ಲಿವರ್ ಶುಚಿಗೊಳಿಸುವ ಜೊತೆಗೆ ಅರೋಗ್ಯ ವೃದ್ಧಿಸುವ ಮನೆಮದ್ದು

ದೇಹದಲ್ಲಿ ಆರೋಗ್ಯ ಬೇಕೆಂದರೆ ದೇಹದಲ್ಲಿ ಒಳಗಿನ ಕಿಡ್ನಿ, ಹೃದಯ, ಪಿತ್ತಜನಕಾಂಗ ಹೀಗೆ ಇನ್ನುಳಿದವುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯ ನಮ್ಮ ಕ್ಯೆಯ್ಯಲ್ಲಿದೆ ಎಂದು ಹೇಳುತ್ತಾರೆ. ಅದು ಸತ್ಯ ನಮ್ಮ ಆರೋಗ್ಯವನ್ನು
ನಾವೇ ಕಾಪಾಡಿಕೊಳ್ಳಬೇಕಿದೆ. ಇಲ್ಲಿ ನಾವು ಲಿವರ್ ನ್ನು ಒಂದು ವಾರದಲ್ಲಿ ಶುದ್ಧ ಮಾಡಿಕೊಳ್ಳುವುದನ್ನು ತಿಳಿಯೋಣ.

ಶರೀರದಲ್ಲಿನ ಅವಯವಗಳಲ್ಲಿ ಮುಖ್ಯವಾದದ್ದು ಲಿವರ್. ಲಿವರ್ ಇಲ್ಲದಿದ್ದರೆ ಶರೀರದ ಎಲ್ಲಾ ಭಾಗಗಳಿಗೆ ಅವಶ್ಯಕವಾದ ಶಕ್ತಿ ಸರಬರಾಜು ನಿಂತು ಹೋಗುತ್ತದೆ. ಅಷ್ಟೇ ಅಲ್ಲದೇ ಶರೀರದ ಎಲ್ಲಾ ಅವಯವಗಳಲ್ಲಿ ಶಕ್ತಿ ಕಳುಹಿಸುವ ರಕ್ತ ನಾಳಗಳು ವಿಷ ಪದಾರ್ಥಗಳನ್ನು ಕಳುಹಿಸುತ್ತವೆ. ಇದರಿಂದಾಗಿ ಶರೀರಕ್ಕೆ ಇನ್ಫೆಕ್ಷನ್, ವ್ಯೆರಸ್ , ಬ್ಯಾಕ್ಟೀರಿಯಾಗಳು ದಾಳಿ ನಡೆಸಿ ಕ್ರಮ ಕ್ರಮವಾಗಿ ಅವುಗಳ ಕಾರ್ಯ ನಿರ್ವಹಣೆಯನ್ನು ಕುಂಠಿತಗೊ ಳಿಸುತ್ತದೆ. ಕೊನೆಗೆ ಶರೀರದ ಎಲ್ಲಾ ಅವಯವಗಳನ್ನು ಒಂದೊಂದಾಗಿ ಅವುಗಳ ಕಾರ್ಯ ನಿರ್ವಹಣೆ ನಶಿಸಿ ಮಾನವನ ಬದುಕನ್ನು ಅಂತ್ಯಗೊಳಿಸುತ್ತದೆ.

ನಿರಂತರವಾಗಿ ನಮ್ಮ ಆಹಾರದಲ್ಲಿನ ವ್ಯರ್ಥ ಪದಾರ್ಥಗಳನ್ನು ತೊಲಗಿಸಿ ಶುದ್ಧೀಕರಣ ಮಾಡುವ ಲಿವರ್ 24 ಗಂಟೆಗಳ ಕಾಲ ಚುರುಕಾಗಿ ಆರೋಗ್ಯವಾಗಿ ಇರಲೇಬೇಕು. ನಾವು ಎಷ್ಟೇ ಜಾಗ್ರತೆ ವಹಿಸಿದದರೂ ಕೂಡ ಲಿವರ್ನಲ್ಲಿ ವಿಷ ಪದಾರ್ಥಗಳು ಶೇಖರಣೆ ಆಗಿ ಅವು ಲಿವರ್ ಕಾರ್ಯ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಪೈಬರ್ A, B, C ಮುಂತಾದ ಖಾಯಿಲೆಗಳು ಹರಡುವ ಸಾಧ್ಯತೆ ಇರುತ್ತದೆ.

ಒಣದ್ರಾಕ್ಷಿ ಮೂಲಕ ಲಿವರ್ ಶುಚಿಯಾಗಿ ಇಟ್ಟುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಹೆಚ್ಚಾಗಿ ಜಂಕ್ ಫುಡ್ ಸೇರಿಸುವವರಿಗೆ ಲಿವರ್ ನಿಧಾನವಾಗಿ ಕೆಲಸ ಮಾಡುತ್ತದೆ. ಅಂತಹವರು ಒಂದು ಕಪ್ ಒಣದ್ರಾಕ್ಷಿಗೆ ಎರಡು ಕಪ್ ನೀರನ್ನು ಹಾಕಿ ರಾತ್ರಿ ಹೊತ್ತು ನೆನೆಸಿ ಬೆಳಿಗ್ಗೆ ಎದ್ದ ಕೂಡಲೇ ಆ ನೀರನ್ನು ಶೋಧಿಸಿ ಕುಡಿಯಬೇಕು. ಹೀಗೆ ಒಂದು ವಾರಗಳ ಕಾಲ ಮಾಡುವುದರಿಂದ ಲಿವರ್ ಶುಚಿಯಾಗಿ ಆರೋಗ್ಯಕರವಾಗಿರುತ್ತದೆ. ಅಷ್ಟೇ ಅಲ್ಲ ಯಾವುದೇ ಖಾಯಿಲೆಗಳು ಹತ್ತಿರ ಸುಳಿಯುವುದೂ ಇಲ್ಲ.
ಆದ್ದರಿಂದ ನಿಮ್ಮ ಲಿವರ್ ಅನ್ನು ಒಣದ್ರಾಕ್ಷಿ ಬಳಸಿ ಆರೋಗ್ಯ ಹೆಚ್ಚಿಸಿಕೊಳ್ಳಿ.

Leave a Comment

error: Content is protected !!