಾಡುವಾಗ ಅದು ಬೇಗ ಕುದಿಯೋಕೆ ಅಂತೇಕೆ ಒಂದು ಮುಚ್ಚಳ ಮುಚ್ಚಿ ಇಡಬೇಕು. ಬೇಳೆ ಕಾಳುಗಳನ್ನು ನೆನೆಸಿಟ್ಟು ಬೇಯಿಸುವುದರಿಂದ ಸಹ ಗ್ಯಾಸ್ ಉಳಿತಾಯ ಮಾಡಬಹುದು. ಈ ಎಲ್ಲಾ ಟಿಪ್ಸ್ ಗಳು ಬಳಸಿಕೊಂಡು ಅತಿಯಾಗಿ ಗ್ಯಾಸ್ ಖಾಲಿ ಆಗುವುದನ್ನು ತಡೆಯಬಹುದು.

Leave a Comment

error: Content is protected !!