ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಸಾಮಾನ್ಯವಾಗಿ ನಾವು ಒಂದು ಚಿಕ್ಕ ಜ್ವರ, ಕೆಮ್ಮು,ಶೀತ ಬಂದರೆ ಸಾಕು ವೈದ್ಯರ ಬಳಿ ಹೋಗುತ್ತೇವೆ. ವೈದ್ಯರ ಸೂಚನೆಯಂತೆ ಚೀಟಿಯಲ್ಲಿ ಬರೆದ ಔಷಧಿಗಳನ್ನ ತೆಗೆದುಕೊಳ್ಳುತ್ತೇವೆ. ಇದು ಸರ್ವೇ ಸಾಮಾನ್ಯವಾದ ವಿಷಯ. ಆದರೆ ಬಹುಶಃ ಎಲ್ಲಾರಿಗೂ ಗೋತ್ತಿರೋದಿಲ್ಲ ಈ ದೇಶದಲ್ಲಿ ಅದೇಷ್ಟೋ ಅವಿದ್ಯಾವಂತರು ಮತ್ತು ತಿಳುವಳಿಕೆ ಇಲ್ಲದ ಜನರು ಜ್ವರ ಅಥವಾ ತಲೆನೋವು ಇತ್ಯಾದಿ ಕಾರಣಕ್ಕಾಗಿ ಯಾವುದೇ ವೈದ್ಯರನ್ನ ಭೇಟಿಯಾಗದೆ ಮೆಡಿಕಲ್ ಶಾಪ್ ಗಳಲ್ಲಿ ಮಾತ್ರೆಗಳನ್ನ ತೆಗೆದುಕೊಳ್ಳುತ್ತಾರೆ. ಈ ರೀತಿ ಮಾಡೋದು ಎಷ್ಟೋಂದು ದೊಡ್ಡ ತಪ್ಪು ಅಂತಾ ಗೋತ್ತಾ.

ಹೌದು ಕೆಲವೋಮ್ಮೆ ನಾವು ತೆಗೆದುಕೊಳ್ಳುವ ಮಾತ್ರೆಗಳು ನಮ್ಮ ದೇಹದ ಮೇಲೆ ವ್ಯತೀರಿಕ್ತ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಾತ್ರೆಗಳ ಪ್ಯಾಕ್ ಮೇಲೆ ಕೆಂಪು ಬಣ್ಣದ ಗೆರೆಯನ್ನ ನೋಡಿರುತ್ತೇವೆ.ಈ ಕೆಂಪು ಗೆರೆ ಯಾಕೆ ಇರುತ್ತೆ? ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಗಮನಿಸಬೇಕಾದ ಅಂಶಗಳೇನು? ಅಂತಾ ತಿಳಿದುಕೊಳ್ಳೋಣ.

ವೈದ್ಯಕೀಯ ಲೋಕ ಮತ್ತು ಔಷಧಿ ತಯಾರಿಕಾ ಕಂಪನಿಗಳು ತಾವು ತಯಾರಿಸಿ ಮಾರಾಟಮಾಡುವ ಉತ್ಪನ್ನಗಳಲ್ಲಿ ತನ್ನದೇ ಅದ ಷರತ್ತುಗಳಿರುತ್ತೇವೆ. ಮಾತ್ರೆಗಳ ಪ್ಯಾಕ್ ಮೇಲೆ ಇರುವ ಕೆಂಪು ರೇಖೆ ಏನನ್ನು ಸೂಚಿಸುತ್ತದೆ ಅಂದರೆ ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನ ತೆಗೆದುಕೊಳ್ಳಬಾರದು ಅಂತ. ಇದು ತುಂಬಾ ಜನರಿಗೆ ಗೋತ್ತೆ ಇರುವುದಿಲ್ಲ. ನಾವು ಅನಾರೋಗ್ಯದಿಂದ ಬಳಲುತ್ತಿದ್ದರೆ ತಕ್ಷಣವೇ ವೈದ್ಯರನ್ನ ಭೇಟಿ ಮಾಡಿ ಅವರು ಸೂಚಿಸುವ ಮಾತ್ರೆಗಳನ್ನ ತೆಗೆದುಕೊಳ್ಳಬೇಕಾಗುತ್ತದೆ.

ನೇರವಾಗಿ ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ತೆಗೆದುಕೊಂಡರೆ ಅವರ ಜೀವನದಲ್ಲಿ ಮಾರಕ ತೊಂದರೆಗಳಾಗಬಹುದು. ಈ ಕುರಿತು ಮಾಧ್ಯಮಗಳಲ್ಲೂ ಸಹ ಅನೇಕ ಮಾಹಿತಿ ಪ್ರಸಾರವಾಗಿದೆ ಹಾಗಾಗಿ ಮಾತ್ರೆಗಳನ್ನು ಸೂಕ್ತ ಚಿಕಿತ್ಸೆಯೊಂದಿಗೆ ವೈದ್ಯರು ಹೇಳುವ ಮಾತ್ರೆಗಳನ್ನೇ ತೆಗೆದುಕೊಳ್ಳಿ. ನಿಮ್ಮ ಸ್ನೇಹಿತರಿಗೂ ಈ ವಿಷಯವನ್ನು ಹಂಚಿಕೊಳ್ಳಿ ಇದರಿಂದ ಎಚ್ಚೆತ್ತುಕೊಳ್ಳಲಿ.

By admin

Leave a Reply

Your email address will not be published.