ಮೊಟ್ಟೆ ಮಾಂಸಹಾರಿಯೋ ಸಸ್ಯಹಾರಿಯೋ ಇಲ್ಲಿದೆ ವೈಜ್ಞಾನಿಕ ಉತ್ತರ

ಮೊಟ್ಟೆ ಮಾಂಸಹಾರಿನಾ, ಸಸ್ಯಹಾರಿನಾ ಎಂಬ ಬಗ್ಗೆ ವಾದ ಪ್ರತಿವಾದ ನಡೆಯುತ್ತಲೇ ಇದೆ. ಅಲ್ಲದೆ ಮೊಟ್ಟೆ ಮೊದಲ ಕೋಳಿ ಮೊದಲ ಎನ್ನುವ ಜಿಜ್ಞಾಸೆಯ ಪ್ರಶ್ನೆಯೂ ಎಲ್ಲರಲ್ಲೂ ಕಾಡದೆ ಇರೋದಿಲ್ಲ.
ಹಾಗಾದರೆ ಈ ಮೊಟ್ಟೆಯು ಮಾಂಸಾಹಾರಿ ಅಥವಾ ಸಸ್ಯಹಾರಿನಾ ಅನ್ನೋದ್ದಕ್ಕೆ ಇರುವ ವೈಜ್ಞಾನಿಕತೆ ಹಾಗೂ ಸಿದ್ಧಾಂತಗಳೇನು ಎಂಬುದನ್ನು ತಿಳಿಯೋಣ.

ಮೊಟ್ಟೆ ತಿನ್ನುವಂತಹ ಸಸ್ಯಹಾರಿಗಳನ್ನ ಬರೀ ವೆಜಿಟೇರಿಯನ್ಸ್ ಅಂತಾ ಕರೆಯಲ್ಲ ಒವೋ ವೆಜಿಟೇರಿಯನ್ಸ್ ಅಂತ ಕರೆಯುತ್ತಾರೆ. ಅಂದ್ರೆ ಇವರು ಮಾಂಸಹಾರ ತಿನ್ನೋದಿಲ್ಲ ಮೊಟ್ಟೆ ಮಾತ್ರ ತಿನ್ನೋರು. ಅದಕ್ಕೆ ಇವರನ್ನ ಒವೋ ವೆಜಿಟೇರಿಯನ್ಸ್ ಅಂತಾ ಕರೆಯೋದು.

ಇಂತಹ ಒವೋ ವೆಜಿಟೇರಿಯನ್ಸ್ ಒಂದು ವಿಜ್ಞಾನದ ವಾದವನ್ನ ಮುಂದಿಡ್ತಾರೆ. ಅದೇನು ಅಂದ್ರೆ ಕೋಳಿಗಳು ಇಡುವ ಎಲ್ಲಾ ಮೊಟ್ಟೆಗಳು ಮರಿ ಆಗೋದಿಲ್ಲ. ಈ ಫಾರಂಗಳಲ್ಲಿ ಇಡುವ ಮೊಟ್ಟೆಗಳಲ್ಲಿ ಎರಡು ವಿಧ ಒಂದು ಫರ್ಟಿಲೈಸ್ ಮೊಟ್ಟೆ ,ಇನ್ನೊಂದು ಅನ್ ಫರ್ಟಿಲೈಸ್ ಮೊಟ್ಟೆ . ಅಂದ್ರೆ ಮಾರುಕಟ್ಟೆಗೆ ಬರುವ ಮೊಟ್ಟೆಗಳು ಅನ್ ಫರ್ಟಿಲೈಸ್ ಮೊಟ್ಟೆ ಗಳಾಗಿರುತ್ತವೆ. ಇದರ ವ್ಯತ್ಯಾಸ ಬಿಡಿಸಿ ಹೇಳುವುದಾದರೆ.

