ಕೆಮ್ಮು ಕಫ ನಿವಾರಿಸುವ ಜೊತೆಗೆ ದೇಹಕ್ಕೆ ಹತ್ತಾರು ಲಾಭ ನೀಡುವ ಒಣದ್ರಾಕ್ಷಿ

ದ್ರಾಕ್ಷಿ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವಲ್ಲಿ ಸಹಕಾರಿಯಾಗಿದೆ, ದ್ರಾಕ್ಷಿಯಲ್ಲಿ ಹಣ್ಣು ಹಾಗೂ ಒಣ ದ್ರಾಕ್ಷಿ ಎರಡು ಕೂಡ ಉಪಯೋಗಕಾರಿಯಾಗಿದೆ, ದೇಹಕ್ಕೆ ಬೇಕಾಗುವಂತ ವಿಟಮಿನ್ ಹಾಗೂ ಕ್ಯಾಲ್ಶಿಯಂ ಪೊಟ್ಯಾಶಿಯಂ ಅಂಶಗಳನ್ನು ದ್ರಾಕ್ಷಿಯಿಂದ ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬಹುದು, ಅಷ್ಟೇ ಅಲ್ಲದೆ ಇದರಿಂದ ಇನ್ನು ಏನೆಲ್ಲಾ ಪ್ರಯೋಜನವಿದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ.

ದ್ರಾಕ್ಷಿಯಲ್ಲಿರುವಂತ ಔಷದಿ ಗುಣಗಳು: ಹಣ್ಣು ಎಲೆ ಇವು ದ್ರಾಕ್ಷಿಯಲ್ಲಿನ ಔಷದೋಪಯೋಗಿ ಭಾಗಗಳಾಗಿವೆ, ಇನ್ನು ಒಣ ದ್ರಾಕ್ಷಿಯನ್ನು ಎಂಟು ಹತ್ತರಂತೆ ಪ್ರತಿದಿನ ಬೆಳಗ್ಗೆ ರಾತ್ರಿ ಸೇವಿಸಿದರೆ ಉಷ್ಣದಿಂದ ಉಂಟಾದ ಕೆಮ್ಮು ಗುಣವಾಗುತ್ತದೆ ಅಷ್ಟೇ ಅಲ್ಲದೆ ಒಣ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತದೆ.

ಒಣ ದ್ರಾಕ್ಷಿಯನ್ನು ಹಾಲಿನ ಜತೆಗೆ ಸೇವಿಸಿದರೆ ಬಾಯಾರಿಕೆ ಶಮವಾಗುತ್ತದೆ ಹಾಗೂ ದೇಹಕ್ಕೆ ಶಕ್ತಿ ದೊರೆಯುತ್ತದೆ. ೮ ರಿಂದ ೧೨ ಒಣ ದ್ರಾಕ್ಷಿಯನ್ನು ರಾತ್ರಿ ನೆನಸಿಟ್ಟು ಮರುದಿನ ಬೆಳಗ್ಗೆ ಆಹಾರಕ್ಕೆ ಮುನ್ನ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು ಹಾಗೂ ಬೆಳಗ್ಗೆ ಹೊತ್ತು ಮಲ ವಿಸರ್ಜನೆ ಸರಾಗವಾಗಿ ನಡೆಯುವುದು.

ಇನ್ನು ಮಹಿಳೆಯರು ನಿತ್ಯ ಆಹಾರದಲ್ಲಿ ಒಣದ್ರಾಕ್ಷಿಯನ್ನು ಬಳಸಿದರೆ ಗರ್ಭಧಾರಣೆಗೆ ಸಹಕಾರಿ, ಅಷ್ಟೇ ಅಲ್ಲದೆ ಒಣದ್ರಾಕ್ಷಿ ಮತ್ತು ಕಾಳುಮೆಣಸನ್ನು ಸಮ ಪ್ರಮಾಣದಲ್ಲಿ ಅರೆದು ಸೇವಿಸಿದರೆ ಕೆಮ್ಮು ಕಫ ಕಡಿಮೆಯಾಗುತ್ತದೆ. ಕೆಮ್ಮು ದಮ್ಮು ಕಡಿಮೆ ಮಾಡಲು ಕಬ್ಬಿಣದ ಸೌಟಿನಲ್ಲಿ ಉಪ್ಪನ್ನು ಹಾಕಿ ಬಿಸಿ ಮಾಡಿದಾಗ ಉಪ್ಪಿನ ಭಸ್ಮ ದೊರೆಯುತ್ತದೆ ಅದನ್ನು ಎರಡು ಚಿಟಿಕೆಯಸ್ತು ದ್ರಾಕ್ಷಿಯಲ್ಲಿಟ್ಟು ನುಂಗಬೇಕು ಹೀಗೆ ನಿತ್ಯ ಮಾಡಿದರೆ ಕೆಮ್ಮು ದಮ್ಮು ಕಡಿಮೆಯಾಗುತ್ತದೆ. ಇನ್ನು ೧೦ ರಿಂದ ೨೦ ರಸ್ತು ದ್ರಾಕ್ಷಿಗಳನ್ನು ಹಾಲಿನಲ್ಲಿ ಅರೆದು ಜೇನಿನ ಜತೆ ಸೇವಿಸಿದರೆ ಮೂಗಿನ ರಕ್ತ ಸ್ರಾವ ನಿಯಂತ್ರಣಕ್ಕೆ ಬರುತ್ತದೆ.

Leave a Comment

error: Content is protected !!