ಐಪಿಎಲ್ ನಲ್ಲಿ ಹೊಸ ದಾಖಲೆ ಮಾಡಿದ ಕನ್ನಡಿಗ ದೇವದತ್ತ್ ಪಡಿಕ್ಕಲ್

ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪ್ರೇಮಿಗಳಿಗೆ ಈಗಾಗಲೇ ಸಾಕಷ್ಟು ಥ್ರಿಲ್ ನೀಡಿದೆ. ಲಾಕ್ಡೌನ್ ನಿಂದಾಗಿ ಸ್ವಲ್ಪ ರಿಲೀಫ್ ನೀಡಿದ ಐಪಿಎಲ್ ಟ್ವೆಂಟಿ-20 ಯಲ್ಲಿ ಪ್ರತಿಯೊಂದು ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದೆ ಎನ್ನುಬಹುದು. ಅದರಲ್ಲೂ ಆರ್ಸಿಬಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಈ ಬಾರಿ ಕಪ್ ನಮ್ಮದೇ ಎನ್ನುವ ಭರವಸೆಯನ್ನು ನೀಡಿದ್ದಾರೆ. ಈ ಬಾರಿ ಟಿ-ಟ್ವೆಂಟಿಯಲ್ಲಿ ಆರ್ಸಿಬಿ ತಂಡದಲ್ಲಿ ಪ್ರಮುಖ ಆಕರ್ಷಣೆ ಎಂದರೆ ದೇವದತ್ ಪಡಿಕ್ಕಲ್. ಐಪಿಎಲ್ ಟಿ-ಟ್ವೆಂಟಿ ಮೂಲಕ ಐಪಿಎಲ್ ಸೇರಿಕೊಂಡು ಪಾದಾರ್ಪಣೆ ಮಾಡಿದ ದೇವದತ್ ಪಡಿಕಲ್ ಆರಂಭದಲ್ಲಿಯೇ ಅರ್ಧಶತಕ ಬಾರಿಸುವುದರ ಮೂಲಕ ಮೊದಲ ಆಟದಲ್ಲಿಯೇ ಅರ್ಧ ಶತಕ ಬಾರಿಸಿ ತಾನೊಬ್ಬ ಉತ್ತಮ ಆಟಗಾರ ಉತ್ತಮ ಬ್ಯಾಟ್ಸ್ಮನ್ ಎನ್ನುವ ಭರವಸೆಯನ್ನು ಆರ್ಸಿಬಿ ತಂಡದಲ್ಲಿ ಹಾಗೂ ಜನರಲ್ಲಿ ಭರವಸೆ ಮೂಡಿಸಿದ್ದಾರೆ.

ದೇವದತ್ ಪಡಿಕಲ್ ತಮ್ಮ ಎರಡನೇ ಪಂದ್ಯದಲ್ಲಿ ಒಂದು ರನ್ ಗೇ ಔಟ್ ಆಗಿದ್ದರು ಆದರೆ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 54 ರನ್ ಗಳಿಸುವ ಮೂಲಕ ಮೂರನೇ ಪಂದ್ಯದಲ್ಲಿ ಎರಡನೇ ಅರ್ಧಶತಕವನ್ನು ಪಡೆದುಕೊಂಡರು ದೇವದತ್ತ ಪಡಿಕಲ್. ರಾಜಸ್ತಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೆ ಅರ್ಧಶತಕವನ್ನು ಬಾರಿಸುವ ಮೂಲಕ ತಂಡದ ಗೆಲುವಿಗೆ ದೇವದತ್ತ ಪಡಿಕಲ್ ಕಾರಣವಾಗಿದ್ದರು. ಈ ಮೂಲಕ ಐಪಿಎಲ್ ನಲ್ಲಿ ಆಟ ಆಡಿದ ಆಟಗಾರರಲ್ಲಿ ನಾಲ್ಕು ಪಂದ್ಯಗಳಲ್ಲಿ ಆಟವಾಡಿ ಮೂರು ಪಂದ್ಯಗಳಲ್ಲಿ ಸತತವಾಗಿ ಅರ್ಧ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗಾಗಲೇ ದೇವದತ್ ಪಡಿಕಲ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಯು ಮುಸ್ತಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿ ಯಲ್ಲೂ ತಾವು ಆಡಿದ ಮೊದಲ ಪಂದ್ಯದಲ್ಲಿ ಕೂಡಾ ಅರ್ಧಶತಕ ರನ್ ಗಳಿಸಿ ದಾಖಲೆ ಬರೆದಿದ್ದಾರೆ.

ಇದೀಗ ಈ ಬಾರಿ ಐಪಿಎಲ್ ನಲ್ಲಿ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಶತಕ ಬಾರಿಸುವ ಮೂಲಕ ಉತ್ತಮ ಆಟಗಾರನಾಗಿ ದೇವದತ್ ಪಡಿಕಲ್ ಹೊರಹೊಮ್ಮಿದ್ದಾರೆ. ಈಗಾಗಲೇ ಪಡಿಕಲ್ ತನ್ನ ಬ್ಯಾಟಿಂಗ್ ಶೈಲಿಯ ಮೂಲಕ ಎಲ್ಲರ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಓಪನಿಂಗ್ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದು ಕ್ರಿಕೆಟ್ ತಜ್ಞರ ಅಭಿಪ್ರಾಯವಾಗಿದೆ. ಈ ರೀತಿಯಾಗಿ ಐಪಿಎಲ್ನಲ್ಲಿ ಸಾಲುಸಾಲಾಗಿ ದಾಖಲೆಗಳನ್ನು ಬರೆಯುತ್ತಿದ್ದಾರೆ ದೇವದತ್ ಪಡಿಕಲ್.

Leave a Comment

error: Content is protected !!