4 ವರ್ಷಗಳಿಂದ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿ ಕೈ ಕೊಟ್ಳು ಅಂತ ಊಟ ತಿಂಡಿ ಬಿಟ್ಟು ನಂತರ ಪ್ರಾಣವನ್ನೇ ಬಿಟ್ಟ ಯುವಕ!
ಪ್ರೀತ್ಸೋದ್ ತಪ್ಪಾ ಅಂತ ರವಿಚಂದ್ರನ್ ದಶಕಗಳಾ ಹೊಂದೆಯೇ ಕೇಳಿದ್ರು. ಆದ್ರೆ ಇದಿನ್ಣೂ ಜನರಿಗೆ ಅರ್ಥವಾಗಿಲ್ಲ ಬಿಡಿ. ಪ್ರೀತಿ ಮಾಡಿದ್ರೆ ಜಗಕ್ಕೆ ಹೆದರಬಾರದು ಅಂತ ಪ್ರೇಮಿಗಳಿಗೆ ಕೆಲವೊಮ್ಮೆ ಅರ್ಥವಾಗಲ್ಲ. ಸಾಕಷ್ಟು ವರ್ಷ ಪ್ರೀತಿಸಿ ಕೊನೆಗೆ ಮನೆಯವರು ಬೇಏಡ ಅಂತ ಹಿಂದೆ ಸರಿತಾರೆ. ಆಗ ಆಗುವ ಅನಾಹುತ ಊಹಿಸಿಕೊಳ್ಳುವುದಕ್ಕೂ ಕಷ್ಟ. ಹೀಗೆ ಪ್ರೀತಿಸಿದ ಹುಡುಗಿ ಕೈ ಕೊಟ್ಳು ಅಂತ ಇಲ್ಲೊಬ್ಬ ಪ್ರೇಮಿ ಆತ್ಮಹ’ತ್ಯೆಯನ್ನೇ ಮಾಡಿಕೊಂಡಿದ್ದಾನೆ.
ಈ ಘಟನೆ ನಡೆದಿದ್ದು ಬೆಟ್ಟದಕೂರ್ಲಿ ಎಂಬ ಗ್ರಾಮದಲ್ಲಿ. ಪ್ರಾಣ ಬಿಟ್ಟು ಶರಣಾದ ಯುವಕ ದಿಲೀಪ್. ದಿಲೀಪ್ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಯುವಕ. ದಿಲೀಪ್ ಹಾಗೂ ಆತನ ಮನೆಯವರು ಬೆಂಗಳೂರಿನಲ್ಲಿ ಸಾಕಷ್ಟು ಸಮಯದಿಂದ ನೆಲೆಯೂರಿದ್ದು, ಇಲ್ಲಿಯೇ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡಿ ಝೀವನ ಸಾಗಿಸುತ್ತಿದ್ದರು. ದಿಲೀಪ್ ಕೆಲಸ ಮಾಡುವ ಗಾರ್ಮೆಂಟ್ಸ್ ನಲ್ಲಿಯೇ ಕೆಲಸ ಮಾಡುತ್ತಿದ್ದ ಹುಡುಗಿಯೊಂದಿಗೆ ದಿಲೀಪ್ ನ ಪ್ರೇಮ್ ಕಹಾನಿ ಆರಂಭವಾಗಿತ್ತು.
ದಿಲೀಪ್ ಪ್ರೀತಿಸುತ್ತಿದ್ದ ಹುಡುಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದವಳು. ಇಂದು ಜೀವ ಕಳೆದುಕೊಂಡ ದಿಲೀಪ್ ಹಾಗೂ ಆ ಯುವತಿ ಸುಮಾರು ನಾಲ್ಕೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಬೇಕು ಎಂದು ಅಂದುಕೊಂಡಿದ್ದರೂ ಮನೆಯವರು ಒಪ್ಪದಿದ್ದರೆ ಎನ್ನುವ ಕಾರಣಕ್ಕೆ ಯಾರ ಬಳಿಯು ವಿಷಯವನ್ನು ಹೇಳದೆ ಮುಚ್ಚಿಟ್ಟಿದ್ದರು.
ಆದರೆ ಇತ್ತೀಚಿಗೆ ಮನೆಯವರು ನಮ್ಮ ಪ್ರೀತಿಯನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಹುಡುಗಿ ಹಿಂದೆ ಸರಿದಿದ್ದಾಳೆ. ಇದರಿಂದ ನೊಂದ ದಿಲೀಪ್ ಆತ್ಮಹ’ತ್ಯೆ ಮಾಡಿಕೊಂಡಿದ್ದಾರೆ. ದಿಲೀಪ್ ಸಾಯುವುದಕ್ಕೂ ಮುನ್ನ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದರು. ತನ್ನ ಹುಡುಗಿಯ ಗ್ರಾಮವಾದ ಬೆಟ್ಟದ ಕುರ್ಲಿಯಲ್ಲಿಯೇ ವಿಷ ಕುಡಿದು ದಿಲೀಪ್ ಪ್ರಾಣ ಕಳೆದುಕೊಂಡಿದ್ದಾರೆ.
ತನ್ನ ಕೊನೆ ಗಳಿಗೆಯಲ್ಲಿ ವಿಡಿಯೋವನ್ನು ಮಾಡಿರುವ ದಿಲೀಪ್ ಆ ವಿಡಿಯೋದಲ್ಲಿ ತನ್ನನ್ನು ನಾಲ್ಕೂವರೆ ವರ್ಷಗಳಿಂದ ಪ್ರೀತಿಸಿದ ಹುಡುಗಿ ನನಗೆ ಮೋಸ ಮಾಡಿದ್ದಾಳೆ ನನ್ನ ಸಾ’ವಿಗೆ ಆಕೆ ಹಾಗೂ ಆಕೆಯ ಕುಟುಂಬದವರೇ ಕಾರಣ ಎಂದು ಹೇಳಿದ್ದಾರೆ. ನಾನು ಕಳೆದ ನಾಲ್ಕುವರೆ ವರ್ಷಗಳಿಂದ ಎಲ್ಲರನ್ನೂ ಆಕೆಗೋಸ್ಕರ ದೂರ ಮಾಡಿಕೊಂಡೆ. ಆದರೆ ಈಗ ನನಗೆ ಮೋಸವಾಗಿದೆ ಒಂದು ತಿಂಗಳಿನಿಂದ ಸರಿಯಾಗಿ ಊಟ ನಿದ್ರೆ ಮಾಡಿಲ್ಲ. ನನಗೆ ಈ ನೋವನ್ನು ಸಹಿಸಲು ಸಾಧ್ಯವಿಲ್ಲ ಎಂದು ವೀಡಿಯೋದಲ್ಲಿ ದಿಲೀಪ್ ನೊಂದುಕೊಂಡೆ ಹೇಳಿದ್ದಾರೆ. ಇನ್ನು ಸೊರಬ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಈಗಾಗಲೇ ದಾಖಲಾಗಿದ್ದು ಯುವತಿ ಹಾಗೂ ಅವರ ಕುಟುಂಬದವರ ವಿಚಾರಣೆ ನಡೆಯುತ್ತಿದೆ.