ಒಂದು ಕೋಳಿ ಮೊಟ್ಟೆಯನ್ನ ಇಡುವ ಮೊದಲು ಹುಂಜದ ಜೊತೆ ಮಿಲನ ಆಗಿದ್ದರೆ ಆಗ ಅದು ಇಡುವ ಮೊಟ್ಟೆ ಫರ್ಟಿಲೈಸ್ ಮೊಟ್ಟೆ ಆಗುತ್ತದೆ. ಅ ಮೊಟ್ಟೆಗೆ ಕೋಳಿ ಕಾವು ಕೊಟ್ಟರೆ ಮರಿ ಹೊರಗೆ ಬರುತ್ತೆ. ಆದರೆ ಒಂದು ಕೋಳಿ (ಹೆಣ್ಣು ಹೇಟೆ)ಯೂ ಮೊಟ್ಟೆ ಇಡುವ ಮೊದಲು ಹುಂಜದ ಜೊತೆ ಮಿಲನ ಆಗಿರಲಿಲ್ಲ ವೆಂದರೂ ಆಗಲೂ ಕೂಡ ಮೊಟ್ಟೆ ಇಡುತ್ತೆ. ಆ ಕೋಳಿ ಇಡುವ ಮೊಟ್ಟೆ ಫರ್ಟಿಲೈಸ್ ಆಗಿರೋದಿಲ್ಲ ಈ ಕೋಳಿ ಎಷ್ಟೇ ಕಾವು ಕೊಟ್ಟರು ಮೊಟ್ಟೆ ಮರಿ ಆಗೋದಿಲ್ಲ. ಈ ಎರಡೂ ವ್ಯತ್ಯಾಸಗಳಿವೆ.

ಮಾರುಕಟ್ಟೆಗೆ ಬರುವಂತಹ ಮೊಟ್ಟೆಗಳು ಅನ್ ಫರ್ಟಿಲೈಸ್ ಮೊಟ್ಟೆಗಳಾಗಿರುತ್ತವೆ.ಯಾಕಂದ್ರೆ ಫಾರಂಗಳಲ್ಲಿ ಸಾಕುವ ಕೋಳಿಗಳ ಜೊತೆ ಹುಂಚಗಳನ್ನ ಬಿಡೋದಿಲ್ಲ. ಹೀಗಾಗಿ ಎಲ್ಲಾ ಮೊಟ್ಟೆಗಳು ಅನ್ ಫರ್ಟಿಲೈಸ್ ಆಗಿರುತ್ತದೆ.

ಹಾಗಾಗಿ ಇಂತಹ ಮೊಟ್ಟೆಗಳನ್ನ ತಿಂದ್ರೆ ಯಾವುದೇ ಪ್ರಾಣಿ ಹತ್ಯೆ ಶಾಪ ತಟ್ಟೋದಿಲ್ಲ. ಹೀಗಾಗಿ ಇದು ಒವೋ ವೆಜಿಟೇರಿಯನ್ಸ್ ವಾದವಾಗಿದೆ. ಆದರೆ ಇಂತಹ ಮೊಟ್ಟೆ ತಿನ್ನುವ ಸಸ್ಯಹಾರಿಗಳ ವಾದವನ್ನ ಮಾಂಸ ತಿನ್ನುವ ಮಾಂಸಹಾರಿಗಳು ಒಫ್ಪೋದಿಲ್ಲ.ಅದಕ್ಕೆ ಇವರದು ಒಂದು ಕೌಂಟರ್ ಇದೆ.

ಹಾಲು ಪ್ರಾಣಿಯ ದೇಹದಿಂದ ಬರುವುದು ಹಾಗೇ ಮೊಟ್ಟೆ ಕೂಡ ಕೋಳಿಯ ದೇಹದಿಂದ ಉತ್ಪತ್ತಿ ಮಾಡುತ್ತದೆ.ಇದು ಹೇಗೆ ಸಸ್ಯಹಾರಿ ಮೊಸರನ್ನು ಸಹ ಸಸ್ಯಹಾರಿಗಳು ಹೆಚ್ಚಾಗಿ ಇಷ್ಟ ಪಡುತ್ತಾರೆ ಇದರಲ್ಲಿ ಬ್ಯಾಕ್ಟೀರಿಯಗಳಿರುತ್ತದೆ ಇದು ಹೇಗೆ ಸಸ್ಯ ಹಾರಿ ಯಾದೀತು ಎಂಬ ವಾದವನ್ನು ಮಾಂಸಹಾರಿಗಳು ಮುಂದಿಡ್ತಾರೆ ಹಾಗಾದರೆ ನಿಮ್ಮ ಪ್ರಕಾರ ಇದರಲ್ಲಿ ಯಾವುದು ಸಸ್ಯಹಾರಿ ,ಯಾವುದು ಮಾಂಸಾಹಾರಿ ನೀವೇ ಆಲೋಚನೆ ಮಾಡಿ.

Leave a Comment

error: Content is protected !!